ಸವದತ್ತಿ ೮: ಬಿಇಡಿ ತರಬೇತಿ ಪಡೆದಿರುವ ವಿದ್ಯಾರ್ಥಿಗಳು ತಮ್ಮ ಒಂದು ಶಿಕ್ಷಣ ವೃತ್ತಿಯನ್ನು ಬಹಳಷ್ಟು ಪವಿತ್ರತೆಯಿಂದ ಮಕ್ಕಳಿಗೆ ನೀಡಬೇಕು ಶಿಕ್ಷಕರಾಗುವ ನಿವು ನಿಮ್ಮ ನಡೆನುಡಿ ಎಲ್ಲವೂ ಮಾದರಿಯಾಗಿರಬೇಕು ಮತ್ತು ಮಕ್ಕಳಿಗೆ ಶಿಕ್ಷಣ ನಿಡುವಾಗ ವಿಷಯದ ಬಗ್ಗೆ ಪರಿಪೂರ್ಣವಾಗಿ ತಿಳಿದುಕೊಂಡು ಓದಿ ಮಕ್ಕಳಿಗೆ ಶಿಕ್ಷಣ ನಿಡಬೇಕು, ಮತ್ತು ಓದುವ ಹವ್ಯಾಸವನ್ನು ತಮ್ಮಲ್ಲಿ ಬೇಳಸಿಕೊಳ್ಳಬೇಕು. ಎಲ್ಲ ವಿಷಯಗಳ ಬಗ್ಗೆ ತಿಳಿದು ಕೊಂಡಿರಬೇಕು, ಮುಂದೆ ತಮ್ಮ ಕೈಯಲ್ಲಿ ಕಲಿಯುವ ಮಕ್ಕಳಿಗೆ ಗುಣಾತ್ಮಕ ಹಾಗೂ ದೇಶಭಿಮಾನ ವನ್ನು ಹಿರಿಯರಿಗೆ ಗೌರವ ಕೊಡುವ ಭಾವನೆಯನ್ನು ಮಕ್ಕಳಲ್ಲಿ ಬೇಳಸಬೇಕು, ಶಿಕ್ಷಕ ವೃತ್ತಿ ಬಹಳಷ್ಟು ಪವಿತ್ರವಾದ ವೃತ್ತಿ ಎಂದು ಆರ್ ಸಿ ಯು ಬೆಳಗಾವಿಯ ನಿರ್ದೆಶಕರಾದ ಯರಿಸ್ವಾಮಿ ಎಮ್ ಸಿ ಯವರು ಮಾತನಾಡಿದರು
ಅವರು ಪಟ್ಟಣದ ಶ್ರೀ ಕುಮಾರೇಶ್ವರ ಶಿಕ್ಷಣ ಸಂಸ್ಥೇಯ ಬಿಇಡಿ ಕಾಲೇಜಿನ ಸನ್ ೨೦೨೧ – ೨೨ ನೇಯ ಸಾಲಿನ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಸ್ವಾಗತ ಮತ್ತು ವಿದ್ಯಾರ್ಥಿ – ಶಿಕ್ಷಕರ ಓಕ್ಕೂಟದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು
ಸಂಸ್ಥೆಯ ನಿರ್ದೆಶಕ ಎಸ್ ಎಸ್ ಉದಪುಡಿ ಸಮಾರಂಭದ ಅದ್ಯಕ್ಷತೆವಹಿಸಿ ಮಾತನಾಡಿದ ಅವರು ನಮ್ಮ ಕುಮಾರೇಶ್ವರ ಶಿಕ್ಷಣ ಸಂಸ್ಥೇಯು ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿದೆ ಕಾಲೇಜಿನ ಮತ್ತು ನಮ್ಮ ಸಂಸ್ಥೇಯಲ್ಲಿನ ಎಲ್ಲ ಶಿಕ್ಷಕರು ಮತ್ತು ಶಿಬ್ಬಂದಿಗಳು ಬಹಳಷ್ಟು ಪರಿಶ್ರಮ ಪಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು
ಸಮಾರಂಭದಲ್ಲಿ ಸಂಸ್ಥೇಯ ಅದ್ಯಕ್ಷರಾದ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಸುಭಾಸ ಎಸ್ ಕೌಜಲಗಿ. ಗಿ ಎಸ್ ಶಿಂದೆ, ವಿ ಆಯ್ ಮಮದಾಪುರ ಮತ್ತು ಕಾಲೇಜು ಪ್ರಾಚಾರ್ಯರಾದ ಡಾಕ್ಟರ ಎನ್ ಎಲ್ ಕಳ್ಳಿ. ಮುಖ್ಯೂಪಾದ್ಯಾಯರಾದ ಎನ್ ಬಿ ಚಂದರಗಿ, ವೇದಿಕೆಮೇಲೆ ಉಪಸ್ಥಿತರಿದ್ದರು ನಂತರ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಆರ್ ಸಿ ಯು ಬೆಳಗಾವಿಯ ನಿರ್ದೆಶಕರಾದ ಯರಿಸ್ವಾಮಿ ಎಮ್ ಸಿ ಯವರನ್ನು ಸಂಸ್ಥೆಯವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು
ಪ್ರಾಚಾರ್ಯರಾದ ಡಾಕ್ಟರ ಎನ್ ಎಲ್ ಕಳ್ಳಿ ಸ್ವಾಗತಿಸಿದರು. ಪ್ರೀತಿ ಶೀಂತ್ರಿ ಅಥಿತಿಗಳನ್ನು ಪರಿಚಯಿಸಿದರು. ಎಸ್ ಕೆ ಕೋಟೆ ಪ್ರದಿಜ್ಞಾವಿಧಿ ಬೋಧಿಸಿದರು. ಮಲ್ಲವ್ವ ಒಗೆಣ್ಣವರ ಮತ್ತು ಹಾಸಿಮ ಮುಲ್ಲಾ. ಕಾರ್ಯಕ್ರಮ ನಿರೂಪಿಸಿದರು, ಸರಸ್ವತಿ ಚೌಡಪ್ಪನವರ ವಂದನಾರ್ಪಣೆ ಮಾಡಿದರು.
Gadi Kannadiga > Local News > ಶಿಕ್ಷಕ ವೃತ್ತಿ ಪವಿತ್ರವಾದದು :ಯರಿಸ್ವಾಮಿ ಎಮ್ ಸಿ