ಕುಷ್ಟಗಿ :-ದೋಟಿಹಾಳ ಮತ್ತು ಕೇಸೂರು ಅವಳಿ ಗ್ರಾಮಗಳ ಮಧ್ಯಭಾಗದಲ್ಲಿ ಹಾಯ್ದು ಹೋಗಿರುವ ರಾಜ್ಯ ಹೆದ್ದಾರಿ 36ರ ಕೊಪ್ಪಳ-ಕ್ಯಾದಿಗುಪ್ಪಾ,ಬಹು ದಿನಗಳಿಂದ ಅಭಿವೃದ್ಧಿ ಕಾಣದೆ, ವಿನಾಕಾರಣ ವ್ಯಾಜ್ಯಕ್ಕೆ ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ಅಂದಾಜು 30 ಅಡಿಗೂ ಅಧಿಕ ರಸ್ತೆ ಮತ್ತು ಚರಂಡಿ ತಾತ್ಕಾಲಿಕ ದುರಸ್ತಿ (ಅಭಿವೃದ್ಧಿ) ಕಾಮಗಾರಿಗೆ ಪಿಡಬ್ಲ್ಯೂಡಿ ಮತ್ತು ಸಿಬ್ಬಂದಿ ವರ್ಗ ಹಾಗೂ ಪೋಲಿಸ್ ಇಲಾಖೆಯ ಪಿಎಸ್ಐ ಹಾಗೂ ಸಿಬ್ಬಂದಿ ವರ್ಗ ಇಂದು ಬೆಳಗ್ಗೆ 6 ಗಂಟೆಯಿಂದಲೇ ಜಂಟಿ ಕಾರ್ಯಾಚರಣೆಗೆ ಮುಂದಾಗಿದ್ದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಹೋರಾಟಕ್ಕೆ ಸಂದ ಜಯವಾಗಿದೆ, ಎಂದು ಹೈದರಾಬಾದ್ ಕರ್ನಾಟಕ ಯುವ ಶಕ್ತಿ ಕುಷ್ಟಗಿ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಹೇಳಿದ್ದಾರೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಒದಗಿಸಲಾಗಿತ್ತು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ