ಬೆಳಗಾವಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಶಿಕ್ಷಕರ ಸಮಸ್ಯೆ ಬಗೆ ಹರಿಸುವಲ್ಲಿ ವಿಫಲವಾಗಿದೆ .ಸಾರ್ವಜ£ಕ ಶಿಕ್ಷಣ ಇಲಾಖೆ ಆಯೋಜಿಸುತ್ತಿರುವ ಕಾರ್ಯಾಗಾರಗಳು ಚುನಾವಣೆ ಹಾಗೂ ರಾಜಕೀಯ ವೇದಿಕೆಯಾಗಿ ಮಾರ್ಪಡುತ್ತಿವೆ. ತಮ್ಮ ಪ್ರಚಾರಕ್ಕೆ ಈ ವೇದಿಕೆ ಬಳಸಿಕೊಳ್ಳುತ್ತಿರುವ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಸರ್ಕಾರಿ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಶಿಕ್ಷಕರು ಹಾಗೂ ಪದವೀಧರ ಘಟಕದ ರಾಜ್ಯ ಕಾರ್ಯದರ್ಶಿ ಎನ್.ಬಿ. ಬನ್ನೂರ ಆರೋಪಿಸಿದರು.
ಶುಕ್ರವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ನಾಲ್ಕೆöÊದು ತಿಂಗಳಿ£ಂದ ರಾಷ್ಟ್ರೀಯ ಶಿಕ್ಷಣ £Ãತಿಯ ನೆಪದಲ್ಲಿ ರಾಜ್ಯದ ಎಲ್ಲ ಕಡೆಗಳಲ್ಲಿ ಹಾಲಿ ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪುರ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಕಾರ್ಯಕ್ರಮ, ಕಾರ್ಯಾಗಾರ ಮಾಡುತ್ತಿರುವುದು ಕಂಡು ಬಂದಿದೆ. ಶಿಕ್ಷಕರಿಗೆ ಭಯ ಹುಟ್ಟಿಸಿ ಶಿಕ್ಷಕರನ್ನು ಕರೆಸಿಕೊಂಡು ಇಲೆಕ್ಷನ್ ಪ್ರಚಾರ ಮಾಡುತ್ತಿದ್ದು ಖಂಡ£Ãಯ ಎಂದರು.
ಅರುಣ ಶಹಾಪುರ ಮಾಡುತ್ತಿರುವ ಈ ಕೆಲಸಕ್ಕೆ ಶಿಕ್ಷಣ ಇಲಾಖೆಯ ಸಚಿವರು ಬೆಂಬಲ £Ãಡುತ್ತಿದ್ದು ದುರಂತದ ಸಂಗತಿ. ಸಂಪೂರ್ಣವಾಗಿ ಸರ್ಕಾರ ಆಡಳಿತವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇವರಿಗೆ ಏನಾದರೂ ಶಿಕ್ಷಕರ ಬಗ್ಗೆ ಕಾಳಜಿ ಇದ್ದರೆ ಶಿಕ್ಷಕರ ಬೇಡಿಕೆಗಳಾದ ಎನ್ ಪಿಎಸ್ ಬದಲು ಹಳೆ ಪಿಂಚಣಿ ಯೋಜನೆ ಜಾರಿಗೆ ತರುವುದು, ಅನುದಾ£ತ ಶಾಲಾ, ಕಾಲೇಜು ಶಿಕ್ಷಕರಿಗೆ ಆರೋಗ್ಯ ಸಂಜೀವಿ£ ಮಂಜೂರಿ ಮಾಡುವುದು, ೮೨೮ ಐಟಿಐ ಕಾಲೇಜುಗಳಿಗೆ ಅನುದಾನ £Ãಡುವ ಬಗ್ಗೆ ೧೯೯೫ರ ನಂತರ ಪ್ರಾರಂಭ ಮಾಡಿದ ಶಾಶ್ವತ ಅನುದಾನ ರಹಿತ ಶಾಲೆ, ಕಾಲೇಜುಗಳಲ್ಲಿ ಕಾರ್ಯ£ರ್ವಹಿಸುತ್ತಿದ್ದ ಶಿಕ್ಷಕರಿಗೆ ಉಪನ್ಯಾಸಕರಿಗೆ ಕಾಲ್ಪ£ಕ ವೇತನ ಮಂಜೂರು ಮಾಡುವುದಾಗಲಿ, ದೈಹಿಕ ಶಿಕ್ಷಕರಿಗೆ ಬಡ್ತಿ £Ãಡುವುದಾಗಲಿ, ಸರ್ಕಾರಿ ಶಿಕ್ಷಕರ ವರ್ಗಾವಣೆಯಲ್ಲಿ ವಿತಿನ್ ಯು£ಟ್ ಹಾಗೂ ಓಟ್ ಸೈಡ್ ಯು£ಟ್ ಆಗಿ ಪರಿಗಣಿಸಿ ವರ್ಗಾವಣೆ ಮಾಡುವುದು ಹಾಗೂ ವರ್ಗಾವಣೆ £ಗದಿ ಪಡಿಸಿದ. ೭% ಮತ್ತು ೨%ರ ಮಿತಿಯನ್ನು ತೆಗೆದು ಹಾಕುವುದಾಗಲಿ, ಶಿಕ್ಷಣ ಇಲಾಖೆಯಿಂದ ಮೇಲಿಂದ ಮೇಲೆ ಶಿಕ್ಷಕರಿಗೆ ಮಾಹಿತಿ ಕೇಳುವುದರಿಂದ ಶಿಕ್ಷಕರು ಬೋಧನೆ ಬಿಡುವಂತಾಗಿದೆ ಎಂದರು.
ಯಾವ ವಿಷಯ ತಜ್ಞರನ್ನೂ ಆಮಂತ್ರಿಸದೆ, ಇಂತಹ ಕಾರ್ಯಾಗಾರ ಆಯೋಜಿಸುತ್ತಿರುವುದು ಸರಿಯಲ್ಲ’ ಎಂದರು.
ತಮ್ಮ ಎರಡು ಅಧಿಕಾರವಧಿಯಲ್ಲಿ ಉತ್ತಮ ಕೆಲಸ ಮಾಡದ ಅರುಣ ಶಹಾಪುರ, ಈಗ ಪ್ರಚಾರಕ್ಕೆ ಉತ್ಸಾಹ ತೋರುತ್ತಿದ್ದಾರೆ. ಇತ್ತೀಚೆಗೆ ವಾಯವ್ಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿ ಹೊಂದಿರುವ ಮೂರು ಜಿಲ್ಲೆಗಳಲ್ಲಿ ಕಾರ್ಯಾಗಾರ ನಡೆದಿವೆ. ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಕೂಡ ಭಾಗಿಯಾಗಿ, ಅರುಣ ಶಹಾಪುರ ಪರವಾಗಿ ಮತಯಾಚಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಈ ಕಡೆ ಹೆಚ್ಚಾಗಿ ಅವರು ಪ್ರವಾಸ ಕೈಗೊಳ್ಳುತ್ತಿದ್ದಾರೆ. ಪ್ರಚಾರಕ್ಕಾಗಿ ಸರ್ಕಾರಿ ಆಡಳಿತ ವ್ಯವಸ್ಥೆ ದುರುಪಯೋಗ ಸರಿಯಲ್ಲ. ಚುನಾವಣೆ ಆಯೋಗಕ್ಕೆ ಈ ಕುರಿತಾಗಿ ದೂರು £Ãಡಲಿದ್ದೇವೆ ಎಂದು ತಿಳಿಸಿದರು.
ನಾನು ಈ ಹಿಂದಿ£ಂದಲೂ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ಮಾಡುತ್ತ ಬಂದಿದ್ದೇನೆ. ಈ ಸಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಈಗಾಗಲೇ ಒಂದು ಸುತ್ತಿನ ಪ್ರಚಾರ ಮುಗಿಸಿದ್ದೇನೆ. ಆಯ್ಕೆಯಾದರೆ ಶಿಕ್ಷಕರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ’ ಎಂದರು. ಜಗದೀಶ ಸಾವಂತ, ಕೆ.ವಿ.ಹಿರೇಮಠ, ಪ್ರಭು ಶಿವನಾಯಕ, ಜಿ.ಎನ್.ಪಾಟೀಲ ಸೇರಿದಂತೆ ಇ£್ನತರರು ಉಪಸ್ಥಿತರಿದ್ದರು.
Gadi Kannadiga > Local News > ಶಿಕ್ಷಕರ ಸಮಸ್ಯೆ ಬಗೆ ಹರಿಸುವಲ್ಲಿ ಸರ್ಕಾರ ವಿಫಲವಾಗಿದೆ : ಬನ್ನೂರ