This is the title of the web page
This is the title of the web page

Please assign a menu to the primary menu location under menu

Local News

ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಸದುಪಯೋಗ ಪಡೆದುಕೊಳ್ಳಿ : ಶಾಸಕ ಅನಿಲ ಬೆನಕೆ


ಬೆಳಗಾವಿ : ಇಂದು ವಿಶ್ವವೈದ್ಯರ ದಿನಾಚರಣೆ ನಿಮಿತ್ಯ ಕೆ.ಎಲ್.ಇ ವಿಶ್ವ ವಿದ್ಯಾಲಯ ಡಾ. ಪ್ರಭಾಕರ ಕೋರೆ ಹಾಗೂ ವೈಧ್ಯಕೀಯ ಸಂಶೋಧನಾ ಹಾಗೂ ಅನಿಲ ಬೆನಕೆ ಫೌಂಡೇಶನ ಆಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ನಗರದ ಚವ್ವಾಟ ಗಲ್ಲಿಯ ಜಾಲಗಾರ ಮಾರುತಿ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಶಾಸಕ ಅನಿಲ ಬೆನಕೆ ಅವರು ಎಲ್ಲ ವೈಧ್ಯರುಗಳಿಗೆ ಗುಲಾಬಿ ನೀಡಿ ವೈದ್ಯರ ದಿನಾಚರಣೆಯ ಶುಭಾಶಯಗಳನ್ನು ಕೋರಿದ ಅವರು ಉಚಿತ ಆರೋಗ್ಯ ಎಲ್ಲಾ ವರ್ಗದ ಜನರಿಗೂ ಸಿಗಬೆಕು ಎಂಬ ದೃಷ್ಟಿಯಿಂದಾಗಿ ಬೆನಕೆ ಫೌಂಡೇಶನ ವತಿಯಿಂದ ನಾವು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಪ್ರತಿವಾರ ಒಂದು ದಿನ ಉಚಿತ ಶಿಬಿರ ನಡೆಯಲಿದೆ. ಈಗಾಗಲೇ ಇದು ಎರಡನೆಯ ಶಿಬಿರವಾಗಿದೆ ಎಂದು ತಿಳಿಸಿದರು. ಎಲ್ಲರೂ ಸದುಪಯೋಗ ಪಡೆದು ಮಳೆಗಾಲದ ಈ ಸಂದರ್ಭದಲ್ಲಿ ಎಲ್ಲರೂ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಶಿಬಿರದಲ್ಲಿ ೩೦ ರಿಂದ ೬೦ರ ಮೇಲಿನ ವಯಸ್ಕರರು ತಪಾಸಣಾ ಕೇಂದ್ರದಲ್ಲಿ ಉಚಿತ ತಪಾಸಣೆ ಮಾಡಿಕೊಂಡರು. ಕೆ.ಎಲ್.ಇ ಸಂಸ್ಥೆಯ ಹೃದಯ ತಜ್ಞರು, ದಂತ ಚಿಕಿತ್ಸಕರು ಮತ್ತು ಆಯುರ್ವೇದ ವೈದ್ಯರ ತಂಡವು ತಪಾಸಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Gadi Kannadiga

Leave a Reply