This is the title of the web page
This is the title of the web page

Please assign a menu to the primary menu location under menu

Local News

ನಿನ್ನೆ ಮಗನ ಹುಟ್ಟು ಹಬ್ಬ ಆಚರಿಸಿ ಆತ್ಮಹತ್ಯೆಗೆ ಶರಣಾದ ತಂದೆ


ಬೈಲಹೊಂಗಲ: ಕೃಷಿ ಚುಟುವಟಿಕೆಗೆ ಮಾಡಿದ ಸಾಲ ಮಾಡಿ ಅದನ್ನು ತಿರಿಸಲಾಗದೆ ಬೆಳಗಾವಿಯ ವಿನಾಯಕ ನಗರದಲ್ಲಿ ತನ್ನ ಬಾಡಿಗೆ ಮನೆಯಲ್ಲಿ ನಿನ್ನೆ ತನ್ನ ಒಂದು ವರ್ಷದ ಮಗುವಿಗೆ ಕಟ್ಟಿದ್ದ ಜೋಳಿಗೆಗೆ ನೇಣು ಹಾಕಿಕೊಂಡು ದಾರುಣ ಸಾವು ಕಂಡಿದ್ದಾನೆ.

ಸಮೀಪದ ಹೊಸೂರ ಗ್ರಾಮದ ಯುವ ರೈತ ರಾಜಶೇಖರ ಫಕೀರಪ್ಪ ಬೋಳೆತ್ತಿನ (34) ಮೃತ ದುರ್ದೈವಿ. ಗ್ರಾಮದಲ್ಲಿ ತನ್ನ ತಂದೆಯ‌ ಹೆಸರಿನಲಿದ್ದ ಜಮಿನಿನಲ್ಲಿ ಕೃಷಿ ಮಾಡಿ ಅತಿವೃಷ್ಟಿ ಹಾಗೂ ಕೊರೊನಾ ಹಾವಳಿ ಮತ್ತು ಈ ವರ್ಷದ ವಿಪರೀತ ಮಳೆಯಿಂದ ಜಮೀನದಲ್ಲಿ ಬೆಳೆದಿದ್ದ ಸೋಯಾಬಿನ್ ಬೆಳೆಯು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಕಂಗಾಲಾಗಿದ್ದಾರೆ.

ತಂದೆಯ ಹೆಸರಿನಲ್ಲಿ ಕೈಗಡ, ಬ್ಯಾಂಕ್ ಮತ್ತು ಇದ್ದ ಜಮೀನಿನಲ್ಲಿ ಕೆಲ ಬಾಗ ಬೇರೆಯವರಿಗೆ ಗಿರವಿ ಇಟ್ಟು ಲಕ್ಷಾಂತರ ರೂಪಾಯಿ ಮಾಡಿದ ಸಾಲಬಾದೆಗೆ ಹೆದರಿ ತನ್ನ ಮಗನ ಪ್ರಥಮ ಹುಟ್ಟುಹಬ್ಬ ಆಚರಿಸಿ ಮರುದಿನವೇ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪುಟ್ಟಾಣಿ ಮಕ್ಕಳು ಹಾಗೂ ಹೆಂಡತಿಗೆ ಊರಿಗೆ ತೆರಳುವಂತೆ ಬೆದರಿಸಿ ನೇಣಿಗೆ ಶರಣಾಗಿದ್ದಾನೆ.

ಮೃತ ರೈತನ ತಾಯಿ, ತಂದೆ, ಪತ್ನಿ, ಇಬ್ಬರು ಮಕ್ಕಳು, ಸಹೋದರಿಯರು ಹಾಗೂ ಸಂಬಂಧಿಗಳ ಅಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಬೆಳಗಾವಿ ಕ್ಯಾಂಪ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Gadi Kannadiga

Leave a Reply