This is the title of the web page
This is the title of the web page

Please assign a menu to the primary menu location under menu

State

ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ: ಮೇ.೨೧ ಮತ್ತು ೨೨ ರಂದು ನಿಷೇಧಾಜ್ಞೆ


ಬೆಳಗಾವಿ,ಮೇ.೧೯: ಬೆಳಗಾವಿ,ಮೇ.೧೯: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ ಮೇ.೨೧ ಹಾಗೂ ೨೨ ರಂದು ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತಿದ್ದು, ಜಿಲ್ಲೆಯ ೨೫ ಪರೀಕ್ಷಾ ಕೇಂದ್ರಗಳ ೨೦೦ ಮೀಟರ್ ವ್ಯಾಪ್ತಿಯಲ್ಲಿ ೧೪೪ ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆಯನ್ನು ವಿಧಿಸಲಾಗಿದೆ.
ಪರೀಕ್ಷೆಗಳು ನಡೆಯುವ ಕೇಂದ್ರಗಳು:
ಸರ್ದಾರ್ ಸರ್ಕಾರಿ ಹೈ ಸ್ಕೂಲ್, ಶೆರ್ಮನ್ ಇಂಗ್ಲಿಷ್ ಮೀಡಿಯಮ್ ಹೈ ಸ್ಕೂಲ್, ಎಸ್‌ಟಿ ಕ್ಸೇವಿರ‍್ಸ್ ಹೈ ಸ್ಕೂಲ್, ಡಿಎಮ್‌ಎಸ್ ಮಂಡಲ್ಸ್ ಮರಾಠಿ ವಿದ್ಯಾನಿಕೇತನ್ ಹೈ ಸ್ಕೂಲ್, ವನಿತಾ ವಿದ್ಯಾಲಯ ಹೈ ಸ್ಕೂಲ್, ಬೆನನ್‌ಸ್ಮಿಥ್ ಹೈ ಸ್ಕೂಲ್, ಮಹಿಳಾ ವಿದ್ಯಾಲಯ ಮಂಡಲ್ಸ್ ಇಂಗ್ಲಿಷ್ ಮೀಡಿಯಮ್ ಹೈ ಸ್ಕೂಲ್, ಮಹಿಳಾ ವಿದ್ಯಾಲಯ ಹೈ ಸ್ಕೂಲ್, ಜಿ ಎ ಕ್ಯಾಂಪ್ ಪ್ರಿ ಯುನಿವರ್ಸಿಟಿ ಕಾಲೇಜು, ಬಿಜೆಪಿಎಸ್‌ಎಸ್ ಎಂ.ವಿ.ಹೆರವಾಡಕರ್ ಇಂಗ್ಲಿಷ್ ಮೀಡಿಯಮ್ ಹೈ ಸ್ಕೂಲ್, ಥಲಕವಾಡಿ ಹೈ ಸ್ಕೂಲ್, ಬಾಲಿಕಾ ಆದರ್ಶ ವಿದ್ಯಾಲಯ, ಕೆಎಲ್‌ಎಸ್ ಇಂಗ್ಲಿಷ್ ಮೀಡಿಯಾ ಹೈ ಸ್ಕೂಲ್, ಭರತೇಶ್ ಇಂಗ್ಲಿಷ್ ಮೀಡಿಯಮ್ ಸ್ಕೂಲ್, ಶ್ರೀಮತಿ, ಉಷಾತಾಯಿ ಗೋಗಟೆ ಗಲ್ಸ್ ಹೈ ಸ್ಕೂಲ್, ಇಸ್ಲಾಮಿಯಾ ಕ್ಯಾಂಪ್ ಪಿಯು ಕಾಲೇಜು, ಸೇಂಟ್ ಆಂಟನಿ ಕನ್ನಡ ಹೈಯರ್ ಪ್ರೆöÊಮರಿ ಸ್ಕೂಲ್, ಸೇಂಟ್ ಜೋಸೆಫ್ಸ್ ಕಾನ್ವೆಂಟ್ ಹೈ ಸ್ಕೂಲ್, ಸೇಂಟ್ ಪಾಲ್ ಹೈ ಸ್ಕೂಲ್, ಡಿವೈನ್ ಪ್ರೊವಿಡೆನ್ಸ್ ಕಾನ್ವೆಂಟ್ ಹೈ ಸ್ಕೂಲ್, ಸರ್ಕಾರಿ ಚಿಂತಾಮನಿರಾವ್ ಹೈ ಸ್ಕೂಲ್, ಗೋಮಟೇಶ್ ಹೈ ಸ್ಕೂಲ್, ಶ್ರೀ ಸಿದ್ಧರಾಮೇಶ್ವರ ಕಾಂಪೋಸಿಟ್ ಪ್ರಿ ಯುನಿವರ್ಸಿಟಿ ಕಾಲೇಜು, ಲಿಟಲ್ ಸ್ಕಾರ‍್ಸ್ ಅಕ್ಯಾಡೆಮಿ ಹೈ ಸ್ಕೂಲ್, ನಿಷೇಧಾಜ್ಞೆ ವಿಧಿಸಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಲೂ ಬೆಳಿಗ್ಗೆ ೯ ರಿಂದ ಸಂಜೆ ೬ ಗಂಟೆಯವರೆಗೆ ಯಾವುದೇ ರೀತಿಯಲ್ಲಿ ನಿಯಮ ಮೀರಿಬಾರದು. ಮಾರಕ, ಸ್ಫೋಟಕ ವಸ್ತುಗಳನ್ನು ಹೊತ್ತು ತಿರುಗಬಾರದು. ಅಲ್ಲದೇ ಪರೀಕ್ಷಾ ಕೇಂದ್ರಗಳ ಸುತ್ತಲೂ ಎಲ್ಲ ಜೆರಾಕ್ಸ್ ಸೆಂಟರ್‌ಗಳನ್ನು ಮುಚ್ಚಲಾಗಿರುತ್ತದೆ. ಒಂದು ವೇಳೆ ನಿಷೇಧಾಜ್ಞೆ ನಿಯಮವನ್ನು ಮೀರಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ದಂಡಾಧಿಕಾರಿ ಮತ್ತು ಪೊಲೀಸ್ ಆಯುಕ್ತರಾದ ಡಾ. ಬೋರಲಿಂಗಯ್ಯ ಎಂ.ಬಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply