This is the title of the web page
This is the title of the web page

Please assign a menu to the primary menu location under menu

Local News

ಯುವಕನಿಗೆ ಚಾಕುವಿನಿಂದ ಇರಿದು ಪರಾರಿಯಾದ ದುಷ್ಕರ್ಮಿಗಳು


ಬೆಳಗಾವಿ: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮೂವರ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದ್ದು 15 ವರ್ಷದ ಯುವಕನಿಗೆ ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ಬೆಳಗಾವಿ ನಗರದ ಅಂಬಾ ಭವನ ಹತ್ತಿರ ನಡೆದಿದೆ.

ಇಸ್ಲಾಮೀಯಾ ಶಾಲೆಯ ಹತ್ತನೆಯ ತರಗತಿಯ ವಿಧ್ಯಾರ್ಥಿ ಫರಾನ್ ಧಾರವಾಡಕರ (15) ಹಲ್ಲೆಗೊಳಗಾದ ಯುವಕನಾಗಿದ್ದು ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಬೈಕ್ ಮೇಲೆ ಮೂವರು ಜನ ಯುವಕರು ಹೋಗುತ್ತಿರುವಾಗ, ಹತ್ತರಿಂದ ಹದಿನೈದು ಜನ ಯುವಕರ ಗುಂಪೊಂದು ಬೈಕ್ ಸವಾರರನ್ನು ತಡೆದು ಫರಾನ್ ಧಾರವಾಡಕರ ಎಂಬ 15 ವರ್ಷದ ಯುವಕನ ಮೇಲೆ ಚೂರಿಯಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಫರಾನ್ ಧಾರವಾಡಕರ ಜೊತೆ ತೆರಳುತ್ತಿದ್ದ ಇಬ್ಬರು ಯುವಕರು ತಪ್ಪಿಸಿಕೊಂಡು ಮನೆ ತಲುಪಿದ್ದಾರೆ. ಹಲ್ಲೆ ಮಾಡಿವದರು ಯಾರು ಮತ್ತು ಹಲ್ಲೆಗೆ ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ.


Gadi Kannadiga

Leave a Reply