ಮೂಡಲಗಿ: ಶುಕ್ರವಾರದಂದು ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದ ಮೃತ್ಯುಂಜಯ ವೃತ್ತದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ರಸ್ತೆ ಮಾರ್ಗವಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರ ಸಂಚರಿಸುವ ವೇಳೆ ದಲಿತ ಮುಖಂಡರು, ಕಾಂಗ್ರೇಸ್ ಕಾರ್ಯಕರ್ತರು, ಸತೀಶ ಜಾರಕಿಹೊಳಿಯವರ ಬೆಂಬಲಿಗರು ವಾಹನದ ಮೇಲೆ ಹಲ್ಲೆ ಮಾಡಿರುವುದು ಖಂಡನಿಯವಾಗಿದೆ ಎಂದು ಬಿಜೆಪಿ ಅರಭಾವಿ ಮಂಡಲ ರೈತ ಮೊರ್ಚಾ ಅಧ್ಯಕ್ಷ ತಮ್ಮಣ್ಣ ದೇವರ ಹೇಳಿದರು.
ಶನಿವಾರದಂದು ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಪದ ಪರ್ಷಿಯನ್ ಪದ ಅದು ಅಶ್ಲೀಲ ಹಿಂದೂ ಪದಕ್ಕೆ ಶಬ್ದಕೋಶದಲ್ಲಿ ಅಶ್ಲೀಲ ಎಂದು ಅರ್ಥವಿದೆ ಎಂದು ಹೇಳಿಕೆ ನೀಡಿರುವ ಸತೀಶ ಜಾರಕಿಹೋಳಿ ಹೇಳಿಕೆ ನೀಡಿ ತೀವ್ರ ಟೀಕೆಗೆ ಗುರಿಯಾಗಿ ತಮ್ಮ ಹೇಳಿಕೆಯನ್ನು ಹಿಂಪಡೆದು ವಿಷಾದ ವ್ಯಕ್ತಡಿಸಿದ್ದಾರೆ. ಆದರೆ ಮುಗ್ಧರಾದ ದಲಿತ ಮುಖಂಡರನ್ನು ಬಳಿಸಿಕೊಂಡು ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳು ರಾಜ್ಯಸಭಾ ಸದಸ್ಯರ ಮೇಲೆ ಹಲ್ಲೆ ಮಾಡುವಂತದ್ದು ವಿಪರ್ಯಾಸದ ಸಂಗತಿಯಾಗಿದೆ ಎಂದು ಅಸಮಾಧಾನವನ್ನು ವ್ಯಕ್ತಪಡಿದ ಅವರು, ರಾಜ್ಯ ನಾಯಕರ ಈ ಘಟನೆಯ ಬಗ್ಗೆ ಯಾವ ಕ್ರಮಕೈಗೊಳ್ಳುತ್ತಾರೆ ಅದಕ್ಕೆ ನಮ್ಮ ಅರಭಾವಿ ಬಿಜೆಪಿ ಎಲ್ಲ ಕಾರ್ಯಕರ್ತರು ಬದ್ಧರಾಗಿರುತ್ತವೆ ಎಂದರು.
ಬಿಜೆಪಿ ಮುಖಂಡ ಡಾ. ಬಿ ಎಮ್ ಪಾಲಭಾಂವಿ ಮಾತನಾಡಿ, ಈರಣ್ಣ ಕಡಾಡಿಯವರ ಮೇಲೆ ಮಾಡಿರುವ ಹಲ್ಲೆಯು ಉದ್ದೇಶ ಪೂರ್ವಕವಾಗಿ ಮಾಡಲಾಗಿದ್ದು, ಕಾಣದ ಕೈಗಳು ತಮ್ಮ ಬೆಂಬಲಿಗರ ಮೂಲಕ ರಸ್ತೆ ಮಾರ್ಗವಾಗಿ ಸಂಚರಿಸುತ್ತಿದ್ದ ರಾಜ್ಯಸಭಾ ಸದಸ್ಯರ ಮೇಲೆ ಹಲ್ಲೆ ಮಾಡಿದ್ದಾರೆ ಇದರಲ್ಲಿ ಘಟಪ್ರಭಾ ಪೊಲೀಸ್ ಅಧಿಕಾರಿಗಳ ವೈಫಲದಿಂದ ಈ ಘಟನೆ ಜರುಗಿದ್ದು, ಕೂಡಲೇ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಯತ್ನಾಳ ಅವರ ವಿರುದ್ದ ಅಶ್ಲೀಲವಾಗಿ ಮಾತನಾಡಿದ ಮಹಿಳೆ ಯಾರು ಎಂಬುದನ್ನು ಗುರಿತಿಸಿ ಸೂಕ್ತ ಕ್ರಮಗೊಳ್ಳಬೇಕು ಇಲ್ಲಾವದರೇ ಪಂಚಮಸಾಲಿ ಸಮಾಜದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಪ್ಪ ಢವಳೇಶ್ವರ, ಬಿಜೆಪಿ ಅರಭಾವಿ ಮಡಂಲ ಪ್ರಧಾನ ಕಾರ್ಯದರ್ಶಿ ಮಾಹಾಂತೇಶ ಕುಡಚಿ, ಅರಭಾವಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಕೌಜಲಗಿ, ಬಿಜೆಪಿ ಪಕ್ಷದ ಮುಖಂಡರಾದ ಮಲ್ಲಪ್ಪ ನೇಮಗೌಡರ, ಕೃಷ್ಣಾ ನಾಶಿ, ಶಿವಬೋಧ ಬೆಳಗಲಿ, ಬಸವರಾಜ ಗಾಡವಿ, ಈಶ್ವರ ಮುರಗೋಡ, ಕುಮಾರ ಗಿರಡ್ಡಿ, ಅಶೋಕ ಶಿವಾಪೂರ ಇದ್ದರು.
Gadi Kannadiga > Local News > ಸತೀಶ ಬೆಂಬಲಿಗರಿಂದ ಕಡಾಡಿ ವಾಹನದ ಮೇಲೆ ಹಲ್ಲೆ ಖಂಡನೀಯ : ತಮ್ಮಣ್ಣ ದೇವರ
More important news
ವ್ಯಕ್ತಿ ನಾಪತ್ತೆ
30/01/2023
ನೇಕಾರರಿಗೆ ವಿಶೇಷ ಪ್ಯಾಕೇಜ್
30/01/2023
ಫ.೧ ರಂದು ಮಡಿವಾಳ ಮಾಚಿದೇವ ಜಯಂತಿ ಉತ್ಸವ
27/01/2023
ಜ.೨೮ ರಂದು ಸವಿತಾ ಮಹರ್ಷಿ ಜಯಂತಿ ಉತ್ಸವ
27/01/2023