This is the title of the web page
This is the title of the web page

Please assign a menu to the primary menu location under menu

Local News

ವಾ.ಕ.ರ.ಸಾ. ಸಂಸ್ಥೆ ಚಿಕ್ಕೋಡಿ ವಿಬಾಗ: ಗಣೇಶ ಹಬ್ಬದ ಪ್ರಯುಕ್ತ ಹೆಚ್ಚುವರಿ ಬಸ್ ಆರಂಭ


ಬೆಳಗಾವಿ,ಆ೨೬ : ಗಣೇಶ ಹಬ್ಬದ ಪ್ರಯುಕ್ತ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಚಿಕ್ಕೋಡಿ ವಿಭಾಗ ದಿಂದ ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ ,ಗೋಕಾಕ , ರಾಯಬಾಗ ,ಹಾಗೂ ಅಥಣಿ ಘಟಕಗಳಿಂದ ಬೆಂಗಳೂರ ಪೂಣೆ, ಮುಂಬಯಿ, ಹಾಗೂ ಇತರೆ ಅಂತರರಾಜ್ಯ ಮಾರ್ಗಗಳಿಗೆ ಆ ೨೮ ರಿಂದ ಸಪ್ಟೆಂಬರ್ ೧೧ ರ ವರೆಗೆ ಹಚ್ಚುವರಿ ವಾಹನಗಳನ್ನು ಆರಂಭಸಲಾಗಿದೆ.
ಗಣೇಶ ಹಬ್ಬ ಆಚರಿಸಿ ಮರಳುವ ಪ್ರಯಾಣಿಕರಿಗೆ ಚಿಕೋಡಿ ವಿಭಾಗ ನಿಪ್ಪಾಣಿ, ಸಂಕೇಶ್ವರ, ಗೋಕಾಕ, ರಾಯಬಾಗ, ಅಥಣಿ, ಹಾಗೂ ಹುಕ್ಕೇರಿ, ಘಟಕಗಳಿಂದ ಆ ೩೧ ಮತ್ತು ಸಪ್ಟೆಂಬರ್ ೦೪ ರಂದು ಹೆಚ್ಚುವರಿ ವಾಹನಗಳನ್ನು ಬೆಂಗಳೂರ ಮತ್ತು ಇತರೆ ಮಾರ್ಗಗಳಿಗೆ ಆರಂಭಸಲಾಗುವದು ಸಾರ್ವಜಿನಿಕ ಪ್ರಯಾಣಿಕರು ಈ ವಿಶೇಷ ಹಚ್ಚುವರಿ ಸಾರಿಗೆಗಳ ಪ್ರಯೋಜನ ಪಡೆಯಲು ವಾ.ಕ.ರ.ಸಾ.ಸಂಸ್ಥೆ ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply