This is the title of the web page
This is the title of the web page

Please assign a menu to the primary menu location under menu

Local News

ಉಚಿತ ಆರೋಗ್ಯ ತಪಾಸನಾ ಶಿಬಿರದ ಸದುಪಯೋಗ ಪಡೆದುಕೊಳ್ಳಿ: ಶಾಸಕ ಅನಿಲ್ ಬೆನಕೆ


ಬೆಳಗಾವಿ: ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಕೆಎಲ್ಇ ಆಸ್ಪತ್ರೆ ಅನಿಲ್ ಫೌಂಡೇಶನ್ ನಿಂದ ಡಾ. ಕೋರೆ ಅವರ ಸಹಯೋಗದಲ್ಲಿ 14 ಕಡೆಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಇದರ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಶಾಸಕ ಅನಿಲ್ ಬೆನಕೆ ಹೇಳಿದರು.

ಅವರು ಶನಿವಾರ ಕೆಎಲ್ಇ ವಿಶ್ವ ವಿದ್ಯಾಲಯ, ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ, ಜೆ.ಎನ್. ಮೆಡಿಕಲ್ ಕಾಲೇಜು, ಅನಿಲ ಬೆನಕೆ ಫೌಂಡೇಶನ್ ಮತ್ತು ಶಾಸಕ ಅನಿಲ್ ಬೆನಕೆ ಸಂಯುಕ್ತ ಆಶ್ರದಲ್ಲಿ ಶನಿವಾರ ರುಕ್ಮಿಣಿ ನಗರದ ಸರಕಾರಿ ಶಾಲೆಯಲ್ಲಿ ಸಾರ್ವಜನಿಕರಿಗಾಗಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ಸಾರ್ವಜನಿಕರಿಗೆ ಉಚಿತವಾಗಿ ಚಿಕಿತ್ಸೆ ಹಾಗೂ ಔಷಧಿ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಡಾ. ಪ್ರಭಾಕರ ಕೋರೆ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಅವರು ತಮ್ಮ ವೈದ್ಯಕೀಯ ತಂಡವನ್ನು ನಮ್ಮ ಕ್ಷೇತ್ರಕ್ಕೆ ಕಳುಹಿಸಿ ಕೊಟ್ಟಿದೆ ಕೊಟ್ಟಿದೆ ಎಂದರು.

ಆಯುಷ್ ಮಾನ್ ಕಾಡ್೯ ಯೋಜನೆಯಲ್ಲಿ ದೊಡ್ಡ ದೊಡ್ಡ ಕಾಯಿಲೆ ಇದ್ದರೂ ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು.

ಉಚಿತ ಆರೋಗ್ಯ ತಪಾಸಣಾ ಶಿಬಿರದ ಲಾಭವನ್ನು ರುಕ್ಮಿಣಿ ‌ನಗರದ ಸುತ್ತಮುತ್ತಲಿನ ಸಾರ್ವಜನಿಕರು ಪಡೆದುಕೊಂಡರು.

ಜನರ ಸಂಕಷ್ಟಗಳಿಗೆ ಮಿಡಿಯುವ ಜೊತೆಗೆ ಶಾಸಕ ಅನಿಲ್ ಬೆನಕೆ ಅವರು ತಮ್ಮ ಕ್ಷೇತ್ರದ ಜನರು ಆರೋಗ್ಯದಿಂದ ಇರಬೇಕು ಎನ್ನುವ ಉದ್ದೇಶದಿಂದ ಉಚಿತ ಆರೋಗ್ಯ ತಪಾಸಣಾ ‌ಶಿಬಿರ ಆಯೋಜಿಸಿ ಕ್ಷೇತ್ರದ ಜನರ ಮನದಲ್ಲಿ ಹಸಿರಾಗಿ ಉಳಿದಿದ್ದಾರೆ ಎಂದು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗಿಯಾದ ಸುಮಿತ್ರಾ ಕಾಳೆ ಹೇಳಿದರು.

ನಗರ ಸದಸ್ಯರಾದ ಅಫಜಲ್ ಖಾನ ಪಠಾಣ, ರಾಜು ಡೋಣಿ, ಶ್ರೇಯಸ್ಸ ನಾಕಾಡಿ, ಲಕ್ಷ್ಮೀ ನಾಯಕ, ನಗರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ, ರುಕ್ಮಿಣಿ ನಗರ ಸರಕಾರಿ ಶಾಲೆಯ ಪ್ರಾಚಾರ್ಯ ಆರ್.ಎಚ್.ಅಳವಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Gadi Kannadiga

Leave a Reply