This is the title of the web page
This is the title of the web page

Please assign a menu to the primary menu location under menu

State

ಕೊಪ್ಪಳ : ಅದ್ಧೂರಿಯಾಗಿ ನಡೆದ ಹುಲಿಗೆಮ್ಮ ಮೂರ್ತಿ ಪ್ರತಿಷ್ಠಾಪನೆ


ಅದ್ದೂರಿಯಾಗಿ ನೆಡೆದ ಶ್ರೀ ಹುಲಿಗೆಮ್ಮ ದೇವಿ ನೂತನ ಮೂರ್ತಿ ಪ್ರತಿಷ್ಟಾಪನೆ ಹಾಗೂ ಕುಂಭ ಮತ್ತು ಕಳಸ ಮೇರವಣಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ.

ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣ ವಾರ್ಡ ನಂಬರ ೭ರ ಶಾಖಾಪೂರ ರಸ್ತೆಯ ಗಿಡ್ಡಹನಮಂತ ಚೂರಿ ಇವರ ಲೇಔಟ್ ನಲ್ಲಿ ಶ್ರೀ ಹುಲಿಗೆಮ್ಮ ದೇವಿ ನೂತನ ಮೂರ್ತಿ ಪ್ರತಿಷ್ಟಾಪನೆ ಮಾಡಲಾಯಿತು.

ತದನಂತರ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ದೇವಿಯ ಮೂರ್ತಿಯನ್ನು ಮುನಿರಾಬಾದ್ ಹುಲಿಗಿ ಹುಲಿಗೆಮ್ಮ ದೇವಿಯ ಪೂಜಾರಿಗಳಾದ ಹುಲಗಪ್ಪ ಪೂಜಾರ, ಕುಷ್ಟಗಿ ಪಟ್ಟಣದ ಹುಲಿಗೆಮ್ಮ ದೇವಿಯ ಆರಾಧಕರು ಮತ್ತು ಮನೆತನದವರಾದ ಭರಮಪ್ಪ ಚೌಡ್ಕಿ ಹಾಗೂ ಕುಷ್ಟಗಿ ಪಟ್ಟಣದ ಮಾಹಾದೇವಪ್ಪ ಬಡಿಗೇರ ಇವರ ನೇತೃತ್ವದಲ್ಲಿ ವಿವಿಧ ಪೂಜೆಗಳೊಂದಿಗೆ ಶ್ರೀ ಹುಲಿಗೆಮ್ಮ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.

ಮೂರ್ತಿ ಪ್ರತಿಷ್ಠಾಪನೆ ಮಾಡಿದ ನಂತರ ಮಾಹಾ ಮಂಗಳಾರತಿ ಅಗ್ನಿಕುಂಡವನ್ನು ಸ್ಪರ್ಶಿಸಿ ದೇವಿಯ ಸನ್ನಿದಾನಕ್ಕೆ ಭಕ್ತಿ ಸಮರ್ಪಿಸಿದರು.

ಶಾಖಾಪೂರ ರಸ್ತೆಯ ಕಾಳಿಕಾದೇವಿ ದೇವಸ್ಥಾನದಲ್ಲಿ ಶ್ರೀ ಹುಲಿಗೆಮ್ಮ ದೇವಿ ಗೋಪುರದ ಕಳಸಕ್ಕೆ ವಿಶೇಷ ಪೂಜೆ ಸಲ್ಲಿಸಿ ಡೊಳ್ಳು ಕುಣಿತದೊಂದಿಗೆ ಅಕ್ಕ ಸುಮಂಗಲಿಯರಿಂದ ಕುಂಭ ಮತ್ತು ಕಳಸದೊಂದಿಗೆ ಶ್ರೀದೇವಿ ಸನ್ನಿದಾನದ ವರಗೆ ಮೇರವಣಿಗೆಯನ್ನು ಕರೆತಂದು ಮಾಹಾ ಮಂಗಳಾರತಿಯೊಂದಿಗೆ ಸರ್ವಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸಲಾಯಿತು.

ಶ್ರೀ ಹುಲಿಗೆಮ್ಮ ದೇವಿಯ ಕಮಿಟಿಯವರಾದ ಸಂಗಮೇಶ ಸಿಂಗಾಡಿ, ಹಿರೇವಂಕಲಕುಂಟಿ ಪಿ.ಜಿ.ಬಿ ವ್ಯವಸ್ಥಾಪಕ ವೆಂಕಟೇಶ, ದುರಗಪ್ಪ ಚೂರಿ, ನಾಗಪ್ಪ ಚೂರಿ,ಹನಮಂತ ವಡಗೇರಿ, ಹನಮಂತಪ್ಪ ಕೋಳೂರ, ಮಲ್ಲನಗೌಡ ಮಾಲಿ ಪಾಟೀಲ, ಶರಣಗೌಡ ಹಳೇಗೌಡ್ರ, ಸಂಗಪ್ಪ ನಾಗೂರು, ಪವಾಡೆಪ್ಪ ಚೌಡ್ಕಿ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.


Gadi Kannadiga

Leave a Reply