This is the title of the web page
This is the title of the web page

Please assign a menu to the primary menu location under menu

Local News

ದೇವಸ್ಥಾನಗಳ ನಿರ್ಮಾಣದಿಂದ ಗ್ರಾಮಗಳ ವಾತಾವರಣವೇ ಬದಲು : ಚನ್ನರಾಜ ಹಟ್ಟಿಹೊಳಿ


ಬೆಳಗಾವಿ : ದೇವಸ್ಥಾನಗಳ ನಿರ್ಮಾಣದಿಂದ ಗ್ರಾಮಗಳ ವಾತಾವರಣವೇ ಬದಲಾಗುತ್ತದೆ. ಜನರಲ್ಲಿ ನೆಮ್ಮದಿಯ ಭಾವ ಉಂಟಾಗುತ್ತದೆ. ಹಾಗಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಕ್ಷೇತ್ರದಲ್ಲಿ ಮಂದಿರಗಳ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೆಕೆ ಕೊಪ್ಪ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಶಿಕ್ಷಣ, ಮೂಲಭೂತ ಸೌಲಭ್ಯ. ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಿ ಕಳೆದ 4 ವರ್ಷದಿಂದಲು ಶಾಸಕರು ಕೆಲಸ ಮಾಡುತ್ತ ಬಂದಿದ್ದಾರೆ, ಕ್ಷೇತ್ರದಲ್ಲಿ ಇನ್ನೂ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಅವರು ಹಾಕಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಅವೆಲ್ಲ ಸಾಕಾರಗೊಳ್ಳಲಿದೆ ಎಂದು ಚನ್ನರಾಜ ಹಟ್ಟಿಹೊಳಿ ತಿಳಿಸಿದರು.

ಕ್ಷೇತ್ರದ ಪ್ರತಿ ಮಗುವೂ ಗುಣಮಟ್ಟದ ಶಿಕ್ಷಣ ಪಡೆಯಬೇಕು. ಪಠ್ಯ ಶಿಕ್ಷಣದ ಜೊತೆಗೆ ದೈಹಿಕ ಶಿಕ್ಷಣಕ್ಕೂ ಆದ್ಯತೆ ಸಿಗಬೇಕು ಎನ್ನುವ ಕಾರಣಕ್ಕೆ ಲಕ್ಷ್ಮಿ ಹೆಬ್ಬಾಳಕರ್ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಅವರ ಜನ್ಮ ದಿನದಂದು ಅವೆಲ್ಲಕ್ಕೂ ಚಾಲನೆ ನೀಡಲಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಕೆಕೆ ಕೊಪ್ಪದ ಶ್ರೀ ಶಿವಯೋಗೇಶ್ವರ ಕಲ್ಮಠ ಪೀಠಾಧ್ಯಕ್ಷರಾದ ಶ್ರೀ ಸಿದ್ಧಪ್ರಭು ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸಂತೋಷ ಕಂಬಿ, ಕಲ್ಲಪ್ಪ ಸಂಪಗಾವಿ, ಸಂಜೀವ್ ಚಿಣ್ಣನವರ, ದುಂಡಯ್ಯ ಗುರುಗಳು, ಗ್ರಾಮ ಪಂಚಾಯತ್ ಸದ್ಯಸರಾದ ಚಂಬಯ್ಯಾ ಕಂಬಿ, ಸಂಜೀವ ಕರೆಣ್ಣವರ, ಸೋಮು ದನದಮಣಿ, ಸುಭಾಷ್ ಡೊಂಗರಗಾವಿ, ಆನಂದ ಹುಡೇದ, ಸೋಮು ದೊಡವಾಡಿ, ನ್ಯಾಯವಾದಿಗಳಾದ ಎಸ್ ಎಮ್ ಪಾಟೀಲ, ಎಮ್ ಟಿ ಪಾಟೀಲ ಹಾಗೂ ದೇವಸ್ಥಾನದ ಟ್ರಸ್ಟ್ ಕಮೀಟಿಯವರು ಉಪಸ್ಥಿತರಿದ್ದರು.


Leave a Reply