ತಾಲೂಕಾ ವೈದ್ಯಾಧಿಕಾರಿ ಹಠಾವೊ ಖಾನಾಪುರ ತಾಲೂಕಾ ಆಸ್ಪತ್ರೆ ಬಚಾವೊ

Prasanna Kumbar
WhatsApp Group Join Now

ಗಡಿ ಕನ್ನಡಿಗ

 

ಖಾನಾಪುರ: ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ತಾಲೂಕು ವೈದ್ಯಾಧಿಕಾರಿ ಮಹೇಶ ಕಿವಡಸನ್ನವರ ಅವರು ಬಂದಾಗಿನಿಂದ ತಾಲೂಕಾ ಸಾರ್ವಜನಿಕ ಆಸ್ಪತ್ರೆ ಅದೋಗತಿ ತಲುಪಿದ್ದು ಭ್ರಷ್ಟಾಚಾರ ತಾಂಡವವಾಡುತ್ತಿದೆ.

ಹೆಸರಿಗಷ್ಟೆ ಸರಕಾರಿ ಆಸ್ಪತ್ರೆ ಉಚಿತ ಚಿಕಿತ್ಸೆ ಎಂಬಂತಾಗಿದ್ದು ಪ್ರತಿಯೊಂದಕ್ಕೂ ದುಡ್ಡು ಕೊಟ್ಟೇ ಚಿಕಿತ್ಸೆ ಪಡೆಯುವದು ತಾಲೂಕಿನ ಸಾರ್ವಜನಿಕರಿಗೆ ಅನಿವಾರ್ಯವಾಗಿದೆ ಅಲ್ಲದೇ ತಾಲೂಕಾ ವೈದ್ಯಾಧಿಕಾರಿ ಯಾವಾಗ ನೋಡಿದರೂ ಆರೋಗ್ಯ ಕೇಂದ್ರಗಳ ಬೇಟಿ ನೆಪದಲ್ಲಿ ಹೊರಗಡೆಯೆ ಇರುತ್ತಾರೆ ಆದ್ದರಿಂದ ಇಂತಹ ತಾಲೂಕಾ ವೈದ್ಯಾಧಿಕಾರಿಯಿಂದ ತಾಲೂಕಾ ಆಸ್ಪತ್ರೆ ಏಳಿಗೆ ಸಾಧ್ಯವಿಲ್ಲವೆಂದು ಇಂತಹ ಅಧಿಕಾರಿಯನ್ನ ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ವಿವಿಧ ದಲಿತ ಹಾಗೂ ಕನ್ನಡಪರ ಸಂಘಟನೆಗಳು ಶನಿವಾರ 18ರಂದು “ಟಿಎಚ್ಓ ಹಠಾವೊ ಖಾನಾಪುರ ಬಚಾವೊ” ಅಭಿಯಾನಕ್ಕೆ ಕರೆ ಕೊಟ್ಟಿವೆ.

ಪ್ರಮುಖ ಅಂಶಗಳು.
1)ತಾಲೂಕು ಆಸ್ಪತ್ರೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಗಮನಕ್ಕೆ ತಂದರೂ ಕ್ರಮ ಇಲ್ಲ

2)ಸರಯಾಗಿ ಸಿಗದ ಅಂಬ್ಯಲೆನ್ಸ್ ವ್ಯವಸ್ಥೆ

3)ಮೃತಪಟ್ಟ ದಲಿತ ಬಾಲಕಿಯ ಮರಣೋತ್ತರ ಶವ ಪರಿಕ್ಷೆಯಲ್ಲಿ ತೋರಿದ ಬೇಜವಾಬ್ದಾರಿತನ

4)ಶವ ಪರೀಕ್ಷೆಗೆ ಶವ ಸಾಗಿಸಲು ಅಂಬ್ಯುಲೆನ್ಸ ನೀಡಲು ನಿರಾಕರಣೆ
5)ಅಂಗಡಿಯಲ್ಲಿ ಅವಧಿ ಮೀರಿದ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ದೂರು ಕೊಟ್ಟರೂ ಕ್ರಮ ಕೈಗೊಳ್ಳದಿರುವದು

ಇನ್ನೂ ಹಲವು ಅಂಶಗಳು

WhatsApp Group Join Now
Telegram Group Join Now
Share This Article
error: Content is protected !!