This is the title of the web page
This is the title of the web page

Please assign a menu to the primary menu location under menu

State

ಸಂಗೀತದ ರಸದೌತಣದ ನೀಡಿದ ದಶಮಾನೋತ್ಸವ ಕಾರ್ಯಕ್ರಮ


ಇಳಕಲ್ : ಇಳಕಲ್ ನಗರವು ಕಲಾವಿದರ ತವರೂರು
ನಮ್ಮಲ್ಲಿ ನಾಟಕ ರಂಗ, ಸಂಗೀತ ಕ್ಷೇತ್ರ, ನಾಟ್ಯ ರಂಗ ಹೀಗೆ
ಎಲ್ಲ ರಂಗದಲ್ಲೂ ವಿಶೇಷ ಸಾಧನೆಗೈದ ಸಾಧಕರು ನಮ್ಮ ನಗರದಲ್ಲಿದ್ದಾರೆ ಎಂದು
ಹುನಗುಂದ ಶಾಸಕ ವಿಜಯಾನಂದ ಎಸ್. ಕಾಶಪ್ಪನವರು ಹೇಳಿದರು.

ನಗರದ ಖ್ಯಾತ ಸಂಗೀತ ಸಂಘ ಸ್ವರಸಿಂಧು ಮೇಲೋಡಿಸ್ (ರಿ) ಅವರ ದಶಮಾನೋತ್ಸವ
ಕಾರ್ಯಕ್ರಮದ ಅಂಗವಾಗಿ ಸ್ವರ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದವರು,
ಸಮಾಜದ ನ್ಯೂನ್ಯತೆಗಳು ತಮ್ಮ ಅಭಿನಯದ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು
ಸಾರುವ ಕೆಲಸ ಕಲಾವಿದರು ಮಾಡುತ್ತಾರೆ. ನಾನು ಯಾವಾಗಲೂ ಕಲಾವಿದರ ಸಹಾಯ ಸಹಕಾರಕ್ಕೆ ಇರುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ಚಿತ್ತರಗಿ ಶ್ರೀ ಗುರುಮಹಾಂತ ಸ್ವಾಮಿಗಳು, ಶಿರೂರದ ಡಾ. ಬಸವಲಿಂಗ ಸ್ವಾಮಿಜಿಗಳು
ವಹಿಸಿಕೊಂಡದ್ದರು.
ನಂತರ ಶ್ರೀ ಗುರುಮಹಾಂತ ಸ್ವಾಮಿಗಳು ಮಾತನಾಡಿ, ನಗರದಲ್ಲಿ ಸುಂದರವಾಗಿ
ಮತ್ತು ಸುಮಧುರವಾಗಿ ಹಾಡುವ ಸಂಗೀತ ಸಂಘ ಎಂದರೆ ಅದು
ಸ್ವರಸಿಂಧು ಮೆಲೋಡಿಸ್ ಅವರ ತಂಡ ಎಂದು ಸಂಘದ ಅಭಿಮಾನದ ನುಡಿಗಳಾಡಿದರು.

ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪರಶುರಾಮ ರಾಜೋಳ್ಳಿ, ಕಲಾಪೋಷಕರಾದ ರವೀಂದ್ರ ದೇವರಗಿಕರ,
ಬಸವರಾಜ ಮಠದ, ವೆಂಕಟೇಶ ಸಾಕಾ, ರವಿಶಂಕರಸಾ ಬಸವಾ, ಗಾಯಕರಾದ ನರಸಿಂಗ ಕಾಟವಾ, ಪ್ರಕಾಶ ಮಠ, ಗೋಪಿಕೃಷ್ಣ ಕಠಾರೆ,
ಪರಶುರಾಮ ಪವಾರ, ರೇಖಾ ಕಠಾರಿ, ನಿತ್ಯಶ್ರೀ ಸೂಳಿಭಾವಿ, ಸ್ವಾತಿ ನಾಲತವಾಡ ಮತ್ತು ಜಮುನಾ ಕಾಟವಾ ಉಪಸ್ಥಿತರಿದ್ದರು.

ಮಾನ್ಯ ಶಾಸಕರು ತಮ್ಮ ನೆಚ್ಚಿನ ಹಾಡಾದ ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಎನ್ನುವ ಹಾಡು ಹಾಡೋದರ ಮುಖಾಂತರ ಸಭಿಕರಲ್ಲಿ ಉತ್ಸಾಹ ತುಂಬಿದರು.

ವರದಿ : ನಾಗರಾಜ ನಗರಿ


Leave a Reply