ಒಳ‌ಮಿಸಲಾತಿ ಜಾರಿಗೊಳಿಸಲು ಒತ್ತಾಯಿಸಿ ಶಾಸಕರ ಕಚೇರಿಯ‌ ಮುಂದೆ ತಮಟೆ ಚಳವಳಿ

Murugesh Shivapuji
ಒಳ‌ಮಿಸಲಾತಿ ಜಾರಿಗೊಳಿಸಲು ಒತ್ತಾಯಿಸಿ ಶಾಸಕರ ಕಚೇರಿಯ‌ ಮುಂದೆ ತಮಟೆ ಚಳವಳಿ
WhatsApp Group Join Now

ಕುಷ್ಟಗಿ : ನ್ಯಾಯಮೂರ್ತಿ ಸದಾಶಿವ ಆಯೋಗದ ಪ್ರಕಾರ ನಮಗೆ ಸಿಗಬೇಕಾದ ಒಳ ಮಿಸಲಾತಿ ನೀಡಬೇಕು.‌ಸಂವಿಧಾನ ಬದ್ಧವಾಗಿ ನಾವೂಗಳು ನ್ಯಾಯ ಕೇಳುತ್ತಿದ್ದೇವೆ. ನಮ್ಮ‌ ಪ್ರತಿನಿಧಿಯಾಗಿ ಶಾಸಕರು ನೀವುಗಳು ಸದನದಲ್ಲಿ ಮಾತನಾಡಬೇಕು.‌ನಮ್ಮೆಲ್ಲರ ಧ್ವನಿಯಾಗಿ ಒತ್ತಾಯ ಮಾಡಬೇಕು ಎಂದು ಮುಖಂಡ ಸುಖರಾಜ ತಾಳಕೇರಿ ಹೇಳಿದರು.

ಪಟ್ಟಣದಲ್ಲಿ ನ್ಯಾ. ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಒಳ‌ಮಿಸಲಾತಿ ಜಾರಿಗೊಳಿಸಲು ಒತ್ತಾಯಿಸಿ ಶಾಸಕರ ಕಚೇರಿಯ‌ ಮುಂದೆ ತಮಟೆ ಚಳವಳಿಯಲ್ಲಿ ಪಾಲ್ಗೊಂಡು ಮಾತನಾಡಿದರು.

ನಾಗರಾಜ ನಂದಾಪೂರ ಮಾತನಾಡಿ, 30 ವರ್ಷಗಳ ಕಾಲ ಹೋರಾಟ ಮಾಡಿದ ಫಲವಾಗಿ ಇತ್ತೀಚಿಗೆ ಭಾರತದ ಸರ್ವೋಚ್ಛ ನ್ಯಾಯಾಲಯವು ಪರಿಶಿಷ್ಟ ಜಾತಿ ಒಳಮೀಸಲಾತಿಯನ್ನು ಆಯಾ ರಾಜ್ಯ ಸರ್ಕಾರಗಳು ಜಾರಿಗೊಳಿಸುವ ಹಕ್ಕನ್ನು ಹೊಂದಿರುತ್ತವೆ ಎಂದು ಆದೇಶ ನೀಡಿದ್ದಾರೆ. ಆದ್ದರಿಂದ ಈಗಿನ ಘನ ಸರಕಾರವು ತಾವು ಅಧಿಕಾರಕ್ಕೆ ಬಂದರೆ ಕೂಡಲೇ ಸದಾಶಿವ ಆಯೋಗದ ವರದಿಯನ್ನು ಜಾರಿಗಳಿಸುತ್ತೇವೆಂದು ಚನಾವಣಾ ಪ್ರಣಾಳಿಕೆಯಲ್ಲಿ ಹೇಳಿರುತ್ತಾರೆ. ಅದರಂತೆ ಅವರ ಸರ್ಕಾರವು ರಚನೆಗೊಂಡು ಇಲ್ಲಿಗೆ ಸುಮಾರು 18 ತಿಂಗಳ ಕಳೆದರೂ ಇಲ್ಲಿಯವರೆಗೆ ಸದರಿ ಸದಾಶಿವ ಆಯೋಗದ ವರದಿಯನ್ನು ಅವರು ಜಾರಿ ಮಾಡಿರುವುದಿಲ್ಲ. ನಮ್ಮ‌ಪರವಾಗಿ ಶಾಸಕರು ಸದನದಲ್ಲಿ ಮಾತನಾಡಬೇಕು ಎಂದರು.

ಮುಖಂಡ ನಾಗರಾಜ ಮೇಲಿನಮನಿ‌ ಮಾತನಾಡಿದರು

ನಂತರ ಮನವಿಪತ್ರ ಸ್ವೀಕರಿಸಿ ಶಾಸಕ‌ ದೊಡ್ಡನಗೌಡ ಪಾಟೀಲ್ ಮಾತನಾಡಿ, ಸದಾಶಿವ ಆಯೋಗ ಜಾರಿಗೆ ಗೋಳಿಸುವಂತೆ ಯತ್ನಾಳ ರವರು ಮಾತನಾಡಿದ್ದಾರೆ.‌ ಇದರ ಬಗ್ಗೆ ಚರ್ಚಿಸುವೆ.‌ವಿಧಾನಸಭೆಯಲ್ಲಿ ಧ್ವನಿ ಎತ್ತುವ ಕೆಲಸ ಮಾಡುತ್ತೇನೆ.‌ಶೂನ್ಯ ವೇಳೆಯಲ್ಲಿ ನಮ್ಮ ಪಕ್ಷದ ಹಿರಿಯ ಮುಖಂಡ ರೊಂದಿಗೆ ಮಾತನಾಡುವೆ ಎಂದರು.

ಮೌನಚಾರಣೆ : ಸದಶಿವ ಆಯೋಗ ವರದಿ ಜಾರಿಗೆ ಮಾಡಿದ್ದು ಮಾಜಿ ಮುಖ್ಯಮಂತ್ರಿ ಎಸ್ ಎಂ‌ಕೃಷ್ಣ ರವರು ಆಗಾಗಿ ಅವರ ಅಗಲಿಕೆ ನೋವಿನಿಂದ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು.

ಡಾ. ಬಿ ಆರ್ ಅಂಬೇಡ್ಕರ್ ವೃತ್ತದಿಂದ ಚಳುವಳಿ ಪ್ರಾರಂಭಗೊಂಡು ಶಾಸಕರ ಕಚೇರಿಯ ವರೆಗೆ ಬಂದು ತಲುಪಿತು.

ನಂತರ ಶಾಸಕರಿಗೆ ಮನವಿಪತ್ರ ಸಲ್ಲಿಸಿದರು.

ಮುಖಂಡರಾದ ಸುಖರಾಜ ತಾಳಕೇರಿ, ನಾಗರಾಜ‌ಮೇಲಿನಮನಿ, ನಾಗರಾಜ‌ನಂದಾಪೂರು, ಆಂಜನೇಯ ಹಾದಿಮನಿ, ಹನಮೇಶ ಎಸ್ ಹೆಚ್, ಮಂಜುನಾಥ, ಛತ್ರಪ್ಪ ಸೇರಿದಂತೆ ನೂರಾರು ಯುವಕರು ಪಾಲ್ಗೊಂಡಿದ್ದರು.

WhatsApp Group Join Now
Telegram Group Join Now
Share This Article
error: Content is protected !!