ಯಮಕನಮರಡಿ: ಮಕ್ಕಳಿಗೆ ವಿದ್ಯೆ ಧಾರೆ ಎರೆದು ಶಿಕ್ಷಣವಂತರನ್ನಾಗಿ ಮಾಡಿ ಉತ್ತಮ ನಾಗರಿಕನಾಗಿ ರೂಪಿಸುವ ಶಿಕ್ಷಕರ ಸೇವೆಯು ಶ್ಲಾಘ£Ãಯವಾದದು, ಶಿಕ್ಷಕ ವೃತ್ತಿಯು ಪವಿತ್ರವಾದದು ಎಂದು ಬಿಜೆಪಿ ಹುಕ್ಕೇರಿ ಮಂಡಳ ಅಧ್ಯಕ್ಷ ರಾಚಯ್ಯ ಹಿರೇಮಠ ಹೇಳಿದರು.
ಅವರು ಬುಧವಾರ ದಿ. ೦೭ ರಂದು ಘೋಡಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹುಕ್ಕೇರಿ ತಾಲೂಕಾಧ್ಯಕ್ಷರಾಗಿ ಆಯ್ಕೆಯಾಗಿರುವ ಎನ್.ಎಸ್. ದೇವರಮ£ ಇವರಿಗೆ ಸತ್ಕರಿಸಿ ಮಾತನಾಡಿದರು. ನೂತನ ಅಧ್ಯಕ್ಷ ಎನ್.ಎಸ್. ದೇವರಮ£ಯವರು ಶಿಕ್ಷಕರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿ £ಷ್ಠೆಯಿಂದ ಪ್ರಾಮಾಣಿ ಕತೆಯಿಂದ ಸೇವೆ ಮಾಡುತ್ತಾರೆ ಎಂಬ ವಿಶ್ವಾಸದಿಂದ ಎಲ್ಲ ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲೂ ಕೂಡಾ ಸಲ್ಲಿಸುತ್ತಿರುವ ಸೇವೆಯು ಶ್ಲಾಘ£Ãಯವಾದದು ಎಂದು ರಾಚಯ್ಯ ಹಿರೇಮಠ ಹೇಳಿದರು. ಸತ್ಕಾರ ಸ್ವೀಕರಿಸಿ ಕನಾಟಕ ರಾಜ್ಯ ಪ್ರಾಥಮಿಕಶಾಲಾ ಶಿಕ್ಷಕರ ಸಂಘದ ಹುಕ್ಕೇರಿ ತಾಲೂಕಾಧ್ಯಕ್ಷ ಎನ್.ಎಸ್. ದೇವರಮ£ ಮಾತನಾಡಿಶಿಕ್ಷಕರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕಲಿಸಲು ಗ್ರಾಮಸ್ಥರು ಶಿಕ್ಷಣ ಪ್ರೇಮಿಗಳ ಸಹಾಯ ಸಹಕಾರ ನೆರವು ಅಗ್ಯತವಾಗಿದೆ. ಘೋಡಗೇರಿ ಗ್ರಾಮದಲ್ಲಿ ಎಲ್ಲ ನಾಗರಿಕರು ಶಿಕ್ಷಣದ ಬಗ್ಗೆ ವಹಿಸಿರುವ ಕಾಳಜಿಯು ಪ್ರಶಂಸ£Ãಯವಾದದು ಎಂದು ಹೇಳೀದರು.
ಸತ್ಕಾರ ಸಮಾರಂಭದಲ್ಲಿ ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಹುಕ್ಕೇರಿ ತಾಲೂಕಾ ಸಹ ಸಂಚಾಲಯಕ ಡಾ. ಎಮ್.ಬಿ. ಕಮತೆ, ಬಾಬಾಸಾಹೇಬ ಮೊಕಾಶಿ, ಘೋಡಗೇರಿ ಗ್ರಾ.ಪಂ. ಉಪಾಧ್ಯಕ್ಷ ಮಹಾಂತೇಶ ಶಿರಹಟ್ಟಿ, ಶ್ರೀಕಾಂತ ರಾಜನ್ನವರ, ಇಬ್ರಾಹಿಂ ಮೊಕಾಶಿ, ಅಹ್ಮದ ಮುಲ್ಲಾ, ಮುಖ್ಯ ಶಿಕ್ಷಕಿ ಎಸ್.ಎಸ್. ವಾಲಿಕಾರ, ಸಹ ಶಿಕ್ಷಕರಾದ ಎಮ್.ಎಚ್. ಗಿರಿನಾಯಕರ, ಆರ್.ಸಿ. ಆಗನೂರ ಉಪಸ್ಥಿತರಿದ್ದರು.
Gadi Kannadiga > Local News > ಶಿಕ್ಷಕ ವೃತ್ತಿಯು ಪವಿತ್ರವಾದದು ; ರಾಚಯ್ಯ ಹಿರೇಮಠ