This is the title of the web page
This is the title of the web page

Please assign a menu to the primary menu location under menu

Local News

ತಾಲೂಕು ಮಟ್ಟದ ಉಚಿತ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗಿತ್ತು


ಅಥಣಿ : ಸ್ಥಳೀಯ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಏ .30 ರಂದು ತಾಲೂಕು ಮಟ್ಟದ ಬೃಹತ್ ಉಚಿತ ಆರೋಗ್ಯ ತಪಾಸಣೆ ಮೇಳವು ಯಶಸ್ವಿಯಾಗಿ ಜರುಗಿತು.

ರಾಷ್ಟ್ರೀಯ ಆರೋಗ್ಯ ಅಭಿಯಾನ , ಜಿಲ್ಲಾಡಳಿತ , ಜಿಪಂ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾ ಆಯುಷ್ ಇಲಾಖೆ , ತಾಲೂಕು ಆಡಳಿತ , ತಾಪಂ , ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಸಾರ್ವಜನಿಕ ಆಸ್ಪತ್ರೆ ಅಥಣಿ ಇವರ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಪರಮ ಪೂಜ್ಯ ಶ್ರೀ ಶಿವಬಸವ ಮಹಾಸ್ವಾಮಿಗಳು ಗಚ್ಚಿನಮಠ ಅಥಣಿ ಹಾಗೂ ಕಾರ್ಯಕ್ರಮದ ಅಧ್ಯಕ್ಷ ವಹಿಸಿದ ಅಥಣಿ ಶಾಸಕರು ಮಹೇಶ್ ಕುಮಠಳ್ಳಿ ಅವರು ಸಸಿಗೆ ನಿರು ಹಾಗೂ ರೇಬಿನ ಕಟ್ಟ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಶಿಬಿರದಲ್ಲಿ ಹೃದಯ ತಜ್ಞರು , ಕ್ಯಾನ್ಸರ್ ರೋಗ ತಜ್ಞರು , ಸ್ತ್ರೀ ರೋಗ ತಜ್ಞರು , ಮಾನಸಿಕ ರೋಗ ತಜ್ಞರು , ಮಕ್ಕಳ ತಜ್ಞರು , ಶಸ್ತ್ರಚಿಕಿತ್ಸಾ ತಜ್ಞರು , ಎಲುವು ಮತ್ತು ಕೀಲುಗಳ ತಜ್ಞರು , ಕಿವಿ , ಮೂಗು ಮತ್ತು ಗoಟಲು ತಜ್ಞರು , ನೇತ್ರ ತಜ್ಞರು , ವೈದ್ಯಕೀಯ ತಜ್ಞರು ,ಚರ್ಮ ರೋಗ ತಜ್ಞರು , ದಂತ ವೈದ್ಯರು , ಭಾರತೀಯ ಆಯುಷ್ ವೈದ್ಯ ಪದ್ಧತಿಯ ಸೇವಾ ತಜ್ಞರು ಭಾಗವಹಿಸಲಿದ್ದರು
.
ಈ ಮೇಳದಲ್ಲಿ ಉಚಿತ ಪ್ರಯೋಗಾಲಯ ಪರೀಕ್ಷೆ , ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ , ಉಚಿತ ಔಷಧ ವಿತರಣೆ , ಇ – ಸಂಜೀವಿನಿ ಮೂಲಕ ತಜ್ಞ ವೈದ್ಯರ ಸಂಪರ್ಕ , ಕ್ಷಯ ರೋಗ ಪರೀಕ್ಷೆ , ಸಕ್ಕರೆ ಕಾಯಿಲೆ , ರಕ್ತದೊತ್ತಡ , ಕ್ಯಾನ್ಸರ್ ಪರೀಕ್ಷೆ , ಯೋಗ ಮತ್ತು ಧ್ಯಾನ , ನೇತ್ರದಾನ ನೋಂದಣಿ ಜನರು ಚಿಕಿತ್ಸೆ ಗಾಗಿ
ಪಟ್ಟಣದ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಆರೋಗ್ಯ ಮೇಳದ ಸದುಪಯೋಗ ಪಡೆದುಕೊಂಡರು.


Gadi Kannadiga

Leave a Reply