This is the title of the web page
This is the title of the web page

Please assign a menu to the primary menu location under menu

Local News

ಒಂಬತ್ತನೇ ತರಗತಿ ಪುಸ್ತಕ ಬದಲಿಸುವಂತೆ ಸ್ವಾಮಿಜಿಗಳ ಪ್ರತಿಭಟನೆ


ಬೆಳಗಾವಿ  ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ರಾಷ್ಟ್ರೀಯ ಬಸವ ದಳ ಹಾಗೂ ಲಿಂಗಾಯತ ಧರ್ಮ ಮಹಾಸಭಾ ಬೆಳಗಾವಿ    ವತಿಯಿಂದ, ಒಂಬತ್ತನೇ ತರಗತಿ ಪುಸ್ತಕ ಬದಲಿಸಬೇಕೆಂದು ಪ್ರತಿಭಟನೆ ಮಾಡಲಾಯಿತು.

ಈಗ ಹೊಸದಾಗಿ ಪ್ರಕಟಿಸಲಾದ  ಪುಸ್ತಕದಲ್ಲಿ ಲಿಂಗಾಯತ ಧರ್ಮ ಹಾಗೂ ಧರ್ಮಗುರು ಬಸವಣ್ಣನವರಿಗೆ,  ಕುವೆಂಪು ಅವರಿಗೆ ಅಪಮಾನ ಮಾಡಲಾಗಿದೆ, ಇಡೀ ಇತಿಹಾಸಕ್ಕೆ ಅವಮಾನ ಮಾಡಲಾಗಿದೆ ಎಂದು ಪ್ರತಿಭಟನಾಕಾರರ ಆರೋಪವಾಗಿತ್ತು.

ಈ ಸಂದರ್ಭದಲ್ಲಿ  ಬೆಳಗಾವಿಯ ವಿಶ್ವಗುರು ಬಸವ ಮಂಟಪದ ಸ್ವಾಮಿಗಳಾದ ಬಸವ ಪ್ರಕಾಶ ಸ್ವಾಮಿಗಳು ಮಾತನಾಡಿ, ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥ ಅವರು ಇತಿಹಾಸಕ್ಕೆ ದೂರವಾಗಿರುವ, ಕುವೆಂಪು, ಬಸವಣ್ಣನವರಿಗೆ ಅಪಮಾನ ಮಾಡಿದ್ದಾರೆ, ಭಾರತೀಯ ಸಂಸ್ಕೃತಿಗೆ, ವಿಶ್ವಧರ್ಮಕ್ಕೆ ಅವಮಾನ ಮಾಡಿದ್ದಾರೆ ಹನ್ನೆರಡನೆಯ ಶತಮಾನದಲ್ಲೇ ಸಮಾನತೆ ಸಾರಿದ ಬಸವಣ್ಣ ಇಡೀ ಜಗತ್ತಿನ ಇತಿಹಾಸ ಪುಟದಲ್ಲಿ ದಾಖಲಾಗಿದೆ.

ಚಕ್ರತೀರ್ಥ ಅನ್ನೋ ದುಷ್ಕರ್ಮಿ, ಇಡೀ ಕನ್ನಡ ನಾಡಿಗೆ ಅವಮಾನ ಮಾಡಿದ್ದಾರೆ.. ಬಸವಣ್ಣನವರು ವೀರಶೈವ ಪಂತವನ್ನು ಸ್ವೀಕಾರ ಮಾಡಿದರು, ಲಿಂಗದೀಕ್ಷೆ ಸ್ವೀಕಾರ ಮಾಡಿದರು, ಮತ್ತು ಪೇಜಾವರ ಮಠಗಳ ಪರಂಪರೆಯಲ್ಲಿ ಅವರಿದ್ರು, ಅಷ್ಟಮಠಗಳ ಪರಂಪರೆಯಲ್ಲಿ ಇದ್ರೂ ಅಂತಾ ಉಲ್ಲೇಕ ಮಾಡಿದ್ದಾನೆ ಚಕ್ರತೀರ್ಥ.

ಇದು ಇತಿಹಾಸಕ್ಕೆ ವಿರೋಧವಿದ್ದರೂ, ಇದಕ್ಕೆ ನಮ್ಮ ರಾಜಕಾರಣಿಗಳು ಪುಷ್ಟಿ ಕೊಡ್ತಿದ್ದಾರೆ.. ಕೆಲವು ಜಾತಿವಾದಿಗಳು, ಕೋಮುವಾದಿಗಳು ಮುಖ್ಯಮಂತ್ರಿ ಹಾಗೂ ಇತರ ಸಚಿವರನ್ನು ಕೈಗೊಂಬೆ ಆಗಿ ಆಡಿಸ್ತಾ ಇದಾರೆ.. ಇದು ಹೀಗೆ ಮುಂದುವರೆದರೆ ಬಹಳ ಅಸಹ್ಯಕರ ಮತ್ತು ಸರ್ಕಾರಕ್ಕೆ ಶೋಭೆ ತರುವಂಥ ವಿಷಯವಲ್ಲ ಎಂದರು.

ರೋಹಿತ್ ಚಕ್ರತೀರ್ಥ ಅವರನ್ನು ಕೂಡಲೇ ಸಮಿತಿಯಿಂದ ಕೈಬಿಡಬೇಕು, ಪುಸ್ತಕಗಳ ಹಂಚಿಕೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ನಮ್ಮ ಮನವಿಗೆ ಸ್ಪಂದಿಸದಿದ್ದರೆ, ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ,, ವಿಧಾನಸೌಧ ಮುತ್ತಿಗೆ ಹಾಕಬೇಕಾಗುತ್ತದೆ, ಬೇಕಾದರೆ ಬಸವಣ್ಣನವರನ್ನು ಪುಸ್ತಕದಲ್ಲಿ ಸೇರಿಸದೆ ಹೋದರು ನಡೆಯುತ್ತೆ, ಆದರೆ ಅವಮಾನ ಮಾಡಬೇಡಿ ಎಂದರು.

ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಕೊಡ್ತಾ ಇದೀವಿ,, ಒಂದು ವೇಳೆ ಸರಿಪಡಿಸಿಕೊಳ್ಳದೆ ಹೋದರೆ,  ಕಾನೂನು, ಸಂವಿಧಾನದ ಮೂಲಕ ಹೋರಾಟ ಮಾಡುತ್ತೇವೆ ಎಂದರು.


Gadi Kannadiga

Leave a Reply