This is the title of the web page
This is the title of the web page

Please assign a menu to the primary menu location under menu

State

ಕೆನಾಲೆಗೆ ಬಿದ್ದ ಕಾರು ಇಬ್ಬರ ಸಾವು


ಅಥಣಿ ; ಕಾರೊಂದು ಕೆನಾಲಕ್ಕೆ ಉರುಳಿದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸಾವಿಗೀಡಾಗಿದ್ದಾರೆ .

ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ಹತ್ತಿರ ಇರುವ ಕರಿಮಸೂತಿ ಲಿಫ್ಟ್ ಇರಿಗೇಷನ್  ಕೆನಾಲ್ ನಲ್ಲಿ  ಈ ದುರ್ಘಟನೆ ಸಂಭವಿಸಿದ್ದು  ಕಾರಿನಲ್ಲಿದ್ದ ಮೂವರ ಪೈಕಿ ಓರ್ವ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ .

ರಡ್ಡೇರಹಟ್ಟಿ ಗ್ರಾಮದ ಸುರೇಶ್ ತುಕಾರಾಮ ಪೂಜಾರಿ  ( 28)   ಮತ್ತು    ಮಹಾದೇವ್ ಶ್ರೀಶೈಲ ಚಿಗರಿ  (24) ಎಂಬಿಬ್ಬರು ಸಾವಿಗೀಡಾದ ದುರ್ದೈವಿಗಳಾಗಿದ್ದಾರೆ .ಅದೇ ಗ್ರಾಮದ ಶ್ರೀಕಾಂತ್ ನಾಗಪ್ಪಾ ನಡುವಿನಮನಿ (25) ಪ್ರಾಣಾಪಾಯದಿಂದ ಪಾರಾಗಿದ್ದಾರೆ .

ಅಥಣಿಯ ಅಗ್ನಿಶಾಮಕ ದಳದವರು ಮತ್ತು ಅಥಣಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕೆನ್ನಾಲಿಗೆ ಉರುಳಿದ್ದ ಕಾರನ್ನು ಮತ್ತು ಮೃತ ಶರೀರಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ .ಅಥಣಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ಜಿಲ್ಲಾ ಎಸ್ಪಿ ಕಚೇರಿ ಪ್ರಕಟಣೆ ತಿಳಿಸಿದೆ .

 

 


Gadi Kannadiga

Leave a Reply