This is the title of the web page
This is the title of the web page

Please assign a menu to the primary menu location under menu

Local News

ಅಖಿಲ ಕರ್ನಾಟಕ ಗಮಕ ಕಲಾ ಸಮ್ಮೇಳನದ ಸಮಾರೋಪ ಸಮಾರಂಭ ಗಮಕ ಕುರಿತು ಆಸಕ್ತಿ ಮೂಡಿಸಿದ ಯಶಸ್ವಿ ಸಮ್ಮೇಳನ


ಬೆಳಗಾವಿ: ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಗಮಕ ಕಲಾ ಪರಿಷತ್ತು ಹಾಗೂ ಬೆಳಗಾವಿಯ ಕರ್ನಾಟಕ ಗಮಕ ಕಲಾ ಪರಿಷತ್ತು ಜಿಲ್ಲಾ ಘಟಕ, ಶ್ರಿ ವಾಗ್ದೇವಿ ಸಂಗೀತ- ಗಮಕ ಕಲಾ ಸಂಘ ಇವರ ಸಹಯೋಗದೊಂದಿಗೆ ಇದೇ ದಿ. ೧೬ ಮತ್ತು ೧೭ ರಂದು ಅನಗೋಳದಲ್ಲಿರುವ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ೧೩ ನೇ ಅಖಿಲ ಕರ್ನಾಟಕ ಗಮಕ ಕಲಾ ಸಮ್ಮೇಳನದ ಸಮಾರೋಪ ಸಮಾರಂಭದ ಸಮಾರೋಪ ಸಮಾರಂಭ ಜರುಗಿತು.
ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ, ಲೇಖಕ ಎಲ್. ಎಲ್. ಶಾಸ್ತ್ರಿಯವರು ಮಾತನಾಡುತ್ತ ೧೩ ನೇ ಅಖಿಲ ಕರ್ನಾಟಕ ಗಮಕ ಕಲಾ ಸಮ್ಮೇಳನವು ಅತ್ಯಂತ ಯಶಸ್ವಿ ಸಮ್ಮೇಳನವಾಗಿತ್ತು. ಬೆಳಗಾವಿಯ ಜನರಿಗೆ ಅಭಿಮಾನ ಮತ್ತು ಸಂತೋಷ ತಂದಿದೆ. ಎರಡು ದಿನಗಳ ಕಾಲ ನಡೆದ ಸಮ್ಮೇಳನವು ಗಮಕ ಕಲೆಯ ಕುರಿತು ಮಾಹಿತಿ ಇಲ್ಲದ ಜನರಲ್ಲಿ ಪರಚಯಿಸುವುದರೊಂದಿಗೆ ಆಸಕ್ತಿ ಅಭಿರುಚಿಯನ್ನುಂಟು ಮಾಡಿದೆ ಎಂದು ಹೇಳಿದರು.
ಬೆಳಗಾವಿ ಜನತೆಗೆ ಗಮಕ ಕಲೆ ತಲುಪಿದೆ ಎಂದರೆ ಅದಕ್ಕೆ ಕಾರಣರಾದವರು ಶ್ರೀಮತಿ ಭಾರತಿ ಭಟ್ ಅವರು. ಮೊದಲು ಗಮಕ ಕಲೆಯನ್ನು ಕಲಿಸುವವರು ಇದ್ದಿರಲೇ ಇಲ್ಲ. ಹಿಂದುಸ್ಥಾನಿ ಸಂಗೀತ ಹೆಚ್ಚು ಪ್ರಭಾವ ಬೀರಿದ್ದ ಪ್ರದೇಶ ಇದಾಗಿದ್ದರಿಂದ ಗಮಕ ಬೆಳೆಯಲು ಹೆಚ್ಚು ಅವಕಾಶ ಇಲ್ಲಿರಲಿಲ್ಲ. ಸುಮಾರು ಮೂರು ದಶಕಗಳ ಹಿಂದೆ ದೂರದೂರಿಂದ ಶ್ರೀಮತಿ ಭಟ್ ಅವರು ಇಲ್ಲಿಗೆ ಬಂದು ಸಂಗೀತ ಶಾಲೆಯನ್ನು ಪ್ರಾರಂಭಿಸಿ ಇಂದು ನೂರಾರು ಶಿಷ್ಯರಲ್ಲಿ ಅದರ ಅಭಿರುಚಿಯನ್ನು ಹಂಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದ ಹೇಳಿದರು.
ಸರ್ವಾಧ್ಯಕ್ಷರಾದ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟ ಮಾತನಾಡಿ ಸಮ್ಮೇಳನ ಕರ‍್ಯವನ್ನು ಪ್ರಶಂಸಿಸುತ್ತ ಎಲ್ಲರ ಸಹಕಾರವನ್ನು ಕೊಂಡಾಡಿದರು. ಅಧ್ಯಕ್ಷರಾದ ಶ್ರೀಮತಿ ಶಾಂತಾ ಗೋಪಾಲ, ಶ್ರೀಮತಿ ಗಂಗಮ್ಮ ಕೇಶವ ಮೂರ್ತಿ, ಡಾ. ಸಿ. ಕೆ. ಜೋರಾಪುರ ಮಾತನಾಡಿದರು.
ಸರ್ವಾಧ್ಯಕ್ಷರಾದ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟ ಅವರಿಗೆ ಶಾಲು ಹೊದಿಸಿ, ಫಲಪುಷ್ಷ, ನೆನಪಿನ ಕಾಣಿಕೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು
ಎಂ. ಎ. ಪಾಟೀಲ, ಹೇಮಾ ಸೊನೊಳ್ಳಿ, ಆನಂದ ಪುರಾಣಿಕ, ಸುಧಾ ಪಾಟೀಲ, ಜಯಶೀಲಾ ನಿರಾಕಾರಿ, ಸುಜಾತಾ ದಪ್ತರದಾರ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾವಗೀತೆ, ಭಕ್ತಿಗೀತೆ, ವಾಚನ-ವ್ಯಾಖ್ಯಾನ, ಕೋಲಾಟ, ದೃಶ್ಯರೂಪ ಮುಂತಾದವುಗಳು ಜರುಗಿದವು. ಶ್ರೀ ವಾಗ್ದೇವಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶ್ರೀಮತಿ ರಾಜೇಶ್ವರಿ ಹಿರೇಮಠ ನಿರೂಪಿಸಿದರು.


Leave a Reply