ಯರಗಟ್ಟಿ : ಸಮೀಪದ ತಲ್ಲೂರ ಗ್ರಾಮ ಪಂಚಾಯತ ೨ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗ್ರಾಪಂ ಸಭಾ ಭವನದಲ್ಲಿ ಶುಕ್ರವಾರ ಜರುಗಿದ ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ ಬೆಂಬಲಿತ ಕವಿತಾ ಬಾಲರಡ್ಡಿ, ಅಧ್ಯಕ್ಷರಾಗಿ ಹಾಗೂ ಶಾಂತವ್ವ ಉಪ್ಪಾರ, ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣೆ ಅಧಿಕಾರಿ ತಾಲೂಕ ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ಘೋಷಣೆ ಮಾಡಿದರು.
ಮುಖಂಡ ವಿಕ್ರಮ ದೇಸಾಯಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುವಂತೆ ಸಲಹೆ ನೀಡಿದರು. ವಿಜೇತರ ಬೆಂಬಲಿಗರು ಗುಲಾಲ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಪಿಡಿಒ ಎ.ಬಿ.ಬಂಗಾರಿ, ಕಾರ್ಯದರ್ಶಿ ಸತೀಶ ಬಡಿಗೇರ, ಸದಸ್ಯರು ಶಿವಾನಂದ ಮಲಕನ್ನವರ, ಶಶಿಧರ ತಳವಾರ, ಹನಮಂತಪ್ಪ ತಳವಾರ, ಶೆಟ್ಟೆಪ್ಪ ಮಾದರ, ರುಕ್ಮಿಣಿ ನಾಯ್ಕರ, ಕಮಲವ್ವ ಶಿವಪೂಜಿ, ಶಿವಕ್ಕ ನಡುವಿನಮನಿ, ಶ್ರೀದೇವಿ ಚಿಕಾಕಿ, ಫಾತಿಮಾ ಕುದರಿ, ಸರಸ್ವತಿ ಹಮ್ಮಿಣಿ, ಗಂಗವ್ವ ವನ್ನೂರ, ಮುಖಂಡ ವೆಂಕಣ್ಣ ಯರಡ್ಡಿ, ವೆಂಕಪ್ಪ ಕಮಕೇರಿ, ರಾಮಚಂದ್ರಪ್ಪ ಯರಡ್ಡಿ, ಮುತ್ತನಗೌಡ ನಾಯ್ಕರ, ಈರಪ್ಪ ಅರೆಬೆಂಚಿ, ಮಹಾಂತೇಶ ಉಪ್ಪಿನ, ಜಗದೀಶ ಹೊಸಮಠ, ಸುಭಾನಿ ಕುದರಿ ಹಾಗೂ ಕಾರ್ಯಕರ್ತತರು ಮತ್ತಿತರು ಇದ್ದರು.
Gadi Kannadiga > Local News > ತಲ್ಲೂರ ಗ್ರಾಮ ಪಂಚಾಯತ ೨ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ
ತಲ್ಲೂರ ಗ್ರಾಮ ಪಂಚಾಯತ ೨ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ
Suresh29/07/2023
posted on
