This is the title of the web page
This is the title of the web page

Please assign a menu to the primary menu location under menu

Local News

ಗ್ರಾಮೀಣ ಜನರ ಬದುಕನ್ನು ಕಲಿಸುವುದೇ ಶಿಬಿರದ ಗುರಿಯಾಗಿರಬೇಕು: ಪ್ರೊ. ಬಿ.ಆರ್ ಪಾಟೀಲ್


ಬಾಗಲಕೋಟೆ: ಗ್ರಾಮೀಣ ಭಾಗದ ಜೀವನವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶ ಈ ಶಿಬಿರದ್ದಾಆಗಿರಬೇಕು. ನಾವೆಲ್ಲರೂ ಸಾಮಾನ್ಯ ಸಮುದಾಯದಿಂದ ಬೆಳೆದು ಬಂದವರು ಯಶಸ್ಸಿನತ್ತ ನಾವು ನಡೆಯಬೇಕಾಗಿದೆ ಎಂದು ಪ್ರೊ ಬಿ ಆರ್ ಪಾಟೀಲ್ ಹೇಳಿದರು.

ನಗರದ ಬಿ.ವಿ.ವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯ ಬಾಗಲಕೋಟೆ ಎಳು ದಿನದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರವನ್ನೂ ಆಯೋಜಿಸಲಾಗಿದೆ. ಊಟ ವಸತಿ ಆರೋಗ್ಯ ಎಲ್ಲವೂ ಇಲ್ಲಿ ಮಾರಾಟಕ್ಕಿವೆ. ಗುಡಿಸಲಿನಲ್ಲಿರುವ ನಗು ಅರಮನೆಯಲ್ಲಿ ಏಕೆ ಇಲ್ಲ ಎಂದು ಹೇಳುವುದರ ಮೂಲಕ ವಿದ್ಯಾರ್ಥಿ ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ಹೇಳುತ್ತಾರೆ.

ಬದುಕು ನಡೆಸಲು ಸಾವಿರ ದಾರಿಗಳಿವೆ. ಶಿಕ್ಷಕರ ಕೆಲಸ ವಿದ್ಯಾರ್ಥಿಗಳಿಗೆ ಪಾಠ ಕಲಿಸುವುದು ಅಷ್ಟೇ ಅವರ ಕೆಲಸವಾಗಬಾರದು ಜೀವನ ಹೇಗೆ ನಡೆಸಬೇಕು ಎಂಬುದನ್ನು ಕಲಿಸಬೇಕು. ಬದುಕನ್ನು ಕಟ್ಟಿಕೊಳ್ಳಲಿಕ್ಕೆ ಕೌಶಲ್ಯ ಪ್ರಮುಖವಾದದ್ದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಮ್.ಎಮ್ ಹಿರೇಮಠ್ ಮಾತನಾಡಿ ಮನುಷ್ಯನಿಗೆ ಬೇಕಾಗಿರುವುದು ನೆಮ್ಮದಿಯಯುತ ಬದುಕು ಆಲಸ್ಯ ಎಂಬುವುದು ಸರ್ವ ರೋಗಕ್ಕೆ ಮೂಲ. ಬದುಕು ಕಟ್ಟಿಕೊಳ್ಳಲ್ಲಿಕ್ಕೆ ಪದವಿ ಒಂದೇ ಮುಖ್ಯವಲ್ಲ. ಪರಿಶ್ರಮ ಎಲ್ಲಿರುತ್ತದೆ ಅಲ್ಲಿ ಯಶಸ್ವಿ ತಾನಾಗೆ ಬಂದೇ ಬರುತ್ತದೆ. ವಿದ್ಯಾರ್ಥಿಗಳೇ ನಿಮ್ಮ ಕಲೆಗಳನ್ನು ಅಭಿವೃದ್ಧಿಗೊಳಿಸಲು ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದರು.

ಪ್ರೊ ಸಿ.ಆರ್. ಚೌಕಿಮಠ, ಪ್ರೊ ಎನ್. ಆರ್. ಇಂಗಳಗಿ, ಪ್ರೊ ಎಂ.ಎಂ .ದೇವನಾಳ, ಶ್ರೀಮತಿ ಮಂಜುಳ ಎಸ್ ಚೌಹಾನ್ ಮುಂತಾದವರು ಉಪಸ್ಥಿತರಿದ್ದರು.

ಸಂಗೀತ ವಿಭಾಗದ ವಿದ್ಯಾರ್ಥಿನಿ ಶಾರದಾ ಪವಾರ್ ಪ್ರಾರ್ಥಿಸಿದರು. ಡಾ.ಕೆ. ಪ್ರಹ್ಲಾದ ಸ್ವಾಗತಿಸಿದರು. ಶ್ರೇಯಾ ಚೆನ್ನಾಳ ಕಾರ್ಯಕ್ರಮ ನಿರೂಪಿಸಿದರು. ಪ್ರೊ ಎಂ.ಎಚ್.ವಡ್ಡರ್ ವಂದಿಸಿದರು.


Gadi Kannadiga

Leave a Reply