This is the title of the web page
This is the title of the web page

Please assign a menu to the primary menu location under menu

Local News

ಗಾಲ್ಪ್ ಮೈದಾನದಲ್ಲಿ ಚಿರತೆ ಪ್ರತ್ಯಕ್ಷ ಸಾರ್ವಜನೀಕರು ಹುಷಾರ್


ಬೆಳಗಾವಿ: ಕೆಲವು ದಿನಗಳಿಂದ ಬೆಳಗಾವಿಗರ ನಿದ್ದೆಗೆಡಿಸಿದ ಚಿರತೆ ನಗರದ ಗಾಲ್ಪ್ ಮೈದಾನದಲ್ಲಿಯೇ ಇರುವುದು ದೃಡಪಟ್ಟಿದೆ. ಚಿರತೆಯ ಚಲನ ವಲನ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾರ್ವಜನೀಕರು ಹುಷಾರ್ ಆಗಿರುವಂತೆ ಬೆಳಗಾವಿ DFO ಅಂಥೋಣಿ ಹೇಳಿದ್ದಾರೆ.

ಐದು ದಿನಗಳಿಂದ ಚಿರತೆಗಾಗಿ ಶೋಧನಾ ಕಾರ್ಯ ನಡೆಯುತ್ತಿದೆ. ಸುಮಾರು 250 ಕೆ.ಮೀ ಪ್ರದೇಶದಲ್ಲಿ ಶೋಧನೆ ನಡೆಸಲಾಗಿತ್ತು ಆದರೆ ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಅಳವಡಿಸಲಾಗಿರುವ ಕ್ಯಾಮರಾದಲ್ಲಿ ಚಿರತೆಯ ಚಲನವಲನ ಪತ್ತೆಯಾಗಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಖಾತರಿ ಪಡಿಸಿದ್ದಾರೆ.

ಈ ಕುರಿತು ಮಾತನಾಡಿದ DFO ಅಂಥೋಣಿ ಅವರು ಗಾಲ್ಪ್ ಮೈದಾನದಲ್ಲಿ ಚಿರತೆಯ ಸಂಚಾರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾರ್ವಜನಿಕರು ಹುಷಾರಾಗಿರಿ ಮತ್ತು ಚಿರತೆ ಸೆರೆಗೆ ಅರಣ್ಯ ಇಲಾಖೆ ಶೋಧನೆ ಕಾರ್ಯ ಮುಂದುವರೆದಿದ್ದು ಕಾರ್ಯಾಚರಣೆಗೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.


Gadi Kannadiga

Leave a Reply