ಬೆಳಗಾವಿ : 12ನೇ ಶತಮಾನದಲ್ಲಿಯೇ ಅನುಭವ ಮಂಟಪ ಎಂಬ ವಿಶ್ವದ ಮೊದಲ ಸಂಸತ್ತು
ಸ್ಥಾಪಿಸಿದ ಹೆಗ್ಗಳಿಕೆ ಬಸವಣ್ಣನವರಿಗೆ ,ಇಂದು ನಾನು ರಾಜಕೀಯವಾಗಿ ಮುಂದೆ ಬರಲು
ಬಸವಾದಿ ಶರಣರ ವಚನಗಳೇ ಕಾರಣ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಅವರಿಂದು ಬೆಳಗಾವಿಯಲ್ಲಿ ಅವರಿಂದು ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ
ಡಾ ಶಿವಬಸವ ಮಹಾಸ್ವಾಮಿಗಳವರ ಜಯಂತಿ ಮಹೋತ್ಸವದ ಅಂಗವಾಗಿ ಏರ್ಪಡಿಸಲಾದ ಅಕ್ಕನ
ಬಳಗದ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈಗ ನಾವು ವಿಧಾನಸೌಧ, ಸಂಸತ್ತು ನೋಡುತ್ತಿದ್ದೇವೆ ಆದರೆ 12ನೇ ಶತಮಾನದಲ್ಲಿಯೇ ಅನುಭವ
ಮಂಟಪ ಎಂಬ ವಿಶ್ವದ ಮೊದಲ ಸಂಸತ್ತು ಸ್ಥಾಪಿಸಿದ ಹೆಗ್ಗಳಿಕೆ ಬಸವಣ್ಣನವರಿಗೆ
ಸಲ್ಲುತ್ತದೆ. ಅಲ್ಲಮಪ್ರಭುಗಳು, ಅಕ್ಕಮಹಾದೇವಿ ಸೇರಿ ಅನೇಕ ಶರಣರು ಇದರಲ್ಲಿ
ಭಾಗಿಯಾಗಿದ್ದು ನಮ್ಮೆಲ್ಲರ ಹೆಮ್ಮೆ. ಭೂಮಿ, ಗೋವು, ನದಿ, ಪ್ರಕೃತಿಗೆ ನಮ್ಮ
ದೇಶದಲ್ಲಿ ಪವಿತ್ರ ತಾಯಿಯ ಸ್ಥಾನ ನೀಡಲಾಗಿದೆ. ಪೂಜ್ಯರು ತಾಯಂದಿರಿಗೆ ಸಂಸ್ಕಾರ
ಕೊಟ್ಟಾಗ ತಾಯಂದಿರು ಮಕ್ಕಳಿಗೆ ಸಂಸ್ಕಾರ ಕೊಡಲು ಸಾಧ್ಯವಾಗುತ್ತದೆ. ಸಮಾಜ ಸದೃಢ,
ಸಂಸ್ಕಾರಯುತವಾಗಲು ಸ್ವಾಮೀಜಿಗಳ ಅವಶ್ಯಕತೆಯಿದೆ. ನಾಗನೂರು ಮಠ ಅನ್ನ, ಅಕ್ಷರ ದಾಸೋಹ
ಮಾಡುವ ಮೂಲಕ ಅನೇಕ ಮಕ್ಕಳಿಗೆ ಬದುಕು ಕಟ್ಟಿ ಕೊಟ್ಟಿದೆ ಎಂದರು.
ಕಾರ್ಯಕ್ರಮದಲ್ಲಿ ಅಮೃತ ಮಹೋತ್ಸವ ಗೌರವ ಸ್ವೀಕರಿಸಿ ಮಾತನಾಡಿದ ನಿವೃತ್ತ ಪ್ರಚಾರ
ಶ್ರೀ ಬಿ ಎಸ್ ಗವಿಮಠ ಅವರು ಮಾತನಾಡ ನಾವು ಎಷ್ಟು ವರ್ಷ ಬದುಕಿದರೂ ಅರ್ಥಪೂರ್ಣ ಬದುಕು
ನಮ್ಮ ಬದುಕಾಗಬೇಕು. ಬದುಕು ಕ್ಷಣಿಕ. ಪ್ರತಿಕ್ಷಣ ಬದುಕಬೇಕು. ಕ್ಷಣಿಕ ಬದುಕು
ಸಾರ್ಥಗೊಳಿಸಿಕೊಳ್ಳಬೇಕು. ಸಮಾಜದಿಂದ ರೂಪುಗೊಂಡು ಸಮಾಜಮುಖಿ ಆಗಬೇಕು.
ರಾಜಕಾರಣಕ್ಕಿಂತ ಸಮಾಜಕಾರಣದ ಅವಶ್ಯಕತೆಯಿದೆ. ಎಷ್ಟು ಕಾಲ ಬದುಕಿದ್ದೀವಿ ಎನ್ನುವುದು
ಮುಖ್ಯವಲ್ಲ ಅರ್ಥಪೂರ್ಣ ಬದುಕಿಗೆ ಸಾಕ್ಷಿ ಆಗಬೇಕು ಅತ್ಯುತ್ತಮವಾಗಿ ಬದುಕಿ ಬದುಕನ್ನು
ಸ್ವಾರ್ಥಿಗೊಳಿಸಬೇಕು ಧರ್ಮದಿಂದ ಬದುಕಿ ಸಮಾಜಕ್ಕೆ ಮಾದರಿಯಾಗಬೇಕು ಎಂದವರು ನುಡಿದರು
.
ಅದ್ವಿತೀಯ ಸಾಮಾಜಿಕ ಕಾರ್ಯ ಮಾಡಿದ ಗಣ್ಯತಿ ಗಣ್ಯರನ್ನು ಕರೆದು ಗೌರವಿಸುವ ಹಳೆಯ
ಪರಂಪರೆಯನ್ನು ಇಂದಿಗೂ ಶ್ರೀಮಠ ಮುಂದುವರಿಸಿರುವುದು ಸ್ವಾಗತರ್ಹ ಎಂದು ಅವರು ಹೇಳಿದರು
ಅಕ್ಕನ ಬಳಗ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಮಹಿಳೆಯರಿಗೆ ಬಹಳ ಹಿಂದೆಯೇ
ಸ್ವಾತಂತ್ರ್ಯ ಮತ್ತು ಸಾಮಾಜಿಕ ಕಾರ್ಯಕ್ಕೆ ಅನುವು ಮಾಡಿಕೊಟ್ಟ ಮಠದ ಕಾರ್ಯವನ್ನು
ಬಿಂಬಿಸುತ್ತದೆ ಎಂದರು ನಾವು ಎಷ್ಟು ವರ್ಷ ಬದುಕಿದರೂ ಅರ್ಥಪೂರ್ಣ ಬದುಕು ನಮ್ಮ
ಬದುಕಾಗಬೇಕು ಎಂದರು.
ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಜಿಯವರ
ಸಾನಿಧ್ಯದಲ್ಲಿ ,ಘಟಪ್ರಭಾ- ಮುಂಡರಗಿಯ ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠದ
ಶ್ರೀ.ಮಲ್ಲಿಕಾರ್ಜುನ ಮಹಾಸ್ವಾಮಿಗಳ ನಡೆದ ಈ ಕಾರ್ಯಕ್ರಮದ ನೇತೃತ್ವವನ್ನು ಬೆಲ್ಲದ
ಬಾಗೇವಾಡಿ ವಿರಕ್ತಮಠದ ಶ್ರೀ. ಶಿವಾನಂದ ಮಹಾಸ್ವಾಮಿಗಳು ಮತ್ತು ಶೆಗುಣಿಶಿ ವಿರಕ್ತಮಠದ
ಶ್ರೀ.ಮಹಾಂತ ಸ್ವಾಮಿಗಳು ವಹಿಸಿದ್ದರು.
,” ಧರೆಗಿಳಿದ ಶರಣಿಯರು “ಎಂಬ ಜಯಶ್ರೀ ನಿರಾಕರಿ ವಿರಚಿತ ಗ್ರಂಥವನ್ನು
ಲೋಕಾರ್ಪಣೆಗೊಳಿಸಿದರು ಗ್ರಂಥದ ಸಂಪಾದಕೀಯ ರಾದ ಶ್ರೀಮತಿಯರಾದ ನೀಲಗಂಗಾ ಚರಂತಿಮಠ
,ಜಯಶ್ರೀ ನಿರಾಕರಿ, ಗದಿಗೆಪ್ಪಗೌಡರ ಮತ್ತು ಜಯಶೀಲಾ ಬ್ಯಾಕೋಡ್ ಅವರನ್ನು ಶ್ರೀಮಠದಿಂದ
ಸತ್ಕರಿಸಲಾಯಿತು.
ಬೆಳಗಾವಿ ಅಕ್ಕನ ಬಳಗದ ಅಧ್ಯಕ್ಷ ಶ್ರೀಮತಿ ಜಯಶ್ರೀ ನಿರಾಕರಿ ಅಧ್ಯಕ್ಷತೆ
ವಹಿಸಿದ್ದರು. ಇದೇ ಸಂದರ್ಭದಲ್ಲಿ ಅಮೃತ ಮಹೋತ್ಸವವನ್ನು ಆಚರಿಸಿಕೊಂಡ ನಿವೃತ್ತ
ಪ್ರಾಚಾರ್ಯ ಡಾ. ಎಫ್.ವಿ.ಮಾನವಿ ,ಸಂಸದ ಅಣ್ಣ ಸಾಹೇಬ್ ಜೊಲ್ಲೆ ಮತ್ತು ಶ್ರೀಮತಿ
ಶಶಿಕಲಾ ಜೊಲ್ಲೆ ದಂಪತಿಗಳನ್ನು , ಬೆಳಗಾವಿ ಶಾಸಕ ಅನಿಲ್ ಬೆನಕೆ ಶ್ರ್ಶ್ರೀಮಠದಿಂದ
ವಿಶೇಷವಾಗಿ ಸತ್ಕರಿಸಲಾಯಿತು. ನಂತರ ಅಕ್ಕನ ಬಳಗದ ತಾಯಿಯಂದಿರಿಂದ ಸಾಂಸ್ಕೃತಿಕ
ಕಾರ್ಯಕ್ರಮಗಳು ಜರುಗಿದವು.
ಶ್ರೀಮತಿ ಗಿರಿಜಾ ಮುಳುಗುಂದ ಅವರು ಸ್ವಾಗತಿಸಿದರು ಶ್ರೀಮತಿ ಗುರುದೇವಿ ಹುಲಪ್ಪನವರ
ಮಠ ಕಾರ್ಯಕ್ರಮ ನಿರ್ವಹಿಸಿದರು ಶ್ರೀಮತಿ ಜ್ಯೋತಿ ಬದಾಮಿ ಅವರು ಶರಣು ಸಮರ್ಪಣೆ
ಸಲ್ಲಿಸಿದರು ಶ್ರೀಮತಿ ವಿಜಯಲಕ್ಷ್ಮಿ ಹೊಸ ಮನೆ ಅವರು ವಚನ ಪ್ರಾರ್ಥನೆ ಸಲ್ಲಿಸಿದರು. ಲಿಂಗಾಯಿತ ಸಂಘಟನೆ ಅಧ್ಯಕ್ಷ ಬಸವರಾಜ ರೊಟ್ಟಿ,
ಶ್ರೀಮತಿ ನೀಲಗಂಗಾ ಚರಂತಿಮಠ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಅಶೋಕ್ ಮಳಗಲಿ
ಮಾಜಿ ನಗರ ಸೇವಕಿ ಸರಳ ಹೇರೆಕರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Gadi Kannadiga > State > ವಿಶ್ವದ ಮೊದಲ ಸಂಸತ್ತಿನ ಪರಿಕಲ್ಪನೆ ಬಂದಿದ್ದೆ ಅನುಭವ ಮಂಟಪ ಮೂಲಕ – ಶಶಿಕಲಾ ಜೊಲ್ಲೆ
More important news
ಲಿಂಗಾಯತ ಸಂಘಟನೆಯಿಂದ ಮಹಿಳಾ ದಿನಾಚರಣೆ
20/03/2023
ಶ್ರೀ ರೇಣುಕಾಚಾರ್ಯ ಜಯಂತಿ ಮಾ.೧೯ಕ್ಕೆ
17/03/2023
ಸಾರ್ವಜನಿಕರ ಗಮನಕ್ಕೆ
17/03/2023
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
17/03/2023
ಸಂತೆ ಕರ ಲಿಲಾವು
16/03/2023