This is the title of the web page
This is the title of the web page

Please assign a menu to the primary menu location under menu

State

ತಾಲೂಕು ಮಟ್ಟದ ವಿಶ್ವ ರೇಬಿಸ್ ದಿನಾಚರಣೆ ರೇಬಿಸ್ ರೋಗದ ವಿರುದ್ಧ ಲಸಿಕೆ ಹಾಕಿಸಿ


ಗದಗ ಸೆಪ್ಟೆಂಬರ್ ೨೮: ಗದಗ ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ ,ಜಿಲ್ಲಾ ಐ.ಇ.ಸಿ ವಿಭಾಗ, ತಾಲೂಕ ಆಡಳಿತ, ತಾಲೂಕ ಪಂಚಾಯತಿ, ತಾಲೂಕಾ ಆಸ್ಪತ್ರೆ ಮುಂಡರಗಿ, ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಮುಂಡರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಬುಧವಾರದಂದು ರೇಬಿಸ್ ತಾಲೂಕು ಮಟ್ಟದ ವಿಶ್ವ ರೇಬಿಸ್ ದಿನಾಚರಣೆಯನ್ನು ಮುಂಡರಗಿ ತಾಲೂಕಾ ಆಸ್ಪತ್ರಯಲ್ಲಿ ಹಮ್ಮಿಕೊಳ್ಳಲಾಯಿತು.
ಮುಂಡರಗಿ ಪುರಸಭೆ ಅಧ್ಯಕ್ಷರಾದ ಶ್ರೀಮತಿ ಕವಿತಾ ಅಂದಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಾಯಿ ಕಚ್ಚಿದಾಗ ಗಾಯಕ್ಕೆ ಮಣ್ಣು, ವಿಳೆದೆಲೆ, ಅರಿಶಿಣ, ಸುಣ್ಣ, ಎಣ್ಣೆಯಂತಹ ವಸ್ತುಗಳನ್ನು ಹಾಕದೇ ಅವೈಜ್ಞಾನಿಕವಾಗಿ ಚಿಕಿತ್ಸೆ ಪಡೆಯದೇ ವೈದ್ಯರ ಸಲಹ ಮೇರೆಗೆ ಚಿಕಿತ್ಸೆ ಪಡೆಯಬೇಕು. ರೇಬಿಸ್ ರೋಗದ ವಿರುದ್ಧ ಲಸಿಕೆ ಹಾಕಿಸಬೇಕೆಂದು ಹೇಳಿದರು.
ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಎಸ್.ಎಸ್.ಸಜ್ಜನರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ರೇಬಿಸ್ ರೋಗವು ಇದು ಒಂದು ಮಾರಾಣಾಂತಿಕ ಕಾಯಿಲೆಯಾಗಿದ್ದು, ರೇಬಿಸ್ ರೋಗದ ವಿರುದ್ದ ಲಸಿಕೆ ಕಂಡು ಹಿಡಿದ ಮಹಾ ವಿಜ್ಞಾನಿ ಲೂಯಿಸ್ ಪಾಶ್ಚರ್ ಇವರ ಪುಣ್ಯತಿಥಿಯ ಅಂಗವಾಗಿ ಮತ್ತು ೨೦೩೦ ರಂದು ರೇಬಿಸ್ ಮುಕ್ತ ಭಾರತ ದೇಶ ಮಾಡುವುದರ ಅಂಗವಾಗಿ ಸಪ್ಟಂಬರ-೨೮ ರಂದು ವಿಶ್ವ ರೇಬಿಸ್ ದಿನಾಚರಣೆ ಆಚರಣೆ ಮಾಡಲಾಗುತ್ತದೆಂದು ಹೇಳಿದರು.
ಮುಂಡರಗಿ ತಾಲೂಕಾ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳಾದ ಡಾ|| ಲಕ್ಷö್ಮಣ ಪೂಜಾರ ಮಾತನಾಡಿ ರೇಬಿಸ್ ರೋಗವು ಒಂದು ವೈರಾಣುವಿನಿಂದ ಹರಡುವ ಸೋಂಕು. ಈ ರೋಗವು ಪ್ರಾಣಿಗಳು ಕಚ್ಚುವುದರ ಮುಖಾಂತರ ಮತ್ತು ಪ್ರಾಣಿಗಳ ಜೊಲ್ಲಿನಿಂದ ಹಾಗೂ ನೆಕ್ಕುವಿಕೆಯಿಂದ ರೋಗವು ಬರುತ್ತದೆ. ಅದರಲ್ಲಿ ನಾಯಿಯಿಂದ ೯೭%, ಬೆಕ್ಕಿನಿಂದ ೨%, ಇತರೇ ಪ್ರಾಣಿಗಳಿಂದ ೧% ರೇಬಿಸ್ ರೋಗವು ಬರುತ್ತದೆ. ನಾಯಿ ಕಚ್ಚಿದ ತಕ್ಷಣವೇ ಕಚ್ಚಿದ ಗಾಯವನ್ನು ಸೋಪು ನೀರಿನಿಂದ ಹರಿಯುವ ನೀರಿನ ಮುಖಾಂತರ ತೊಳೆಯಬೇಕು ಮತ್ತು ಗಾಯಕ್ಕೆ ಹೊಲಿಗೆ, ಕಟ್ಟು, ಬರೆ ಹಾಕಬೇಡಿ. ಕಚ್ಚಿದ ಕೂಡಲೇ ರೇಬಿಸ್ ಲಸಿಕೆ ಹಾಕಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಶ್ರೀಮತಿ ಶಾಂತಾ ಕರಡಿಕೊಳ್ಳ, ಸಾರ್ವಜನಿಕರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು. ಶ್ರೀಮತಿ ಕೆ.ಎಸ್. ಚೌಟಗಿ ಪ್ರಾರ್ಥಿಸಿದರು. ಶ್ರೀಮತಿ ಎಸ್.ಎಸ್. ಸಜ್ಜನವರ ಕಾರ್ಯಕ್ರಮ ನಿರೂಪಿಸಿದರು. ಕೆ.ಪಿ. ಗಂಭೀರ್ ವಂದಿಸಿದರು.


Gadi Kannadiga

Leave a Reply