This is the title of the web page
This is the title of the web page

Please assign a menu to the primary menu location under menu

Local News

ಅಪರಿಚಿತ ವ್ಯಕ್ತಿ ಸಾವು


ಬೆಳಗಾವಿ: ರೈಲು ಗಾಡಿ ಸಂಖ್ಯೆ 17326 ಮೈಸೂರು ಬೆಳಗಾವಿ ರೈಲು ಗಾಡಿಯ ಎಸ್. ಏಮ್.ಆರ್ ಬೋಗಿಯ ಸಿಟ್ ಮೇಲೆ ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದ್ದು, ಯಾವುದೋ ಖಾಯಿಲೆಯಿಂದ ಬಳಲಿ ಸಕಾಲಕ್ಕೆ ಔಷದೋಪಚಾರ ಸಿಗದೆ ಮೃತಪಟ್ಟಿರುತ್ತಾನೆ. ಈ ಕುರಿತು ಜನವರಿ 1 ರಂದು ಬೆಳಗಾವಿಯ ರೈಲ್ವೆ ಪೋಲಿಸ್ ಠಾಣೆಯಲ್ಲಿ ಯು.ಡಿ.ಆರ್ ನಂ -01/2021 ಕಲಂ: 174 ಸಿ.ಆರ್.ಪಿ.ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಅಪರಿಚಿತ ವ್ಯಕ್ತಿಯ ವಯಸ್ಸು ಸುಮಾರು 45 ವರ್ಷ, ಎತ್ತರ 5.5″ ಅಡಿ, ಕೆಂಪು ಮೈ ಬಣ್ಣ, ದುಂಡು ಮುಖ, ದುಂಡು ಮೂಗು ಮತ್ತು ಸಾಧಾರಣ ಶರೀರ, 2 ಇಂಚು ಕಪ್ಪು ಕೂದಲು ಹೊಂದಿದ್ದು, ಕುತ್ತಿಗೆಯ ಮೇಲೆ 3 ಸ್ಟಾರ್ ಹಚ್ಚೆ ಗುರುತು ಹೊಂದಿರುತ್ತಾನೆ ಹಾಗೂ ಕಪ್ಪು ಬಣ್ಣದ ಲೈನಿಂಗ್ ಶರ್ಟ, ಕಪ್ಪು ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾನೆ.
ಈ ಚಹರೆ ಪಟ್ಟ ಹೋಲುವ ಗಂಡಸು ಕಾಣೆಯಾದ ಬಗ್ಗೆ ತಮ್ಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೆ ಅಥವಾ ಮೃತನ ರಕ್ತ ಸಂಬAಧಿಗಳು ಯಾರಾದರೂ ಪತ್ತೆಯಾದರೆ ಬೆಳಗಾವಿಯ ರೈಲ್ವೆ ಪೋಲಿಸ್ ಠಾಣೆ ದೂರವಾಣಿ ಸಂಖ್ಯೆ : 0831-2405273 ಪಿ.ಎಸ್.ಐ ಮೊಬೈಲ ನಂ 9480802127 ಅಥವಾ [email protected] ಮೇಲ್ ಐಡಿ ಸಂಪರ್ಕಿಸಲು ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply