ಬೆಳಗಾವಿ: ಭೀಕರ ಅಪಘಾತದಲ್ಲಿ ಗಂಡನ ಮನೆಗೆ ಹೊಗಬೇಕಿದ್ದ ನವ ವಿವಾಹಿತೆ ಮೃತಪಟ್ಟ ಘಟನೆ ಜಿಲ್ಲೆಯ ಕಬ್ಬೂರು ಪಟ್ಟಣದ ಮಡ್ಡಿ ಮಲ್ಲಿಕಾರ್ಜುನ ದೇವಸ್ಥಾನದ ರಾಜ್ಯ ಹೆದ್ದಾರಿ ಬಳಿ ನಡೆದಿದೆ.
ಭಾರತಿ (19) ಮೃತ ದುರ್ದೈವಿ.ಮದುವೆ ಖುಷಿಯಲ್ಲಿದ್ದ ಕುಟುಂಬದಲ್ಲಿ ಸೂತಕದ ಛಾಯೆ ಮೂಡಿದೆ.
ಅಣ್ಣನೊಂದಿಗೆ ಜಾತ್ರೆಗೆ ಹೋಗಿ ಮನೆಗೆ ವಾಪಸ್ ಆಗುವ ವೇಳೆ ಹಿಂಬದಿಯಿಂದ ಬಂದ ಕಾರ್ ಬೈಕ್ಗೆ ಡಿಕ್ಕಿ ಹೊಡೆದಿದ್ದು, ಕೆಳಗೆ ಬಿದ್ದ ಭಾರತಿಗೆ ತೀವ್ರ ಗಂಭೀರ ಗಾಯಗಳಾಗಿದ್ದವು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ ಕೊನೆಯುಸಿರೆಳೆದಿದ್ದಾಳೆ.
ಭಾರತಿ ಅಣ್ಣ ಶಿವಾನಂದಗೂ ಗಂಭೀರ ಗಾಯಗಳಾಗಿದ್ದು, ಗೋಕಾಕ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.