This is the title of the web page
This is the title of the web page

Please assign a menu to the primary menu location under menu

Local News

ಚಮಕ್ ಕೊಡುತ್ತಿರುವ ಚಿರತೆ ಕ್ಯಾಮರಾದಲ್ಲಿ ಮತ್ತೆ ಪ್ರತ್ಯಕ್ಷ


ಬೆಳಗಾವಿ: ಕೆಲವು ದಿನಗಳಿಂದ ಅರಣ್ಯ ಇಲಾಖೆಯ ನಿದ್ದೆಗೆಡಿಸಿರುವ ಚಿರತೆ ಗಾಲ್ಪ್ ಮೈದಾನದಲ್ಲಿ ಮತ್ತೆ ಪ್ರತ್ಯಕ್ಷವಾಗಿದೆ.

ಬುದುವಾರ ರಾತ್ರಿ 10.22 ಕ್ಕೆ ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆ ಅಳವಡಿಸಿದ್ದ ಟ್ರ್ಯಾಪ್ ಕ್ಯಾಮರಾ ಸಂಖ್ಯೆ 10ರಲ್ಲಿ ಚಿರತೆ ಚಲನವಲನ ಸೆರೆಯಾಗಿದೆ. ಅರಣ್ಯ ಮತ್ತು ಪೊಲೀಸ್ ಇಲಾಖೆಯ ಜಂಟಿ ಕಾರ್ಯಾಚರಣೆ, ಗಜಪಡೆ ಕಾರ್ಯಾಚರಣೆ ನಡುವೆಯೂ ಸೆರೆ ಸಿಗದೆ ಓಡಾಡುತ್ತಿರುವ ಚಿರತೆ ರಾತ್ರಿ ಪ್ರತ್ಯಕ್ಷವಾಗಿದ್ದರಿಂದ ಅರಣ್ಯ ಇಲಾಖೆ ಮತ್ತಷ್ಟು ಅಲರ್ಟ್ ಆಗಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಇಂದು ಬೆಳಿಗ್ಗೆಯಿಂದ ಗಾಲ್ಪ್ ಮೈದಾನ ಸುತ್ತಲಿನ ಗಿಡಗಂಟಿಗಳನ್ನು ಜೆಸಿಬಿಗಳಿಂದ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

ಚಿರತೆಯು ಪದೆ ಪದೆ ಗಾಲ್ಪ ಮೈದಾನದಲ್ಲಿಯೇ ಕಾಣಿಸಿಕೊಳ್ಳುತ್ತಿರುವುದರಿಂದ ಹೆಜ್ಜೆ ಗುರುತನ್ನು ಆದರಿಸಿ ಕಾರ್ಯಾಚರಣೆ ಮಾಡಲಾಗುತ್ತಿದ್ದು ಸುತ್ತಲಿರುವ ಗಿಡಗಂಟಿಗಳಲ್ಲಿ ಅವಿತುಕೊಳುವ ಸಾಧ್ಯತೆಗಳಿರುವುದರಿಂದ ತೆರವು ಕಾರ್ಯ ನಡೆಯುತ್ತಿದೆ. ಇದರ ನಂತರ ಮತ್ತು ಗಜಪಡೆ ಕಾರ್ಯಾಚರಣೆಗಿಳಿದಿದ್ದು ಇಂದಾದರೂ ಚಿರತೆ ಬಲೆಗೆ ಬೀಳುತ್ತಾ ಕಾದು ನೋಡಬೇಕಿದೆ.


Gadi Kannadiga

Leave a Reply