This is the title of the web page
This is the title of the web page

Please assign a menu to the primary menu location under menu

Local News

ತಲವಾರ್ ರೆಡಿ ಮಾಡ್ಕೊಳ್ಳಿ ಎಂದ ಎಮ್.ಇ.ಎಸ್ ವಿರುದ್ಧ ಕೇಸ್ ದಾಖಲಿಸಿದ ಪೊಲೀಸರು


ಬೆಳಗಾವಿ: ಸಾಮಾಜಿಕ ಜಾಲತಾಣದಲ್ಲಿ ಜೂ. 27ರೊಳಗಾಗಿ ಬೆಳಗಾವಿಯಲ್ಲಿ ಮರಾಠಿ ಬೋರ್ಡ್ ಹಾಕಬೇಕು. ಇಲ್ಲವೇ ಒಂದೇ ಒಂದು ಕನ್ನಡ ಬೋರ್ಡ್ ಇರಲು ಬಿಡೊದಿಲ್ಲ ಅಂತಾ ಪೊಸ್ಟ್ ಹಾಕಿದ್ದ ಎಂಇಎಸ್ ಪುಂಡನನ್ನು ಪೊಲೀಸರು‌ ಬಂಧಿಸಿದ್ದಾರೆ.

ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಪದೇ ಪದೇ ಗಡಿ- ಭಾಷಾ ವಿಚಾರ ಇಟ್ಟುಕೊಂಡು ಕನ್ನಡಿಗರು ಮತ್ತು ಮರಾಠಿಗರ ಭಾವನೆಗೆ ದಕ್ಕೆ ತರುವ ಪ್ರಯತ್ನ ಮಾಡ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಎಂಇಎಸ್ ಪುಂಡರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

ಈ ಕುರಿತು ಬೆಳಗಾವಿ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಸೋಮೋಟೋ ಕೇಸ್ ದಾಖಲಿಸಿಕೊಂಡ ಪೊಲೀಸರು ರಾಯಲ್ ಬೆಳಗಾಂವಕರ ಎಂಇಎಸ್ ಪುಂಡನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಇನ್ಸ್ಟಾಗ್ರಾಮನಲ್ಲಿ ಕನ್ನಡಿಗರಿಗೆ, ಕರ್ನಾಟಕ ಸರ್ಕಾರ ಕ್ಕೆ ಬೆದರಿಕೆ ಹಾಕಿದ್ದರು.ಜೂ.27ರ ಒಳಗಾಗಿ ಬೆಳಗಾವಿಯಲ್ಲಿ ಮರಾಠಿ ಬೋರ್ಡ್ ಹಾಕಬೇಕು.ಇಲ್ಲವೇ ಒಂದೇ ಒಂದು ಕನ್ನಡ ಬೋರ್ಡ್ ಇರಲು ಬಿಡೊದಿಲ್ಲ.ಇದು ನಮ್ಮ ಮನವಿ ಅಲ್ಲ ಎಚ್ಚರಿಕೆಯ ಪೋಸ್ಟ್ ಮಾಡುವ ಮೂಲಕ ಬೆಳಗಾವಿಯಲ್ಲಿ ಭಾಷಾ ಸಾಮರಸ್ಯ ಕದಡುವ ಯತ್ನಿಸಿದರು.

ಕನ್ನಡ ಮರಾಠಿ ಭಾಷಿಕರಲ್ಲಿ ದ್ವೇಷ ಭಾವನೆ ಉಂಟು ಹಾಗೂ ಸಮಾಜ ಶಾಂತಿ ಕದಡುವ ಕೆಲಸ ಮಾಡಲಾಗಿದೆ ಎಂದು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಲಾಗಿದೆ. ಈ ಕುರಿತು ಖಡೇಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Gadi Kannadiga

Leave a Reply