This is the title of the web page
This is the title of the web page

Please assign a menu to the primary menu location under menu

Local News

ಸಾರ್ವಜನಿಕ ಸಮಸ್ಯೆ ಆಲಿಸಲು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಸಹಕಾರಿ


ಯಮಕನಮರಡಿ: ಗ್ರಾಮೀಣ ಭಾಗದ ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಿ ತ್ವರಿತ ಪರಿಹಾರ ನೀಡಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವು ಜನರಿಗೆ ತುಂಬಾ ಸಹಕಾರಿಯಾಗಿದೆ ಎಂದು ಹುಕ್ಕೇರಿ ತಹಶೀಲ್ದಾರ ಡಾ. ಡಿ.ಎಚ್. ಹೂಗಾರ ಹೇಳಿದರು.
ಅವರು ಶನಿವಾರ ದಿ. ೧೭ ರಂದು ಬಸ್ಸಾಪೂರ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾನತಾಡಿದರು. ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಪಡಿತರ ಚೀಟಿ, ಪೌತಿ ಖಾತೆ ಬದಲಾವಣೆ, ಪಹಣಿ ತಿದ್ದುಪಡಿ, ಪೋಡಿ, ಉಳುಮೆ ಚೀಟಿ, ಹಕ್ಕು ಪತ್ರಗಳ ವಿತರಣೆ ಮಾಡುವ ಸಲುವಾಗಿ ಆಯೋಜಿಸಲಾಗಿರುವ ಈ ಕಾರ್ಯಕ್ರಮ ಸಾರ್ವಜನಿಕರಿಗೆ ಸಹಕಾರಿಯಾಗಿದೆ. ರೈತರು ಕಂದಾಯ ಇಲಾಖೆಗೆ ಸಂಬಂಧಿಸಿದ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.
ಕಾಲ ಬದಲಾದಂತೆ ಪರಿವರ್ತನೆ ಆಗಬೇಕು. ಆಡಳಿತ ವ್ಯವಸ್ಥೆ ಜನರಿದ್ದಲ್ಲಿಗೇ ಬರಬೇಕು. ತಹಶೀಲ್ದಾರ ಕಚೇರಿಗೆ ಅಲೆದಾಟ ತಪ್ಪಬೇಕು. ಹಾಗಾಗಿಯೇ ಕಂದಾಯ ಇಲಾಖೆ ಹಲವಾರು ಯೋಜನೆ ಜಾರಿಗೆ ತಂದಿದೆ. ಮನೆಬಾಗಿಲಿಗೆ ಪಿಂಚಣಿ, ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ, ಹೀಗೆ ಆಡಳಿತ ಜನಸ್ನೇಹಿ ಆಗುವತ್ತ ನಮ್ಮ ಸರ್ಕಾರ ದಿಟ್ಟ ಹೆಜ್ಜೆ ಇಡುತ್ತಿದೆ ಎಂದು ಹುಕ್ಕೇರಿ ತಹಶೀಲ್ದಾರ ಡಿ.ಎಚ್. ಹೂಗಾರ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸ್ಸಾಪೂರ ಗ್ರಾ.ಪಂ. ಅಧ್ಯಕ್ಷ ನೀಲವ್ವಾ ಬಸವರಾಜ ಕರೋಳಿ ವಹಿಸಿದ್ದರು. ಮಾಜಿ ಜಿ.ಪಂ. ಸದಸ್ಯ ಮಂಜುನಾಥ ಪಾಟೀಲ ಮಾತನಾಡಿದರು ಕಾರ್ಯಕ್ರಮದಲ್ಲಿ ರಾಜುಗೌಡ ಪಾಟೀಲ, ಬಸ್ಸಾಪೂರ ಪಿಕೆಪಿಎಸ್ ಅಧ್ಯಕ್ಷ ಶಂಕ್ರಯ್ಯ ಗವಿಮಠ, ಬಸ್ಸಾಪೂರ ಗ್ರಾ.ಪಂ. ಉಪಾಧ್ಯಕ್ಷ ಲಗಮಣ್ಣ ಗುರವ, ಹಾಗೂ ಸದಸ್ಯರು, ಮತ್ತು ಬಸನಾಯ್ಕ ಕುಂದರಗಿ, ದಯಾನಂದ ಕಿಚಡಿ, ಹುಕ್ಕೇರಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ, ಸಿಡಿಪಿಓ ಮಂಜುನಾಥ ಪರಸನ್ನವರ, ಹುಕ್ಕೇರಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಮ್.ಎಸ್. ಪಟಗುಂದಿ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಕದಂ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಟಿ.ಎ. ನಾಂದನಿ, ಹುಕ್ಕೇರಿ ತಾಲೂಕಾ ಆರೋಗ್ಯಾಧಿಕಾರಿ ಡಾ. ಉದಯ ಕುಡಚಿ, ಸ.ಕಾ.ನಿ ಅಭಿಯಂತರಾದ ಎಸ್.ಕೆ. ಪಾಟೀಲ, ವಿಜಯ ಮಿಶ್ರಿಕೋಟಿ, ಯಮಕನಮರಡಿ ಉಪತಹಶೀಲ್ದಾರ ಆರ್.ಬಿ. ಭೋವಾ, ಕಂದಾಯ ನೀರಿಕ್ಷಕ ಸಿ.ಕೆ.ಕಲಕಾಂಬಕರ, ಗ್ರಾಮಲೆಕ್ಕಾಧಿಕಾರಿ ಬಿ.ಎಮ್. ದೋಶಿ, ಬಸ್ಸಾಪೂರ ಗ್ರಾ.ಪಂ. ಪಿಡಿಓ ರಾಜು ಬೆಡಸೂರಿ, ಎಮ್.ಜಿ. ಪತ್ತಾರ, ವಿಠ್ಠಲ ಬುಕನಟ್ಟಿ, ಸಸಾಲಟ್ಟಿ, ಆರ್.ಎಮ್. ಪಾಟೀಲ, ಎಸ್.ಪಿ. ಹಿರೇಮಠ, ಪಿ.ಎಲ್.ನಾಯಿಕ, ನಾಡಕಚೇರಿ ಸಿಬ್ಬಂದಿ ಸಮೀರ ನಧಾಪ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Gadi Kannadiga

Leave a Reply