ಯರಗಟ್ಟಿ: ಪಟ್ಟಣದ ಪ್ರಮುಖ ಬೀದಿಯಲ್ಲಿ ರೋಡ್ ಶೋ ಮೂಲಕ ಮನೆ ಮನೆಗೆ ರತ್ನಾ ಆನಂದ ಮಾಮನಿ ಪರವಾಗಿ ಪ್ರಚಾರ ನಡೆಸಿ ಮಾತನಾಡಿ, ದಿ. ಆನಂದ ಮಾಮನಿ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದನ್ನು ಕೇಳಿ ತಿಳಿದಿದ್ದೇನೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅತ್ಯುತ್ತಮ ಆಡಳಿತ ವ್ಯವಸ್ಥೆಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಈ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮತ ನೀಡಬೇಕು ಎಂದರು.
ಬಿಜೆಪಿ ಮುಖಂಡ ಬಸವರಾಜ ಪಟ್ಟಣಶೆಟ್ಟಿ ಮಾತನಾಡಿ, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಬಡವರಿಗೆ ಹತ್ತಾರು ಯೋಜನೆಗಳನ್ನು ಘೋಷಿಸಿದೆ ಇಂದು ಜಗತ್ತಿನಲ್ಲಿ ಭಾರತ ಗುರು ಸ್ಥಾನದಲ್ಲಿ ನಿಂತಿದೆ. ಇದಕ್ಕೆ ಬಹು ಮುಖ್ಯ ಕಾರಣ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತ ವ್ಯವಸ್ಥೆ ಮತ್ತು ಅನ್ಯ ದೇಶಗಳೊಂದಿಗಿನ ಬಾಂಧವ್ಯ, ದೇಶದ ಪ್ರಗತಿಯನ್ನೇ ಉದ್ದೇಶವಾಗಿಸಿಕೊಂಡಿರುವ ಬಿಜೆಪಿಗೆ ಮತ ನೀಡಿ ರಾಜ್ಯದಲ್ಲಿ ಉತ್ತಮ ಸರ್ಕಾರ ರಚನೆಯಾಗುವಂತೆ ಮಾಡುವ ಹಕ್ಕು ನಿಮ್ಮೆಲ್ಲರ ಕೈಯಲ್ಲಿದೆ. ಆದ್ದರಿಂದ ಪ್ರತಿಯೊಬ್ಬರೂ ತಪ್ಪದೆ ಬಿಜೆಪಿಗೆ ಮತ ನೀಡಬೇಕು ಎಂದರು.
ಪ.ಪಂ ಸದಸ್ಯರಾದ ಮಹಾಂತೇಶ ಜಕಾತಿ, ವಿಶಾಲಗೌಡ ಪಾಟೀಲ, ಟಿಎಪಿಎಂಸಿ ಅಧ್ಯಕ್ಷ ವೆಂಕಟೇಶ ದೇವರಡ್ಡಿ, ಕುಮಾರ ಜಕಾತಿ, ಅಶೋಕ ದೊಡ್ಡಮನಿ, ಚಂದ್ರಕಿರಣ ಮಾಮನಿ, ಚಿನ್ಮಯ ಮಾಮನಿ, ಶಿವಾನಂದ ಪಟ್ಟಣಶೆಟ್ಟಿ, ಸಿದ್ದು ದೇವರಡ್ಡಿ, ಶಂಕಪ್ಪ ವಜ್ರಮಟ್ಟಿ, ಸದಾನಂದ ಹಣಬರ, ಗಿರೀಶ ಪಾಟೀಲ, ಸಂತೋಷ ದೇವರೆಡ್ಡಿ, ಮಹಾಂತೇಶ ಉಡಕೇರಿ, ಕೃಷ್ಣಮೂರ್ತಿ ತೊರಗಲ್ಲ, ಸದಾನಂದ ಪಾಟೀಲ, ಗುರು ವಾಲಿ, ಈರಣ್ಣಾ ಹೊಸಮನಿ, ಬಾಬು ಚನ್ನಮೆತ್ರಿ ಸೇರಿದಂತೆ ಅನೇಕರು ಇದ್ದರು
Gadi Kannadiga > Local News > ಕಿರುತೆರೆ ಕಲಾವಿದೆ ಗೌತಮಿ ಜಾಧವ, ಬಿಜೆಪಿ ಅಭ್ಯರ್ಥಿ ರತ್ನಾ ಆನಂದ ಮಾಮನಿ ಪರ ಮತಯಾಚನೆ
ಕಿರುತೆರೆ ಕಲಾವಿದೆ ಗೌತಮಿ ಜಾಧವ, ಬಿಜೆಪಿ ಅಭ್ಯರ್ಥಿ ರತ್ನಾ ಆನಂದ ಮಾಮನಿ ಪರ ಮತಯಾಚನೆ
Suresh05/05/2023
posted on
