ಮೂಡಲಗಿ: ಸಂವಿಧಾನವು ಭಾರತವನ್ನು ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಹಾಗೂ ಕಾನೂನಿನ ಮುಂದೆ ಎಲ್ಲ ಭಾರತೀಯರನ್ನು ಸಮಾನರನ್ನಾಗಿ ಮಾಡಿದೆ ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ರಾಜ್ಯ ಶಾಸ್ತ್ರ ಪ್ರಾಧ್ಯಾಪಕ ಪ್ರೊ.ದೀಪಕ ಹವಳೆ ಅಭಿಪ್ರಾಯಪಟ್ಟರು.
ಶನಿವಾರದಂದು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿದ ಭಾರತ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿ ಅವರು, ಸಂವಿಧಾನ ತಿದ್ದು ಪಡೆಯ ನಂತರ ಭಾರತವು ಸಮಾಜವಾದಿ, ಜಾತ್ಯಾತೀತ ರಾಷ್ಟ್ರವೂ ಕೂಡ ಆಗಿದೆ ಎಂದ ಅವರು ಸಂವಿಧಾನ ರಚನೆಗೆ ಎರಡು ವರ್ಷ ೧೬ ದಿನ ಸಮಯ ಹಾಗೂ ೬ಕೋಟಿ ೪೦ ಲಕ್ಷ ರೂಪಾಯಿ ಖರ್ಚಾಗಿದ್ದು. ಜಗತ್ತಿನ ಶ್ರೇಷ್ಠ ಸಂವಿಧಾನಗಳಲ್ಲಿ ಭಾರತದ ಸಂವಿಧಾನವು ಒಂದು ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎ.ಪಿ.ರಡ್ಡಿ ಅವರು ವಿದ್ಯಾರ್ಥಿಗಳಿಗೆ ಭಾರತ ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಸ್ವಾತಂತ್ರö್ಯ ನಂತರ ದೇಶಕ್ಕೆ ಒಂದು ಕಾನೂನು ಚೌಕಟ್ಟಿನ ಅವಶ್ಯಕತೆ ಇತ್ತು. ಅದನ್ನು ಪೂರೈಸಲು ಸಂವಿಧಾನ ರೂಪಗೊಂಡಿದು, ದೇಶವಾಸಿಗಳು ಸಂವಿಧಾನದ ಕನಿಷ್ಠ ಅರಿವು ಪಡೆದುಕೊಳ್ಳಬೇಕೆಂದರು.
ಪ್ರೊ.ಸಂಗಮೇಶ ಗುಜಗೊಂಡ ಮಾತನಾಡಿ, ಸ್ವಾಭಿಮಾನ ಮತ್ತು ಪ್ರಗತಿಯಿಂದ ಬದುಕಲು ಕಾನೂನು ಅರಿವು ಇರಬೇಕೆಂದು ಸಂವಿಧಾನ ದಿನಾಚರಣೆ ಮಾಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಎನ್.ಎಸ್.ಎಸ್.ಘಟಕಾಧಿಕಾರಿ ಡಾ.ಎಸ್.ಎಲ್ .ಚಿತ್ರಗಾರ, ಡಾ.ಬಿ.ಸಿ.ಪಾಟೀಲ, ಗ್ರಥಪಾಲಕ ಬಸವಂತ ಬರಗಾಲಿ, ಪ್ರೊಎಸ್.ಸಿ.ಮಂಟೂರ, ವೆಂಕಟೇಶ ಪಾಟೀಲ, ರಮೇಶ ಖಾನಪ್ಪಗೋಳ ಮತ್ತಿತರರು ಇದ್ದರು.
Gadi Kannadiga > Local News > ಸಂವಿಧಾನ ಭಾರತವನ್ನು ಸಾರ್ವಬೌಮ ಗಣರಾಜ್ಯವನ್ನಾಗಿಸಿದೆ-ಪ್ರೊ. .ದೀಪಕ ಹವಳೆ
More important news
ವ್ಯಕ್ತಿ ನಾಪತ್ತೆ
30/01/2023
ನೇಕಾರರಿಗೆ ವಿಶೇಷ ಪ್ಯಾಕೇಜ್
30/01/2023
ಫ.೧ ರಂದು ಮಡಿವಾಳ ಮಾಚಿದೇವ ಜಯಂತಿ ಉತ್ಸವ
27/01/2023
ಜ.೨೮ ರಂದು ಸವಿತಾ ಮಹರ್ಷಿ ಜಯಂತಿ ಉತ್ಸವ
27/01/2023