This is the title of the web page
This is the title of the web page

Please assign a menu to the primary menu location under menu

Local News

ಹೋರಾಟವನ್ನೇ ಮಾಡದ ಬಿಜೆಪಿ ತಿರಂಗ ಹಾರಿಸುತ್ತಿರುವುದು ಹಾಸ್ಯಾಸ್ಪದ: ಸತೀಶ ಜಾರಕಿಹೊಳಿ


ಬೆಳಗಾವಿ: ಪ್ರತಿಯೊಂದರಲ್ಲೂ ರಾಜಕೀಯವನ್ನೇ ಮಾಡುವ ಬಿಜೆಪಿಯು ಮನೆ ಮನೆಯಲ್ಲೂ ಧ್ವಜ ಹಾರಿಸುವ ಕರೆಯಲ್ಲೂ ರಾಜಕೀಯ ಉದ್ದೇಶವನ್ನಿಟ್ಟುಕೊಂಡೆ ಮಾಡುತ್ತಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನೇ ಮಾಡದ ಬಿಜೆಪಿಗೆ ಧ್ವಜ ಹಾರಿಸುವ ನೈತಿಕತೆ ಎಲ್ಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ಪ್ರಶ್ನಿಸಿದ್ದಾರೆ.

ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಧಾನಿಗಳು ಸ್ವಾತಂತ್ಯ್ರ ದಿನದಂದು ಮನೆ ಮನೆ ಮೇಲೆ ತ್ರಿವರ್ಣ ದ್ವಜ ಹಾರಿಸಿ ಎಂಬ ಹೇಳಿಕೆಗೆ ಪ್ರತಿಕ್ರಯಿಸಿ ಬಿಜೆಪಿಗರು ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಳ್ಳದೇ ದೇಶ, ದೇಶಭಕ್ತಿ ಮತ್ತು ರಾಷ್ಟ್ರದ್ವಜ ಎಂದು ಭಾಷಣ ಮಾಡುವುದನ್ನು ನೋಡಿದರೆ ನಗು ಬರುತ್ತದೆ ತ್ರಿವರ್ಣ ದ್ವಜ ಹಾರಿಸುವ ನೈತಿಕತೆಯೇ ಅವರಿಗಿಲ್ಲ ಎಂದು ವಾಗ್ದಾಳಿ ಮಾಡಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಧರ್ಭದಲ್ಲಿ ನಮ್ಮ ಪಕ್ಷದ ಬಗ್ಗೆ ಹೇಳಬೇಕೆಂದರೆ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ನಾವು 75 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದು, ಅಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಪಾತ್ರ ಏನೂ, ಬಿಜೆಪಿ ಅವರ ಪಾತ್ರ ಏನು ಅಂತ ಜನರಿಗೆ ತಿಳಿಹೇಳುತ್ತೇವೆ. ಆಗಸ್ಟ್ 3 ರಂದು ನಡೆಯುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜನ್ಮದಿನದಂದು ಸುಮಾರು 50 ಸಾವಿರ ಜನ ಅಭಿಮಾನಿಗಳು ಬೆಳಗಾವಿಯಿಂದ ಹೋಗುತ್ತಾರೆ, ಅದೇರೀತಿ ಆಗಸ್ಟ್ 15ರಂದು ಬೆಂಗಳೂರಿನಲ್ಲಿ 1ಲಕ್ಷ ಜನ ದ್ವಜ ಹಿಡಿದು ಪಾದಯಾತ್ರೆ ಮಾಡುತ್ತಿದ್ದು, ಬೆಳಗಾವಿಯಿಂದ ಸಾವಿರಾರು ಜನ ಅದಕ್ಕೂ ಹೋಗುತ್ತಾರೆ ಎಂದರು.

ವೋಟು ಪರಿವರ್ತನೆಗಾಗಿ, ಆ ಸಮುದಾಯವನ್ನು ಸೆಳೆಯುವ ಹುನ್ನಾರದಿಂದ ಬುಡಕಟ್ಟು ಜನಾಂಗದ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು, ಈ ಹಿಂದೆ ಪರಿಶಿಷ್ಟ ಜಾತಿ ಅವರನ್ನು ರಾಷ್ಟ್ರಪತಿ ಮಾಡಿದಾಗಲೂ ಕೂಡಾ ಎಸ್ಸಿ ಸಮುದಾಯದ ಮೇಲೆ ದೌರ್ಜನ್ಯಗಳಾಗಿವೆ, ಕೊಡುವಂಥ ಅನುದಾನವೂ ಕಡಿತವಾಗಿವೆ, ಇವೆಲ್ಲ ಜನರನ್ನ ಮರಳು ಮಾಡಲು ಹೆಸರಿಗೆ ಮಾತ್ರ ಹುದ್ದೆ ನೀಡಿದ್ದಾರೆ ಎಲ್ಲವೂ ಆರೆಸಸ್ ಹಿಡಿತದಲ್ಲಿದೆ ಎಂದರು.


Gadi Kannadiga

Leave a Reply