This is the title of the web page
This is the title of the web page

Please assign a menu to the primary menu location under menu

State

ಗಿಣಿಗೇರಾ: ಸಿಮೆಂಟ್ ಕಾರ್ಖಾನೆಯಲ್ಲಿ ಸ್ವೀಪ್ ಕಾರ್ಯಕ್ರಮ ಎಲ್ಲಾ ನೌಕರರು, ಕಾರ್ಮಿಕರು ಕಡ್ಡಾಯ ಮತದಾನ ಮಾಡಿ: ದುಂಡಪ್ಪ ತುರಾದಿ


ಕೊಪ್ಪಳ ಏಪ್ರಿಲ್ ೧೩ : ಕೊಪ್ಪಳ ತಾಲ್ಲೂಕಿನ ಗಿಣಿಗೇರಾ ಗ್ರಾಮದ ಹತ್ತಿರವಿರುವ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆ ನೌಕರರು ಮತ್ತು ಕಾರ್ಮಿಕರಿಗೆ ಕಡ್ಡಾಯ ಹಾಗೂ ನೈತಿಕ ಮತದಾನಕ್ಕೆ ಜಾಗೃತಿ ಮೂಡಿಸಲು ತಾಲೂಕ ಸ್ವೀಪ್ ಸಮಿತಿ ಮತ್ತು ಗಿಣಿಗೇರಾ ಗ್ರಾಮ ಪಂಚಾಯತಿಯಿಂದ ಏಪ್ರಿಲ್ ೧೩ರಂದು ಸ್ವೀಪ್ ಕಾರ್ಯಕ್ರಮ ಜರುಗಿತು.
ಕೊಪ್ಪಳ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾ.ಪಂ ಇಒ ದುಂಡಪ್ಪ ತುರಾದಿ ಅವರು ಮಾತನಾಡಿ, ಮೇ ೧೦ರಂದು ವಿಧಾನಸಭಾ ಚುನಾವಣೆ ಜರುಗಲಿದ್ದು, ನೌಕರರು ಮತ್ತು ಕಾರ್ಮಿಕರು ಕಡ್ಡಾಯವಾಗಿ ಮತದಾನ ಮಾಡಬೇಕು. ಗಿಣಿಗೇರಾ ಗ್ರಾಮದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಪ್ರಯುಕ್ತ ಸ್ವೀಪ್ ಕಾರ್ಯಕ್ರಮದ ಮೂಲಕ ಮತದಾನದ ಪ್ರಮಾಣ ಹೆಚ್ಚಿಸಲು ನಾನಾ ರೀತಿಯ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮತದಾನ ನಮಗೆ ಸಂವಿಧಾನ ಕಲ್ಪಿಸಿರುವ ವಿಶೇಷ ಹಾಗೂ ಅಮೂಲ್ಯ ಹಕ್ಕಾಗಿದ್ದು, ಅದನ್ನು ವಿವೇಚನಾಯುಕ್ತವಾಗಿ ಅರ್ಹರಿಗೆ ಕಡ್ಡಾಯವಾಗಿ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕೆಂದು ತಿಳಿಸಿದರು.
೧೮ ವರ್ಷ ತುಂಬಿದ ಪ್ರತಿಯೊಬ್ಬರೂ ಕಡ್ಡಾಯ ಮತ್ತು ನೈತಿಕ ಹಾಗೂ ವಿವೇಚನಾಯುಕ್ತವಾಗಿ ಮತಚಲಾಯಿಸಬೇಕು. ಮತದಾನ ಮಾಡಲು ಮತದಾನದಿನದಂದು ಎಲ್ಲಾ ನೌಕರರು ಹಾಗೂ ಕಂಪನಿಯವರಿಗೆ ಕೆಲಸದಿಂದ ವಿನಾಯಿತಿ ನೀಡಿ ಚುನಾವಣಾ ಆಯೋಗ ಆದೇಶಿಸಿದ್ದು, ಮತದಾನದಿಂದ ಯಾರು ಹೊರಗುಳಿಯಬಾರದು ಎಂದರು.
ಪ್ರತಿಜ್ಞಾವಿಧಿ: ಕಡ್ಡಾಯ ಮತ್ತು ನೈತಿಕ ಮತದಾನದ ಕುರಿತು ಪ್ರತಿಜ್ಞಾ ವಿದಿಯನ್ನು ತಾಲೂಕ ಸ್ವೀಪ್ ನೋಡಲ್ ಅಧಿಕಾರಿ ಹನಮಂತಪ್ಪ ಎಚ್ ಅವರು ಬೋಧಿಸಿದರು.
ಅಣುಕು ಮತದಾನ, ವಿಶೇಷ ಜಾಗೃತಿ: ಕಾರ್ಖಾನೆ ಆವರಣದಲ್ಲಿ ಇವಿಎಂ, ವಿವಿ ಪ್ಯಾಟ್ ಮೂಲಕ ನೌಕರರು ಮತ್ತು ಕಾರ್ಮಿಕರು ಮತದಾನ ಮಾಡುವ ಕುರಿತು ಮಾಹಿತಿಯನ್ನು ಪಡೆದು ಖುದ್ದಾಗಿ ಅಣುಕು ಮತದಾನ ಮಾಡಿ ಖುಷಿಪಟ್ಟರು. ೧೦೦ ಫಿಟ್ ಉದ್ದದ ವಿವಿಧ ಮಾಹಿತಿಯುಳ್ಳ ಬ್ಯಾನರ್ ಮೂಲಕ ಮತದಾನ ಜಾಗೃತಿ ಮೂಡಿಸಿದ್ದು, ವಿಶೇಷವಾಗಿತ್ತು.
ಈ ಕಾರ್ಯಕ್ರಮದಲ್ಲಿ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷರಾದ ದತ್ತಾತ್ರೇಯ ಮೋಠೆ, ಸಹಾಯಕ ವ್ಯವಸ್ಥಾಪಕ ಮುಖ್ಯಸ್ಥ ಫ್ರಭು ಕೊಪ್ಪದ, ಕೊಪ್ಪಳ ತಾಲೂಕ ಪಂಚಾಯತಿಯ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ್ ಎಚ್., ತಾಲೂಕ ಯೋಜನಾಧಿಕಾರಿ ರಾಜೇಸಾಬ ನದಾಫ್, ಗ್ರಾ.ಪಂ ಪಿಡಿಒ ಮಂಜುಳಾ ಹೂಗಾರ, ಎಸ್.ಬಿ.ಎಂ ಸಮಾಲೋಚಕಿ ಬಸಮ್ಮ ಹುಡೇದ, ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಲೂಕ ಸ್ವೀಪ್ ತಂಡದ ಸದಸ್ಯರಾದ ಬಸವರಾಜ ಬಳಿಗಾರ, ಪೂರ್ಣೆಂದ್ರಸ್ವಾಮಿ, ಕಾರ್ಯದರ್ಶಿ ಮಂಜುನಾಥ ಅಂಗಡಿ, ಕರವಸೂಲಿಗಾರ ಈಶ್ವರಯ್ಯ ಪೋಲಿಸ್ ಪಾಟೀಲ್, ಸಿಬ್ಬಂದಿಗಳಾದ ಡಿಇಒ ರಾಜಭಕ್ಷಿ, ರಾಜು ಸೇರಿದಂತೆ ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತ ಸಿಬ್ಬಂದಿಗಳು ಹಾಜರಿದ್ದರು.


Leave a Reply