This is the title of the web page
This is the title of the web page

Please assign a menu to the primary menu location under menu

State

ಹಲವು ಭಾಷೆ, ಹಲವು ಧರ್ಮ, ಹಲವು ಪ್ರಾದೇಶಿಕ ಸಾಂಸ್ಕೃತಿಕ ವಿಭಿನ್ನತೆಗಳನ್ನು ಮೈಗೂಡಿಸಿಕೊಂಡಿರುವ ಭಾರತದ ಸಂಸ್ಕೃತಿ ಯೇ ವಿಭಿನ್ನ. ಭಿನ್ನತೆಯಲ್ಲಿ ಏಕತೆ ಕಾಣುತ್ತಿರುವ ಸಂಸ್ಕೃತಿಯೇ ಭಾರತೀಯ ವಿಶೇಷ ಸಂಸ್ಕೃತಿ


ಕುಷ್ಟಗಿ:- ಸ್ವಾತಂತ್ರ್ಯೋತ್ತರದ ಮಹತ್ಕಾರ್ಯವಾದ ಸಂವಿಧಾನ ರಚಿಸುವ ಕಾರ್ಯವನ್ನು ಅವಿರತವಾಗಿ ಶ್ರಮಿಸಿ ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೆ ಗುರಿಯಾಗುವಂತಹ ಮಾದರಿಯ ಸಂವಿಧಾನವನ್ನು ಭಾರತಕ್ಕೆ ನೀಡಿರುವ ಭಾರತರತ್ನ ಡಾ: ಅಂಬೇಡ್ಕರ್ ರವರ ಕಾರ್ಯವು ಜಗತ್ತೇ ನಿಬ್ಬೆರಗಾಗುವಂತೆ ಮಾಡಿದೆ, ಎಂದು ಎಸ್ಡಿಎಂಸಿ ಹಿರಿಯ ಸದಸ್ಯರಾದ ಮಹದೇವಪ್ಪ ಗಂಗಾಮತ ರವರು ಹೇಳಿದರು.

74ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ಸರಕಾರಿ ಪ್ರೌಢ ಶಾಲೆ ಜುಮಲಾಪುರದಲ್ಲಿ ಆಯೋಜಿಸಲಾಗಿದ್ದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಜ್ಞಾನದಾನ ಸರ್ವ ದಾನಗಳಿಗಿಂತ ಮಿಗಿಲಾದದು, ಸುತ್ತಲಿನ ನಾಲ್ಕು ಗ್ರಾಮಗಳ ಮಕ್ಕಳಿಗೆ ಜ್ಞಾನ ನೀಡಲು ಆಶ್ರಯ ನೀಡಿ ಅವಕಾಶ ಕಲ್ಪಿಸಿರುವ ಮಹಾದಾನಿಗಳಾದ,ಶಾಲೆಗೆ ಭೂದಾನವಾಗಿ ನಾಲ್ಕು ಎಕರೆ ಜಮೀನನ್ನು ನೀಡಿರುವ ಭೂದಾನಿಗಳು ಹಾಗೂ ಎಸ್ ಡಿ ಎಂ ಸಿ ಯ ನಾಮನಿರ್ದೇಶಿತ ಸದಸ್ಯರಾದ ಮಾನ್ಯ ಶ್ರೀ ಅಡಿವೆಪ್ಪ ಕಲ್ಲಪ್ಪ ತೊಂಡಿಹಾಳ ರವರನ್ನು ಶಾಲೆ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಕೊಡು ಕೈ ಮೇಲುಗೈ ಎಂಬಂತೆ ಮಹಾಭೂದಾನಿಗಳನ್ನು ವೇದಿಕೆಯಲ್ಲಿರುವ ಗಣ್ಯರು ಪ್ರಶಂಶಿಸಿ, ಹೃದಯ ಪೂರ್ವಕ ಕೃತಜ್ಞತೆ ಸಲ್ಲಿಸಿದರು.

ಎಸ್ ಡಿ ಎಂ ಸಿ ಯ ಅಧ್ಯಕ್ಷರಾದ ಕನಕಪ್ಪ ನಾಯಕ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ನಂತರ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಆಶಯ ತಿಳಿಸಿದರು.

ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಾದ ಹಂಪಯ್ಯ ಹಾಗೂ ಅಕ್ಕಮ್ಮ ಅರಳಿಕಟ್ಟಿ ಗಣರಾಜ್ಯೋತ್ಸವ ಕುರಿತು ಮಾತನಾಡಿದರು.

ಮುಖ್ಯೋಪಾಧ್ಯಾಯರಾದ ಸೋಮನಗೌಡ ಪಾಟೀಲ ಅಧ್ಯಕ್ಷೀಯ ಸಮಾರೋಪ ಭಾಷಣ ನೆರವೇರಿಸಿದರು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಎಸ್ಡಿಎಂಸಿಯ ಸದಸ್ಯರಾದ ಅಮರೇಶ ಕುಷ್ಟಗಿ , ಬಸವರಾಜ ಮೇಟಿ, ನಿರುಪಾದೆಪ್ಪ ಹರಿಜನ, ಗ್ಯಾನಪ್ಪ ಬಸಪ್ಪ ಕುರಿ , ಪದ್ಮಾ ದೊಡ್ಡಬಸಪ್ಪ ನಾಯಕ, ಯಲ್ಲಮ್ಮ ಚಲವಾದಿ , ಶಶಿಧರ್ ಕುರ್ನಾಳ, ಸಾಲಿಂಗಪ್ಪ ,ಚನ್ನಬಸಪ್ಪ, ಸೇರಿದಂತೆ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಗ್ರಾಮದ ಹಿರಿಯರು ,ಯುವಕರು, ಹಿರಿಯ ವಿದ್ಯಾರ್ಥಿಗಳು ,ಶಾಲಾ ಶಿಕ್ಷಕರಾದ ಬಸವರಾಜ ಬಾಗಲಿ ಅಮರಪ್ಪ, ಹನುಮಂತಪ್ಪ ಹಾಗೂ ಗೌರಮ್ಮ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ರಾಷ್ಟ್ರಧ್ವಜಾರೋಹಣ ಹಾಗೂ ವೇದಿಕೆ ಕಾರ್ಯಕ್ರಮಗಳನ್ನು ಅತ್ಯಂತ ಹೆಚ್ಚುಕಟ್ಟಾಗಿ ನೆರವೇರಿಸಿ ಯಶಸ್ವಿಗೊಳಿಸಿದರು.

ಶಿಕ್ಷಕರಾದ ಚಿದಾನಂದಪ್ಪ ಕಂದಗಲ್ ಕಾರ್ಯಕ್ರಮ ನಿರೂಪಿಸಿದರೆ ಹಾಗೂ ಶಶಿಧರ ಗೊರಬಾಳ ವಂದನಾರ್ಪಣೆ ಸಲ್ಲಿಸಿದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply