This is the title of the web page
This is the title of the web page

Please assign a menu to the primary menu location under menu

Statee-paper

ಘಟಾನುಘಟಿಗಳ ನಿದ್ದೆ ಕೆಡಿಸಿದ ಭಾರತೀಯ ಜನತಾ ಪಕ್ಷದ ಹೈಕಮಾಂಡ್


ಬೆoಗಳೂರು ಏ.೧೧-: ಭಾರತೀಯ ಜನತಾ ಪಕ್ಷದ ಢಟಾನುಘಟಿಗಳು ಅದರಲ್ಲೂ ಕರ್ನಾಟಕದಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಿ,ಸಂಘಟಿಸಿ ಬೆಳೆಸಿದ ಹಲವು ಹಿರಿಯ ನಾಯಕರಿಗೆ ಚುನಾವಣೆಯಲ್ಲಿ ಟಿಕೆಟನ್ನು ನಿರಾಕರಿಸುವ ಮೂಲಕ ಭಾಜಪ ಹೈಕಮಾಂಡ್ ಬಿಗ್ ಶಾಕ್ ಅನ್ನು ನಿಡಿದೆ.
ಕರ್ನಾಟಕದಲ್ಲಿ ಭಾಜಪ ಬೀಜವನ್ನು ಬಿತ್ತಿ ಅದನ್ನು ಗ್ರಾಮ ಮಟ್ಟದಿಂದ ಕಟ್ಟಿ ಬೆಳೆಸಿದ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದೇ ಅಲ್ಲದೇ ಅವರನ್ನು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಮೂಲೆಗುಂಪು ಮಾಡಿದ ಪಕ್ಷ ಕೊನೆಗೆ ಅವರು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವ ನಿರ್ಧಾರವನ್ನು ಸ್ವತ: ಅವರೇ ಘೋಶಿಸುವಂತೆ ವಾತಾವರಣ ಸೃಷ್ಟಿಸಲಾಯಿತು. ಸ್ವತ: ಅವರು ಸೂಚಿಸುವ ,ಅವರ ಕಟ್ಟಾ ಬೆಂಬಲಿಗ ಅಭ್ಯರ್ಥಿಗಳಿಗೆ ಟಿಕೇಟ ಇಲ್ಲ ಎನ್ನುವ ಮಟ್ಟಕ್ಕ್ಟೆ ಅಷ್ಟೇ ಅಲ್ಲ ಮಗ ವಿಜಯೇಂದ್ರನಿಗೂ ಕಿರಿಕ್ ಆಗತೊಡಗಿದ್ದು ಯಡಿಯೂರಪ್ಪನವರಿಗೆ ನುಂಗಲಾರದ ತುತ್ತಾಗಿದ್ದು ಸುಳ್ಳಲ್ಲಿ.
ಯಡಿಯುರಪ್ಪ ಎಂದರೇ ಕರ್ನಾಟಕದಲ್ಲಿ ಭಾಜಪ-ಭಾಜಪ ಎಂದರೆ ಯಡಿಯೂರಪ್ಪ ಎನ್ನುವಂತಿದ್ದ ಕಾಲ ಬದಲಾಗಿ ಯಡಿಯೂರಪ್ಪ ಹಲವು ಬಾರಿ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.
ಯಡಿಯೂರಪ್ಪನವರ ಕಥೆಯೇ ಹೀಗಾದ ಮೇಲೆ ತಮ್ಮ ಪರಿಸ್ಥಿತಿ ಬೇರೆ ಇರಲಿಕ್ಕಿಲ್ಲ ಎಂದರಿತ ಈಶ್ವರಪ್ಪ ತಾವಾಗಿಯೇ ಚುನಾವಣೆಯಿಂದ ನೀವೃತ್ತಿ  ಘೋಶಿಸಿದರು.
ಇವರಿಬ್ಬರೊಂದಿಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ಕೊನೆಯ ಗಳಿಗೆಯಲ್ಲಿ ಅವಮಾ ನಕರವಾರಿ ಟಿಕೇಟ ನಿರಾಕರಿಸಿದ್ದು ಪ್ರತಿಷ್ಟಗೆ ಪೆಟ್ಟು ಬಿದ್ದಂತಾಗಿದೆ, ಅದನ್ನವರು ಬಹಿರಂಗವಾಗಿ ಹೇಳಿಯೂ ಆಯಿತು.ಮತ್ತು ಸ್ಫರ್ಧಿಸುವುದಾಗಿಯೂ ಹೇಳಿ ದರು. ಯಡಿಯೂರಪ್ಪನವರಂತೆ ಜಗದೀಶ ಶೆಟ್ಟರ ಮತ್ತು ಈಶ್ವರಪ್ಪ ಕೂಡ ರಾಜ್ಯದಲ್ಲಿ ಪ್ರಬಲ ಕೋಮಿಗೆ ಸೇರಿದವರು. ಇವರೊಂದಿಗೆ ಇನ್ನೂ ಹಲವು ಪ್ರಮುಖ ನಾಯಕರು ಟಿಕೇಟನಿಂದ ವಂಚಿತರಾಗುತ್ತಿ ದ್ದಾರೆಂದು ನಿಖರ ಮಾಹಿತಿ ಇನ್ನೆರಡು ದಿನಗಳಲ್ಲಿ ಅಸಮಾಧಾನ ಹೆಚ್ಚಾಗಲಿದೆ.


Leave a Reply