This is the title of the web page
This is the title of the web page

Please assign a menu to the primary menu location under menu

State

ಕೊಪ್ಪಳದಲ್ಲಿ ವಿಮಾನ ನಿಲ್ದಾಣ:ಪೂರ್ವ ಕಾರ್ಯಸಾಧ್ಯತಾ ವರದಿ ತಯಾರಿಕೆಗೆ ಎಎಐ ತಂಡ ಭೇಟಿ


ಕೊಪ್ಪಳ, ಜೂ. -: ಕೊಪ್ಪಳ ಜಿಲ್ಲೆಯ ಅಭಿವೃದ್ಧಿಗೆ ವಿಮಾನ ನಿಲ್ದಾಣವು ಪೂರಕವಾಗಲಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಹೇಳಿದರು.
ಕೊಪ್ಪಳದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಕುರಿತಂತೆ ಪೂರ್ವ ಕಾರ್ಯಸಾಧ್ಯತಾ ವರದಿ ತಯಾರಿಕೆಗೆ ಗುರುವಾರದಂದು (ಜೂ.೦೨) ಜಿಲ್ಲೆಗೆ ಆಗಮಿಸಿದ ಎಎಐ ತಂಡದೊAದಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಅವರು ಮಾತನಾಡಿದರು.
ವಿಮಾನ ನಿಲ್ದಾಣದಿಂದ ಜಿಲ್ಲೆಯಲ್ಲಿ ಬೆಳೆಯುವ ಹಲವು ಬಗೆಯ ಕೃಷಿ ಉತ್ಪನ್ನಗಳನ್ನು ಹೊರ ರಾಜ್ಯ, ದೇಶಗಳಿಗೆ ನೇರವಾಗಿ ರಫ್ತು ಮಾಡಲು ಅನುಕೂಲವಾಗುವುದು ಮತ್ತು ಪ್ರತಿದಿನ ಜಿಲ್ಲೆಯಿಂದ ೧೫೦ ಕಂಟೇನರ್‌ಗಳು ಬೇರೆ ಬೇರೆ ರಾಜ್ಯಗಳಿಗೆ ರಸ್ತೆ ಮೂಲಕ ಮತ್ತು ರೈಲ್ವೇಗಳ ಮೂಲಕ ಸಂಚರಿಸುತ್ತಿದ್ದು, ಇವುಗಳು ಸಮಯಕ್ಕೆ ಸರಿಯಾಗಿ ತಲುಪುವುದಿಲ್ಲ. ಇದರಿಂದ ಅಭಿವೃದ್ಧಿಯ ವೇಗಕ್ಕೆ ಹಿನ್ನಡೆಯಾಗುತ್ತದೆ. ಜಿಲ್ಲೆಯಲ್ಲಿನ ಹಲವು ಪ್ರಮುಖ ಪ್ರೇಕ್ಷಣಿಯ ಸ್ಥಳಗಳಾದ ಅಂಜನಾದ್ರಿ ಪರ್ವತ, ಹುಲಿಗಿ ದೇವಸ್ಥಾನ, ಕನಕಚಾಲಪತಿ ದೇವಸ್ಥಾನ, ಇಟಗಿ ಸೇರಿದಂತೆ ಹಲವು ಧಾರ್ಮಿಕ ಸ್ಥಳಗಳು, ಆನೆಗೊಂದಿ ಮತ್ತು ಪಕ್ಕದ ಹಂಪಿಯAತಹ ಪ್ರಸಿದ್ದ ಸ್ಥಳಗಳಿಗೆ ಭೇಟಿ ನೀಡುವರಲ್ಲಿ ವಿದೇಶಿ ಪ್ರವಾಸಿಗೂ ಸಹ ಹೆಚ್ಚಾಗಿರುವುದರಿಂದ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ತುಂಬಾ ಅವಶ್ಯವಿದೆ. ಅಲ್ಲದೇ ನೂತನವಾಗಿ ನಿರ್ಮಾಣವಾಗುತ್ತಿರುವ ಕೊಪ್ಪಳ ಟಾಯ್ಸ್ ಕ್ಲಷ್ಟರ್‌ನ ಉತ್ಪನ್ನಗಳನ್ನು ರಫ್ತು ಮಾಡಲು ಅನುಕುಲವಾಗಲಿದೆ ಎಂದು ತಾಂತ್ರಿಕ ತಂಡಕ್ಕೆ ಡಿಸಿ ವಿವರಿಸಿದರು. ಇದಕ್ಕೆ ಎಎಐ ತಂಡವು ಪ್ರತಿಕ್ರಿಯಿಸಿ, ವಿಮಾನ ನಿಲ್ದಾಣವನ್ನು ಯಾವ ಉದ್ದೇಶಕ್ಕೆ ಮತ್ತು ಯಾವ ರೀತಿ ಬಳಸಲಾಗುವುದು ಎಂಬುದರ ಕುರಿತು ಸಂಕ್ಷಿಪ್ತ ವರದಿ ನೀಡುವಂತೆ ಕೊಪ್ಪಳ ಜಿಲ್ಲೆಯ ಸಂಬAಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿತು. ಸಭೆಯಲ್ಲಿ ಕರ್ನಾಟಕ ರಾಜ್ಯ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಟೆಕ್ನಿಕಲ್ ಅಡ್ವೆöÊಜರ್ ಬ್ರಿಗೇಡಿಯರ್ ಪೂರ್ವಿಮಠ, ಎಎಐ ತಂಡದ ಅಧಿಕಾರಿಗಳಾದ ಅಭಿಜಿತ್ ಬ್ಯಾನರ್ಜಿ, ಶೈಲೇಂದ್ರ ಮಾರ್ಕ್ ಇ., ತರುಣ್ ಕುಮಾರ್ ಗುಪ್ತಾ, ಶಖೀಬ್ ಆಫ್ತಾಬ್ ಆಲಂ, ಎನ್.ಮೋಹನ್ ಹಾಗೂ ಕೊಪ್ಪಳ ವಿಭಾಗಾಧಿಕಾರಿ ಬಸವಣ್ಣಪ್ಪ ಕಲಶೇಟ್ಟಿ ಸೇರಿದಂತೆ ಸಂಬAಧಿಸಿದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಭೇಟಿ, ಪರಿಶೀಲನೆ ; ಕರ್ನಾಟಕ ಸರ್ಕಾರವು ೨೦೨೨-೨೩ನೇ ಸಾಲಿನ ಬಜೆಟ್‌ನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಿಸಲು ಯೋಜನೆಯನ್ನು ಘೋಷಿಸಿದ್ದು, ಕೊಪ್ಪಳ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ ಸಂಬAಧ ಪೂರ್ವ ಕಾರ್ಯಸಾಧ್ಯತಾ ವರದಿ (ಪ್ರಿ ಫೆಸಿಬಲಿಟಿ ರಿಪೋರ್ಟ್) ತಯಾರಿಸಲು ಏರ್ಪೋಟ್ ಅಥೋರೆಟಿ ಆಫ್ ಇಂಡಿಯಾ ಸಂಸ್ಥೆಯ ಹಿರಿಯ ಅಧಿಕಾರಿಗಳ ತಂಡವು ಇಂದು (ಜೂ.೦೨) ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ತಾಳಕನಕಪುರ, ಬುಡಶೆಟ್ನಾಳ್, ಹಟ್ಟಿ ಮತ್ತು ಕಲಕೇರಿ ಗ್ರಾಮಗಳಲ್ಲಿ ಗುರುತಿಸಿರುವ ೩೮೨.೦೪ ಎಕರೆ ಸ್ಥಳ ಮತ್ತು ಕೊಪ್ಪಳ ತಾಲ್ಲೂಕಿನ ವಗದನಾಳ ಹಾಗೂ ಕುಕನುರು ತಾಲ್ಲೂಕಿನ ಲಕಮಾಪುರ ಗ್ರಾಮಗಳಲ್ಲಿ ಗುರುತಿಸಿರುವ ೩೫೨.೧೩ ಎಕರೆ ಜಮೀನುಗಳನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ಕೈಗೊಂಡಿತು.
ಮೂರು ವಾರದೊಳಗೆ ಪೂರ್ವ ಕಾರ್ಯಾಸಾಧ್ಯತಾ ವರದಿ ಎಎಐ ಸಂಸ್ಥೆಗೆ & ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ; ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬAಧಿಸಿದAತೆ ಎಎಐ ತಂಡವು ಸ್ಥಳ ಪರಿಶೀಲಿಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಹಾಗೂ ಸಂಸದರೊAದಿಗೆ ಚರ್ಚಿಸಿ, ಮೂರು ವಾರದೊಳಗೆ ಪೂರ್ವ ಕಾರ್ಯಾಸಾಧ್ಯತಾ ವರದಿಯನ್ನು ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಗೆ ಹಾಗೂ ರಾಜ್ಯ ಸರ್ಕಾರಕ್ಕೆ ಮುಂದಿನ ಕ್ರಮಕ್ಕೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿತು. ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದ ಈ ಯೋಜನೆಯಿಂದಾಗಿ ಜಿಲ್ಲೆಯಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣದಿಂದ ಜಿಲ್ಲೆಯ ಜನತೆಗೆ ಅನುಕೂಲವಾಗುವುದಲ್ಲದೇ ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದರು.


Gadi Kannadiga

Leave a Reply