ಹುಕ್ಕೇರಿ : ಪ್ರವಾಹ ಪರಿಸ್ಥಿತಿಗಳನ್ನು ಸಮರ್ಪಕವಾಗಿ ಎದುರಿಸಲು ಎಲ್ಲ ಇಲಾಖೆಗಳ ಅಧಿಕಾರಿಗಳು ಜವಾಬ್ದಾರಿಂದ ನಿರ್ವಹಿಸಲು ಸಿಧ್ದರಾಗಬೇಕೆಂದು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸೂಚಿಸಿದರು.
ಇಲ್ಲಿನ ತಾಲೂಕು ಪಂಚಾಯತಿ ಸಭಾಭವನದಲ್ಲಿ ಮಂಗಳವಾರ ನಡೆದ ಪ್ರವಾಹ ಪರಿಸ್ಥಿತಿಗತಿಯ ನಿರ್ವಹಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಮಳೆ ಪ್ರವಾಹ ಹಾನಿಯಿಂದ ಆಗಬಹುದಾದ ಹಿನ್ನಲೆಯಲ್ಲಿ ಜನರ ಸುರಕ್ಷಿತ, ಕಾಳಜಿ ಕೇಂದ್ರ, ಜಾನುವಾರಗಳಿಗೆ ಮೇವು ಸಂಗ್ರಹ, ಹಾಗೂ ನದಿಯ ಪಾತ್ರಗಳ ವ್ಯಾಪ್ತಿಯಲ್ಲಿ ೨೬ ಗ್ರಾಮಗಳಿಗೆÀ ಪ್ರವಾಹ ಉಂಟಾಗುವ ಹಿನ್ನಲೆಯಲ್ಲಿ ತಾಲೂಕಾಡಳಿತ ಮುನ್ನೆಚ್ಚರಿಕೆ ಕೈಗೊಳ್ಳಬೆಕೆಂದರು, ವಿಕೋಪ ನಿರ್ವಹಣೆಯಲ್ಲಿ ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡಗಳ ಸೋರಿಕೆಯನ್ನು ನೋಡಿಕೊಳ್ಳುವದು. ಎಲ್ಲ ಇಲಾಖೆಯವರ ಪಾತ್ರ ಪ್ರಾಮುಖ್ಯವಾಗಿದೆ ಹಿಡಕಲ್ ಜಲಾಶಯದಿಂದ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಹಾಗೂ ಕೋಚರಿ , ಕುರಣಿ ಯಾತ ನೀರಾವರಿ ಕಾಲುವೆಗಳಲ್ಲಿ ನೀರು ಹರಿಸಲು ಸೂಚಿಸಿದರು.
ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಲಕ್ಷಾಂತರ ಸಸಿಗಳ ನೆಡುವ ನೆಪ್ಪದಲ್ಲಿ ಖೋಟ್ಟಿ ಬಿಲ್ಲ ಸೃಷ್ಟಿಸುತ್ತಿರುವ ದೂರಿನ ಹಿನ್ನಲೆಯಲ್ಲಿ ಅರಣ್ಯಅಧಿಕಾರಿಗಳ ಪ್ರಸನ್ನಕುಮಾರ ಬೆಲ್ಲದ, ಹಾಗೂ ಮಹಾಂತೇಶ ಸಜ್ಜನ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು ಅರಣ್ಯಪ್ರದೇಶದಲ್ಲಿ ಕೈಗೊಂಡ ಕಾಮಗಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಲು ಕಟ್ಟುನಿಟ್ಟಾಗಿ ಸೂಚಿಸಿದರು. ಸಭೆಯಲ್ಲಿ ಗ್ರಾಪಂ ಸದಸ್ಯರು ಕೂಡ ಅರಣ್ಯ ಅಧಿಕಾರಿಗಳ ವಿರುಧ್ದ ಹಲವಾರು ಸಮಸ್ಯೆಗಳನ್ನು ಸಚಿವರ ಮುಂದೆ ಇಟ್ಟರು.
ಕುರಣಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಸಾವನಪ್ಪಿದ ರೈತನ ಕುಟುಂಭಕ್ಕೆ ಸ್ಥಳದಲ್ಲಿ ೫ ಲಕ್ಷ ರೂ ಪರಿಹಾರಧನ ನೀಡಬೇಕಾಗಿತ್ತು. ನೀಡಲು ವಿಳಂಭ ಮಾಡುತ್ತಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಹಾಗೂ ದಡ್ಡಿ ಹಾಗೂ ಹತ್ತರಗಿ ಭಾಗಗಳಲ್ಲಿ ಹಳ್ಳೆಯ ಕಾಲದ ಕಬ್ಬಿಣದ ಕಂಬಗಳು ಭಾಗಿ ತಂತಿಗಳು ಹರಿದುಬಿಳ್ಳುತ್ತಿವೆ. ಅವೂಗಳನ್ನು ಶೀಘ್ರದಲ್ಲಿ ಬದಲಾಯಿಸಲು ಸೂಚಿಸಿದರು. ಹುಕ್ಕೇರಿ ಮತ್ತು ಸಂಕೇಶ್ವರ ಪುರಸಭೆಯ ವ್ಯಾಪ್ತಿಯಲ್ಲಿ ಸ್ವಚ್ಚತೆ ಕಾಯ್ದುಕೊಳ್ಳುವದು. ಮಳೆೆಗಾಲದ ನೀರು ಸರಾಗವಾಗಿ ಹೋಗಲು ಚರಂಡಿ ವ್ಯವಸ್ಥೆ, ಹಾಗೂ ಗ್ರಂಥಾಲಂiÀiಗಳಿಗೆ ಸ್ಫರ್ಧಾತ್ಮಕ ಪುಸ್ತಕಗಳನ್ನು ನೀಡಲು ತಿಳಿಸಿದರು. ತೆಗ್ಗು ಗುಂಡಿಗಳನ್ನು ಮುಚ್ಚಿಸಿ ಜನರಿಗೆ ಸಂಚಾರಕ್ಕೆ ಅನೂಕೂಲಮಾಡಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಅಗತ್ಯಬಿದ್ದರೆ ಗೋ ಶಾಲೆಗಳನ್ನು ಸುಸ್ಥಿಯಲ್ಲಿ ಇಟ್ಟುಕೊಳ್ಳಲು ಹಾಗೂ ರಸಗೊಬ್ಬರಗಳು. ಕೊರತೆಯಾಗದಂತೆ ನಿಗಾ ವಹಿಸಲು ಸಂಭಂದಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಯಮಕನಮರಡಿ ಹಾಗೂ ಹತ್ತರಗಿ ಗ್ರಾಮಗಳಿಗೆ ೩೬೦ ಕೋಟಿ ರೂ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೆ ತರಲಾಗುವದು ಎಂದರು. ನಂತರ ಸಾರ್ವಜನಿಕರಿಂದ ಸಮಸ್ಯೆ ಆಲಿಸಿದ ಸಚಿವರು ಗೃಹಜ್ಯೋತಿ, ಶಕ್ತಿ, ಗೃಹ ಲಕ್ಷ್ಮಿ ಸೇರಿದಂತೆ ಸರಕಾರದ ಗ್ಯಾರಂಟಿಗಳನ್ನು ಫಲಾನುಭವಿಗಳ ನೊಂದಣಿ ಸರಳೀಕರಣದ ಬಗ್ಗೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು. ಜಿ.ಪಂ ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ , ತಹಸೀಲದಾರ ಸಂಜಯ ಇಂಗಳೆ, ಸಿಪಿಐ ರಮೇಶ ಛಾಯಾಗೋಳ, ಮತ್ತಿತರರು ಉಪಸ್ಥಿತರಿದ್ದರು.
Gadi Kannadiga > Local News > ಸಸಿಗಳ ಪಾಲನೆಯಲ್ಲಿ ಅರಣ್ಯ ಇಲಾಖೆ ಲಕ್ಷಾಂತರೂ ಖೊಟ್ಟಿ ದಾಖಲಾತಿ. ಪ್ರವಾಹ ಪರಿಸ್ಥಿತಿಗತಿ ನಿರ್ವಹಣೆಯನ್ನು ಜವಾಬ್ದಾರಿಯಿಂದ ಮಾಡಲು ಅಧಿಕಾರಿಗಳಿಗೆ ಖಡಕ ವಾರ್ನಿಂಗ್ :ಸಚಿವ ಸತೀಶ ಜಾರಕಿಹೊಳಿ ಸೂಚನೆ
ಸಸಿಗಳ ಪಾಲನೆಯಲ್ಲಿ ಅರಣ್ಯ ಇಲಾಖೆ ಲಕ್ಷಾಂತರೂ ಖೊಟ್ಟಿ ದಾಖಲಾತಿ. ಪ್ರವಾಹ ಪರಿಸ್ಥಿತಿಗತಿ ನಿರ್ವಹಣೆಯನ್ನು ಜವಾಬ್ದಾರಿಯಿಂದ ಮಾಡಲು ಅಧಿಕಾರಿಗಳಿಗೆ ಖಡಕ ವಾರ್ನಿಂಗ್ :ಸಚಿವ ಸತೀಶ ಜಾರಕಿಹೊಳಿ ಸೂಚನೆ
Suresh25/07/2023
posted on

More important news
ಬೆಳಗಾವಿಯ ಹುಡುಗರ ಸಾಹಸ ” ಪರ್ಯಾಯ”
18/09/2023