ಕೊಪ್ಪಳ:-ನೂತನವಾಗಿ ನಿರ್ಮಿಸಲಾದ ಜಿಲ್ಲಾ ಗಾಣಿಗರ ಸಮುದಾಯ ಭವನ ಉದ್ಘಾಟನಾ ಸಮಾರಂಭ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಹಮ್ಮಿಕೊಂಡ ಪ್ರಯುಕ್ತ ಕುಷ್ಟಗಿ ತಾಲೂಕಿನಾದ್ಯಂತ ಗಾಣಿಗ ಜ್ಯೋತಿ ರಥಯಾತ್ರೆ ಅದ್ದೂರಿಯಾಗಿ ಸಂಚರಿಸಿತು.ಪರಮಪೂಜ್ಯ ಡಾ.ಜಯಬಸವ ಕುಮಾರ ಸ್ವಾಮೀಜಿ ಗಾಣಿಗ ಗುರುಪೀಠ ವಿಜಯಪುರ ಶ್ರೀಗಳ ದಿವ್ಯಸಾನಿಧ್ಯದಲ್ಲಿ ಜ್ಯೋತಿ ರಥಯಾತ್ರೆ ಅದ್ದೂರಿಯಾಗಿ ನಡೆಯಿತು. ಕುಷ್ಟಗಿ ತಾಲೂಕಿನ ಮನ್ನೇರಾಳ, ಮಿಯಾಪುರ, ಮಲಕಾಪುರ, ಚಳಗೇರಾ ನಿಡಶೇಷಿ, ಕುಷ್ಟಗಿ ನಗರ, ಕಂದಕೂರ, ನಾಗರಾಳ ಗ್ರಾಮಗಳ ಮೂಲಕ ಲಿಂಗದಹಳ್ಳಿಯಲ್ಲಿ ಶ್ರೀಗಳ ಶಿವಾನುಭವಗೋಷ್ಠಿ ಮತ್ತು ಧಾರ್ಮಿಕ ಚಿಂತನೆಯ ಆಶೀರ್ವಚನದೊಂದಿಗೆ ನೆರೆಯ ಯಲಬುರ್ಗಾ ತಾಲೂಕಿಗೆ ಸಂಚರಿಸಿತು.
ಗ್ರಾಮಗಳಲ್ಲಿ ಮಹಿಳೆಯರು ಆರತಿ ಮತ್ತು ಕುಂಭ ಗಳೊಂದಿಗೆ ಸಕಲ ವಾದ್ಯಗಳೊಂದಿಗೆ ವಿಜ್ರಂಭಣೆಯಿಂದ ಜ್ಯೋತಿಯನ್ನು ಬರಮಾಡಿಕೊಂಡರೆ, ಯುವಕರು ಪಟಾಕಿ ಸಿಡಿಸಿ ಬೈಕ್ ರಾಲಿ ನಡೆಸುವ ಮೂಲಕ ಮೆರವಣಿಗೆ ಉದ್ದಕ್ಕೂ ಉತ್ಸಾಹದಿಂದ ಪಾಲ್ಗೊಂಡರು.
ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ಗಾಣಿಗ ಸಂಘದ ಜಿಲ್ಲಾಧ್ಯಕ್ಷ ತೋಟಪ್ಪ ಕಾಮನೂರು, ಜಿಲ್ಲಾ ಪಂಚಾಯತ್ ಸದಸ್ಯ ಕೆ. ಮಹೇಶ, ಯುವ ಮುಖಂಡ ದೊಡ್ಡ ಬಸನಗೌಡ ಪಾಟೀಲ್ ಬಯ್ಯಾಪುರ, ಸಮುದಾಯದ ಹಿರಿಯ ಮುಖಂಡರಾದ ಅಮರೇಗೌಡ ಪಾಟೀಲ್, ಮಾಜಿ ಸೈನಿಕ ಭೀಮನಗೌಡ ಪಾಟಿಲ್ ನಿಂಗಪ್ಪ ಗುನ್ನಾಳ ಹನುಮಂತಪ್ಪ ಕುರುಬನಾಳ, ಬಸವರಾಜ್ ಮಲಕಾಪುರ, ಪ್ರಭುರಾಜ ಪಾಟೀಲ್,ರಾಜಶೇಖರ್ ಪಾಟೀಲ್, ಕಿರಣ್ ಜ್ಯೋತಿ, ವೀರೇಶ ಮನ್ನೆರಾಳ, ರಮೇಶ ಮಲ್ಕಾಪುರ, ಡಾ. ಗುರುಸಿದ್ದಪ್ಪ ಶಿರೂರ, ಬಸವರಾಜ ಕೋಳೂರ, ಶರಣಪ್ಪ ಗಂಜ್ಯಾಳ, ರಮೇಶ್ ತೂರಮರಿ, ಲಿಂಗರಾಜ ಹೊಮ್ಮಿನಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ