ಬೆಳಗಾವಿ : ವಿದ್ಯಾರ್ಥಿಗಳ ಮೇಲೆ ಕಂಡಕ್ಟರ್ ಏರಿ ಹೋದ ಪರಿಣಾಮವಾಗಿ ಸಾವಕಾಶವಾಗಿ ಚಲಿಸುತ್ತಿದ್ದ ಬಸ್ಸಿನಿಂದ ವಿದ್ಯಾರ್ಥಿಯೊಬ್ಬ ಕೆಳಗೆ ಬಿದ್ದ ಘಟನೆ ಬೆಳಗಾವಿ ನಗರದಲ್ಲಿ ಇಂದು ಮಧ್ಯಾಹ್ನ 1 ಗಂಟೆ 50 ನಿಮಿಷದ ಸುಮಾರಿಗೆ ಸಿವಿಲ್ ಆಸ್ಪತ್ರೆ ಎದುರು ನಡೆಯಿತು.
ನಗರದ ಕೊಲ್ಲಾಪೂರ ಸರ್ಕಲ್ ನಲ್ಲಿ ಟ್ರಾಫಿಕ್ ಸಿಗ್ನಲ್ ಹತ್ತಿರ ನಿಂತಿದ್ದ ಬಸ್ಸು ಟ್ರಾಫಿಕ್ ಗ್ರೀನ್ ಸಿಗ್ನಲ್ ಬಿದ್ದೊಡನೆ ಚಲಿಸಿತು ಸರ್ಕಲ್ ದಾಟಿ ಮುಂದೆ ಬಂದಾಗ ಬಸ್ಸು ಸಾವಕಾಶವಾಗಿ ಚಲಿಸುತ್ತಿತ್ತು ಓಡುತ್ತ ಬಂದ ವಿದ್ಯಾರ್ಥಿಗಳಿಬ್ಬರು ಬಸ್ಸಿನಲ್ಲಿ ಏರಿದರು ನಾನು ಸೌಮ್ಯವಾಗಿ ಹೀಗೆ ಮಾಡಬಾರದು ಎಂದು ಹೇಳಿದೆ ಬಹಳ ಹೊತ್ತಿನಂತರ ಈ ಬಸ್ ಬಂತು ಓಡಿಬಂದು ಏರಿದೆವು ಎಂದು ಹುಡುಗರು ಸಮಜಾಯಿಷಿ ನೀಡಿದರು .ಅಲ್ಲಿಗೆ ಬಂದ ಕಂಡಕ್ಟರ್ ಹುಡುಗರನ್ನು ಬಯ್ಯತೊಡಗಿದ, ಅವಾಚ್ಯ ಶಬ್ದಗಳಿಂದ ಬೈದ,ಆ ಹುಡುಗರು ಉತ್ತರಿಸದೆ ತಮ್ಮ ಪಾಸುಗಳನ್ನು ತೊರಿಸಿದರು.ಅಷ್ಟಕ್ಕೆ ಸುಮ್ಮನಾಗದ ಕಂಡಕ್ಟರ್ ಪಾಸುಗಳನ್ನು ಕಸಿದುಕೊಳ್ಳಲು ಆ ಹುಡುಗರ ಮೇಲೆ ಏರಿ ಹೋದ ಆಗಲೂ ಬಸ್ ಸಾವಕಾಶವಾಗಿ ಚಲಿಸುತ್ತಲೇ ಇತ್ತು ಕಂಡಕ್ಟರ್ನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಇಬ್ಬರು ಗಡಿಬಿಡಿಯಿಂದ ಕೆಳಗೆ ಇಳಿಯುವಾಗ ಒಬ್ಬ ಬೀಳುವುದನ್ನು ತಪ್ಪಿಸಿಕೊಂಡ ಸಾವರಿಸಿಕೊಂಡ ಮತ್ತೊಬ್ಬನಿಗೆ ಬ್ಯಾಲೆನ್ಸ್ ಆಗಲಿಲ್ಲ ಬಿದ್ದೇಬಿಟ್ಟ ನನ್ನನ್ನು ಸೇರಿದಂತೆ ನಾಲ್ಕಾರು ಜನ ಜೋರಾಗಿ ಹೋ ಎಂದು ಕಿರುಚಿದೆವು ನಂತರ ಕಂಡಕ್ಟರ್ ನಡೆದುಕೊಂಡ ರೀತಿಗೆ ಇದು ಸರಿಯಲ್ಲ ಎಂದು ನಾವು ನಾಲ್ಕಾರು ಸೇರಿ ಹೇಳಿದೆವು ಒಬ್ಬ ಹುಡುಗ ಬಿದ್ದಾಗ ಬಸ್ಸಿನ ಹಿಂಭಾಗ ಅವನಿಗೆ ಬಡಿಯಿತೋ ಅನ್ನುವ ಆತಂಕ ಹಿಂದೆ ನೋಡಿದಾಗ ಆ ಹುಡುಗ ಬಿದ್ದಲ್ಲಿ ಎದ್ದು ಕುಳಿತಿದ್ದ ,ಇತ್ತ ಕಂಡೆಕ್ಟರ್ ನಮ್ಮೊಂದಿಗೆ ವಾದ ಹಾಕುತ್ತಿದ್ದ ಅಷ್ಟರಲ್ಲಿ ಚನ್ನಮ್ಮ ಸರ್ಕಲ್ ಬಂತು ನಾನು ಬಸ್ಸಿನಿಂದ ಇಳಿದೆ , ನೀಲಿ ಬಣ್ಣದ ಮಿನಿಬಸ್ ಅದು ,ಕಾಕತಿ ಕಡೆಯಿಂದ ಬಂದಿತ್ತು ,ಸಿಬಿಟಿ ಕಡೆ ಹೋಗುತ್ತಿತ್ತು ವಿದ್ಯಾರ್ಥಿಗಳೊಂದಿಗೆ ಕಂಡೆಕ್ಟರ್ ನಡೆದುಕೊಂಡ ರೀತಿ ,ಆ ಮಕ್ಕಳು ಚಲಿಸುತ್ತಿದ್ದ ಬಸ್ಸಿನಿಂದ ಕೆಳಗೆ ಬಿದ್ದದ್ದು ನನಗೆ ಶಾಕ್ ಆದಂತಾಗಿ ಬಸ್ ನಂಬರ್ ತೆಗೆದುಕೊಳ್ಳಲು ಮರೆತುಬಿಟ್ಟೆ ಬಹಳ ವರ್ಷಗಳ ನಂತರ ಸಿಟಿ ಬಸ್ಸಿನಲ್ಲಿ ಬಂದಿದ್ದ ನನಗೆ ಆಗಿದ್ದು ಅತ್ಯಂತ ಕೆಟ್ಟ ಅನುಭವ .
ಕಾಲೇಜಿನ ವಿದ್ಯಾರ್ಥಿಗಳಾಗಿದ್ದರೂ ಅವು ಸಣ್ಣ ಮಕ್ಕಳೇ ,ಮಕ್ಕಳು ತಪ್ಪು ಮಾಡುವುದು ಸಹಜ ಹಾಗಂತ ಈ ರೀತಿ ಕೆಟ್ಟದಾಗಿ ನಡೆದುಕೊಂಡು ಅವರ ಜೀವಕ್ಕೇನಾದ್ರೂ ಹಾನಿಯಾಗಿದ್ದರೆ ಯಾರು ಜವಾಬ್ದಾರಿ ಹೊರಬೇಕಾಗಿತ್ತು ?
” ಸೂಳೆ ಮಕ್ಕಳು” ಅಂತ ಕಂಡಕ್ಟರ್ ಅ೦ದ್ದಿದ್ದು ಕೇಳಿ ಸಿಟ್ಟು ಬಂತು ,ಸೌಜನ್ಯತೆಯಿಂದ ವರ್ತನೆ ಮಾಡಿ ಸರಿಯಾಗಿ ಮಾತಾಡಿ ಎಂದು ಕಂಡಕ್ಟರ್ ನನ್ನು ನಾನೂ ಸೇರಿದಂತೆ ಕೆಲವರು ಜೋರು ಮಾಡಿದ್ದು ಆಯ್ತು ,ದಿನನಿತ್ಯ ಇಂತಹ ಎಷ್ಟು ಪ್ರಕರಣಗಳು ನಡೆಯುತ್ತವೋ ಏನೋ ವಿದ್ಯಾರ್ಥಿಗಳಿಗೆ ಪಾಸ್ ನೀಡಿದ್ದು ಸರ್ಕಾರ ,ಅದು ಸರ್ಕಾರದ ಯೋಜನೆ ಅದನ್ನು ಪ್ರಶ್ನಿಸುವ ಹಕ್ಕು ಕಂಡಕ್ಟರನಿಗೆ ಇಲ್ಲ ,ಯಾರು ಯಾರ ಮನೆಯಿಂದಲೂ ಕೊಡುತ್ತಿಲ್ಲ ,ಸರ್ಕಾರದ ಯೋಜನೆಯ ಲಾಭವನ್ನು ಕಂಡಕ್ಟರ್ ನನ್ನ ಮಕ್ಕಳು ಮತ್ತು ಸಂಬಂಧಿಕರು ಅನುಭವಿಸುತ್ತಿರಬಹುದು , ವಿದ್ಯಾರ್ಥಿಗಳೊಂದಿಗೆ ಸೌಜನ್ಯದಿಂದ ವರ್ತಿಸುವುದನ್ನು ಸಾರಿಗೆ ಸಂಸ್ಥೆಯವರು ತಮ್ಮ ಸಿಬ್ಬಂದಿಗೆ ಕಲಿಸಿಕೊಡುವ ಅಗತ್ಯವಿದೆ.
KSRTC ಹಿರಿಯ ಅಧಿಕಾರಿಗಳು ಈ ಕುರಿತು ಗಂಭೀರವಾಗಿ ಪರಿಗಣಿಸಿ ತಮ್ಮ ಸಿಬ್ಬಂದಿಗೆ ಸೌಜನ್ಯದ ವರ್ತನೆಯನ್ನು ಹೇಳಿಕೊಡುವ ಅಗತ್ಯವಿದೆ .ಸಾರ್ವಜನಿಕರೂ ಸಹ ಇಂಥ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇದೆ ಏಕೆಂದರೆ ಎಲ್ಲರ ಮಕ್ಕಳು ಖಾಸಗಿ ಬಸ್ಸಿನಲ್ಲಿ ಓಡಾಡುವುದಿಲ್ಲ ,೮೦% ವಿದ್ಯಾರ್ಥಿಗಳು ಓಡಾಡುವುದು ಸರ್ಕಾರಿ ಬಸ್ಸುಗಳ ಎನ್ನುವುದನ್ನು ಸಾರ್ವಜನಿಕರೆಲ್ಲರು ಅರ್ಥಮಾಡಿಕೊಳ್ಳಬೇಕಿದೆ .ಮಕ್ಕಳ ಸುರಕ್ಷತೆಯು ಬಹಳ ಮುಖ್ಯ .