ಬೆಳಗಾವಿ, ಮೇ.೨೪: ಬೆಳಗಾವಿ ರೇಲ್ವೆ ಸ್ಟೇಷನ್ ಬಸ್‌ನಿಲ್ದಾಣದಲ್ಲಿ ಶಾಪ್ ನಂ: ೯ ಅಂಗಡಿಯ ಪಕ್ಕದಲ್ಲಿ ಕಟ್ಟೆಯ ಹತ್ತಿರ ಮೇ ೨೩ ರಂದು ಮಧ್ಯಾಹ್ನ ೧ ಗಂಟೆಯಿಂದ ಸಂಜೆ ೫ ಗಂಟೆಯ ನಡುವಿನ ವೇಳೆಯಲಿ ಯಾವುದೋ ಖಾಯಿಲೆಯಿಂದ ಬಳಲಿ ಅಥವಾ ಅತಿಯಾಗಿ ಸರಾಯಿ ಕುಡಿದ ನಿಸೆಯಲ್ಲಿ ಕಟ್ಟೆಯ ಮೇಲಿಂದ ಹೊರಳಾಡಿ ಕೆಳಗೆ ಬಿದ್ದು ಅಥವಾ ಇನ್ನಾವುದೋ ಕಾರಣದಿಂದ ಮತೃನಾಗಿರಬಹುದು ಎಂದು ಕಂಡಬಂದಿದ್ದು, ಬೆಳಗಾವಿ ರೇಲ್ವೆ ಬಸ್‌ನಿಲ್ದಾಣದಲ್ಲಿರುವ ಸ್ವೀಟ್ ಮಾರ್ಟ ಅಂಗಡಿಯ ಉಜ್ವಲ ಬಲಿರಾಮ ಪಾಟೀಲ ಇವರು ರೇಲ್ವೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದಾಖಲಾದ ದೂರಿನ ಅನ್ವಯ ಕ್ಯಾಂಪ ಪೊಲೀಸ ಠಾಣೆಯುಡಿ ಸಂಖ್ಯೆ: ೧೩/೨೦೨೩ ಕಲಂ ೧೭೪ ಸಿ.ಆರ್.ಪಿ.ಸಿ ಪ್ರಕರಣ ದಾಖಲ ಮಾಡಿಕೊಳ್ಳಲಾಗಿರುತ್ತದೆ. ಸದರಿ ಮೃತನ ಶವವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದ ಕೋಲ್ಡ್ ಸ್ಟೋರೇಜ್‌ದಲ್ಲಿ ವಾರಸುದಾರರ ತಪಾಸಣೆ ಸಲುವಾಗಿ ಇರಿಸಲಾಗಿದೆ.
ಮೃತ ದೇಹದ ಚಹರೆ ಪಟ್ಟಿಯ ವಿವರ:
ಸುಮಾರು ೫೦-೫೫ ವರ್ಷದ ವ್ಯಕ್ತಿ, ಎತ್ತರ: ೫ ಪೂಟ ೮ ಇಂಚು, ಉದ್ದ ಮುಖ, ಗೋಧಿ ಮೆ Êಬಣ್ಣ, ಬಿಳಿ ಬಣ್ಣದ ಶರ್ಟ, ಒಳಗೆ ನೀಲಿ ಮತ್ತು ಕೆಂಪು ಮಿಶ್ರಿತ ಟೀ-ಶರ್ಟ, ಕಪ್ಪು ಬಣ್ಣದ ಪ್ಯಾಂಟ ಧರಿಸಿರುತ್ತಾನೆ. ಬಲ ಹಣೆಯ ಮೇಲೆ ಸ್ವಲ್ಪ ತೆರಚಿದ ಗಾಯ ಮತ್ತು ಕುತ್ತಿಗೆ ಕೆಳಭಾಗದಲ್ಲಿ ತೆರಚಿದ ಗಾಯದ ಗುರ್ತು ಇರುತ್ತದೆ.
ಸದರಿ ಮೃತನ ಬಗ್ಗೆ ಮಾಹಿತಿ/ವಾರಸುದಾರರು ಇದ್ದಲ್ಲಿ ಬೆಳಗಾವಿ ಕ್ಯಾಂಪ ಪೊಲೀಸ ಠಾಣೆಯ ಇನ್ಸಪೆಕ್ಟರ ದೂರವಾಣಿ ಸಂಖ್ಯೆ ೦೮೩೧-೨೪೦೫೨೩೪ ಅಥವಾ ಬೆಳಗಾವಿ ಪೊಲೀಸ ಕಂಟ್ರೋಲ್ ರೂಂ ಸಂಖ್ಯೆ ೦೮೩೧-೨೪೦೫೨೫೫ ಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ಕ್ಯಾಂಪ ಪೊಲೀಸ ಠಾಣೆಯ ಇನ್ಸಪೆಕ್ಟರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ
ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ
Suresh24/05/2023
posted on

More important news
ಮಹಿಳೆ ನಾಪತ್ತೆ
02/06/2023
ವ್ಯಕ್ತಿ ನಾಪತ್ತೆ
02/06/2023
ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023