ಬಳ್ಳಾರಿ,ಏ.೨೪-ಜಿಲ್ಲೆಯ ಕಂಪ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿಎಚ್ ಸುರೇಶ್ ಬಾಬು ತನ್ನ ಎದುರಾಳಿ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಪ್ರತಿ£ತ್ಯ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಮತಬೇಟೆ ಯಾಚಿಸುತ್ತಿದ್ದಾರೆ.
ಕಂಪ್ಲಿ ಕ್ಷೇತ್ರ ವ್ಯಾಪ್ತಿಯ ಚಿನ್ನಾಪುರ, ಉಪ್ಪಾರಹಳ್ಳಿ, ಮತ್ತು ದೇವಲಾಪುರ ಗ್ರಾಮಗಳಲ್ಲಿ ಸಂಚಿರಿಸಿದ ಟಿ.ಎಚ್. ಸುರೇಶ್ ಬಾಬು ಗ್ರಾಮಸ್ಥರೊಂದಿಗೆ ಭರ್ಜರಿ ಪ್ರಚಾರ ನಡೆಸಿ ಬಿಜೆಪಿಯ ಸಾಧನೆಗಳ ಕುರಿತು ಹೇಳಿದರು.
೨೦೨೩ ರ ಸಾರ್ವತ್ರಿಕ ಚುನಾವಣೆಯ ಕಂಪ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ನನ್ನನ್ನು ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು. ಗ್ರಾಮದ ಮನೆ-ಮನೆಗೂ ತೆರಳಿ ತಮ್ಮ ಕಳೆದ ಹತ್ತು ವರ್ಷದ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳ ಕುರಿತು, ಮಾಹಿತಿ £Ãಡಿ, ಮತ್ತೊಮ್ಮೆ ಕಂಪ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಪ್ರಚಂಡ ಬಹುಮತದೊಂದಿಗೆ ಗೆಲ್ಲಿಸುವಂತೆ ಕೋರಿದರು.
ನಂತರ ಗ್ರಾಮಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ದಿ ಕಾರ್ಯಕ್ರಮಗಳ ಕುರಿತು ಮಾಹಿತಿ ಪಡೆದು ಶೀಘ್ರದಲ್ಲಿ ಪರಿಹರಿಸುವ ಭರವಸೆ £Ãಡಿದರು. ಗ್ರಾಮದ ಅನೇಕ ಹಿರಿಯ ಕಾರ್ಯಕರ್ತರು, ಗ್ರಾಮಸ್ಥರು ಅಭಿಮಾ£ಗಳು ಜೊತೆಯಲ್ಲಿದ್ದರು.
Gadi Kannadiga > State > ಗ್ರಾಮೀಣ ಪ್ರದೇಶಗಳಲ್ಲಿ ಮತಬೇಟೆಗಿಳಿದ ಟಿಎಚ್ ಸುರೇಶ್ ಬಾಬು
ಗ್ರಾಮೀಣ ಪ್ರದೇಶಗಳಲ್ಲಿ ಮತಬೇಟೆಗಿಳಿದ ಟಿಎಚ್ ಸುರೇಶ್ ಬಾಬು
Suresh24/04/2023
posted on
More important news
ಪ್ರತಿಬಂಧಕಾಜ್ಞೆ ಜಾರಿ
08/06/2023