This is the title of the web page
This is the title of the web page

Please assign a menu to the primary menu location under menu

State

ಸಂವಿಧಾನ ಎಂಬುದು ನಿಂತ ನೀರಲ್ಲ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ


ಕುಷ್ಟಗಿ:-ಸಂವಿಧಾನ ಎಂಬುದು ನಿಂತ ನೀರಲ್ಲ ನಮ್ಮ ಹಿರಿಯರು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನ ಮಾಡಿ ಸ್ವತಂತ್ರವನ್ನು ತಂದುಕೊಟ್ಟಿದ್ದಾರೆ ಆದರೆ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರು ಕೊಟ್ಟಂತಹ ನಮ್ಮ ಸಂವಿಧಾನ ನಿಂತ ನೀರಲ್ಲ ಹರಿಯುವ ನೀರಿದ್ದಂತೆ ಸಂವಿಧಾನದ ಮಾರ್ಗದರ್ಶನದೊಂದಿಗೆ ನಮ್ಮ ಸಂವಿಧಾನಕ್ಕೆ ಗೌರವ ಕೊಡುವಂತ ಕರ್ತವ್ಯ ನಮ್ಮದಾಗಿದೆ. ಆದ್ದರಿಂದ ಪ್ರತಿಯೊಬ್ಬರು ಗೌರವ ಕೊಟ್ಟು ದೇಶದ ಒಳಿತಿಗಾಗಿ ಪ್ರತಿಯೊಬ್ಬರು ಶ್ರಮಿಸಬೇಕಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.

ಇಲ್ಲಿನ ತಾಲೂಕು ಆಡಳಿತ ತಾಲೂಕ ಪಂಚಾಯತ್ ಕುಷ್ಟಗಿ ಇವರ ಸಂಯುಕ್ತಾಶ್ರಯದಲ್ಲಿ ೭೩ನೇ ಗಣರಾಜೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ನಮ್ಮ ಭರತ ದೇಶ ಮುನ್ನಡೆಯಬೇಕಾಗಿದೆ ಯುವಕರ ಪಾತ್ರ ಬಹು ಪ್ರಮುಖವಾಗಿದ್ದು ಯುವಕರು ಶಿಕ್ಷಣವಂತರಾಗಿ ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದೆ ಎಂದರು.

ತಾಲೂಕು ದಂಡಾಧಿಕಾರಿ ಎಂ. ಸಿದ್ದೇಶ ೭೩ ಗಣರಾಜೋತ್ಸವದ ದ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದಕ್ಕು ಮುನ್ನ ಶಾಲಾ ಮಕ್ಕಳಿಂದ ಮತ್ತು ಪೋಲಿಸ್ ಇಲಾಖೆಯಿಂದ, ಗ್ರಹ ರಕ್ಷಕದಳ ಸಿಬ್ಬಂದಿಯಿಂದಿ ಪಥ ಸಂಚಲನ ಹಾಗೂ ಪರೇಡ್ ಗೌರವವಂದನೆ ಕಾರ್ಯಕ್ರಮ ನಡೆಯಿತು.

ನಂತರ ಶಾಲಾ ವಿದ್ಯಾರ್ಥಿಗಳಿಂದ ದೇಶ ಭಕ್ತಿಗೀತೆಗಳು ನೆಡೆದವು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಇಓ ಪ್ರಭು ಚವ್ಹಾಣ, ಸಿ.ಪಿ.ಐ ನಿಂಗಪ್ಪ ರುದ್ರಕೊಳ್ಳ, ಬಿಇಒ ಚನ್ನಬಸಪ್ಪ ಮಗ್ಗದ್, ನಾಗಪ್ಪ ಬಿಳಿಯಪ್ಪನವರ್, ಜೀವನಸಾಬ ಬಿನ್ನಾಳ, ರಾಘವೇಂದ್ರ ಕೊಂಡಗುರಿ, ರವೀಂದ್ರ ಬಾಕಳೆ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Gadi Kannadiga

Leave a Reply