This is the title of the web page
This is the title of the web page

Please assign a menu to the primary menu location under menu

Local News

ಪೌರಾಣಿಕ ಹಾಗೂ ಬಯಲಾಟೋತ್ಸವ ಏಪ್ರಿಲ್ ೧೫ ಮತ್ತು ೧೭ ರಂದು


ಬೆಳಗಾವಿ,ಏ.೧೨: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶನಾಲಯ ಬೆಂಗಳೂರು, ಎಂ.ಕೆ.ಹುಬ್ಬಳ್ಳಿಯ ಕರ್ನಾಟಕ ಸರ್ವ ಕಲಾವಿದರ ಹಿತ ರಕ್ಷಣಾ ಸಂಘದ ಸಹಯೋಗದ ಸಾಮಾನ್ಯ ಯೋಜನೆಯಡಿಯಲ್ಲಿ ಏಪ್ರಿಲ್ ೧೫ ಮತ್ತು ೧೭ ರಂದು ಖಾನಾಪುರ ತಾಲೂಕಿನ ದೇವಲತ್ತಿ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನ ಆವರಣದಲ್ಲಿ ಪೌರಾಣಿಕ ಹಾಗೂ ಬಯಲಾಟೋತ್ಸವ ಕಾರ್ಯಕ್ರಮ ನಡೆಯಲಿದೆ.
ಕೆ.ಕೆ.ಕೊಪ್ಪದ ಶ್ರೀ ಭಗಳಂಬಾ ದೇವಿ ಕಲಾವಿದರ ಸಂಘ ಇವರ ಕಲಾತಂಡದಿಂದ ಏಪ್ರಿಲ್ ೧೫ ರಂದು ರಾತ್ರಿ ೧೦.೩೦ ಗಂಟೆಗೆ ಜಗಜ್ಯೋತಿ ಶ್ರೀ ಬಸವೇಶ್ವರ ಪೌರಣಿಕ ನಾಟಕ ಪ್ರದರ್ಶನಗೊಳ್ಳುವುದು.
ಹಿರೇಮಠ ದೇವಲತ್ತಿ ಶ್ರೀ ವೇ.ಮೂ.ಸಿದ್ದಯ್ಯಾ ಸ್ವಾಮಿಗಳು ದಿವ್ಯ ಸಾನಿಧ್ಯವನ್ನು, ದೇವಲತ್ತಿ ಜಾತ್ರಾ ಕಮಿಟಿಯ ಅಧ್ಯಕ್ಷರಾದ ಕಲ್ಲಪ್ಪಾ ಬಾಳಪ್ಪಾ ಅಗಸಿಮನಿ ಅವರು ಅಧ್ಯಕ್ಷತೆಯನ್ನು ವಹಿಸುವರು. ಖಾನಾಪೂರ ಶಾಸಕರಾದ ಡಾ.ಅಂಜಲಿ ಹೇ. ನಿಂಬಾಳಕರ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಅವರು ಉಪಸ್ಥಿತಿ ಇರುವರು.
ಖಾನಾಪೂರ ಪೊಲೀಸ್ ಠಾಣೆಯ ಪಿ.ಎಸ್.ಐ ಯಾದ ಶರಣೇಶ ಜಾಲಹಳ್ಳಿ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸುವರು. ನಿವೃತ್ತ ಗುರುಗಳಾದ ಬಸನಗೌಡ ಪಾಟೀಲ, ಎಂ.ಎಫ್.ಇರಗಾರ, ಗ್ರಾಮ ಹಿರಿಯರಾದ ಬಾಳಾರಾಮ ಶಿಮಾನಗೌಡ್ರ, ರುದ್ರಪ್ಪಾ ಕಲಾರಕೊಪ್ಪ, ಜಾತ್ರಾ ಉತ್ಸವ ಕಮೀಟಿಯ ಕಾರ್ಯದರ್ಶಿಯಾದ ಜಯವಂತ ಅ. ನಿಡಗಲಕರ, ಸದಸ್ಯರಾದ ಶಂಕರ ಟಕ್ಕೇಕರ, ಸಿದ್ದಪ್ಪಾ ರಾ. ದೇಶನೂರ, ಯಲ್ಲಪ್ಪ ರು. ಚಲವಾದಿ ಹಾಗೂ ಗ್ರಾಮದ ಹಿರಿಯರಾದ ಸುರೇಶ ಚ. ಉಪ್ಪಶಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಗುಡ್ಡೇನಟ್ಟಿಯ ದೊಡ್ಡಾಟ, ಬಾಬು ಕರೇಪ್ಪ ಜಿನ್ನವಗೊಳ ಇವರ ಕಲಾ ತಂಡದಿಂದ ಏಪ್ರಿಲ್ ೧೭ ರಂದು ರಾತ್ರಿ ೭ ಗಂಟೆಗೆ ಭೀರ್ಮಾರ್ಜುನ ಕಾಳಗ ನಾಟಕ ಪ್ರದರ್ಶನಗೊಳ್ಳುವುದು. ಅದೇ ದಿನ ರಾತ್ರಿ ೧೦ ಗಂಟೆಗೆ ಹಿರೇ ಬುದುನೂರಿನ ಬಯಲಾಟ, ಯಲ್ಲಪ್ಪ ಸ.ನಾಯ್ಕರ ಇವರ ಕಲಾ ತಂಡದಿಂದ ಶ್ರೀ ಕೃಷ್ಣ ಪಾರಿಜಾತ ಪ್ರದರ್ಶನಗೊಳ್ಳುವುದು.
ಪಾರಿಶ್ವಾಡದ ಶ್ರೀ ಶಾಂಡಿಲೇಶ್ವರ ಮಠದ ಷ.ಬ್ರ.ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು, ಬೆಳಗಾವಿ ಕ.ರ.ವೆ ಜಿಲ್ಲಾಧ್ತಕ್ಷರಾದ ದೀಪಕ ಗುಡಗನಟ್ಟಿ ಅವರು ಅಧ್ಯಕ್ಷತೆ ವಹಿಸುವರು. ಜಾತ್ರಾ ಉತ್ಸವ ಕಮೀಟಿಯ ಅಧ್ಯಕ್ಷರಾದ ಕಲ್ಲಪ್ಪಾ ಬಾ. ಅಗನಿಮನಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು.
ಬೆಳಗಾವಿ ಕ.ರ.ವೇ.ಜಿಲ್ಲಾಸಹ ಕಾರ್ಯದರ್ಶಿ ದಶರಥ ಬನೋಶಿ, ಖಾನಾಪೂರ ಕ.ರ.ವೇ ಅಧ್ಯಕ್ಷರಾದ ಆರೋಗ್ಯಪ್ಪಾ ಪಾದನಕಟ್ಟಿ, ಖಾನಾಪೂರ ಕ.ರ.ವೇ. ಉಪಾಧ್ಯಕ್ಷರಾದ ಭರತೇಶ ಜೋಳದ, ಜಯವಂತ ನಿಡಲಕರ, ಪ್ರಧಾನ ಕಾರ್ಯದರ್ಶಿಯಾದ ವಿಠ್ಠಲ ಹಿಂಡಲಕರ, ದೇವಲತ್ತಿಯ ಬಸವರಾಜ ತಳವಾರ, ಪಾರಿಶ್ವಾಡದ ಪಿ.ಕೆ.ಪಿ.ಎಸ್ ಸದಸ್ಯರಾದ ರಾಯಪ್ಪಾ ಚಲವಾದಿ, ಗ್ರಾಮ ಹಿರಿಯರಾದ ಶಂಕರಗೌಡ ಪಾಟೀಲ, ಸಮಾಜ ಸೇವಕರಾದ ನಿರುಪಾದ ಕಾಂಬಳೆ, ಖಾನಾಪೂರ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಪ್ರಕಾಶ ಬೈಲೂರಕರ, ಚಾಂಪಗಾವ ಗ್ರಾ.ಪಂ. ಉಪಾಧ್ಯಕ್ಷರಾದ ಮಾರುತಿ ಚೋಪಡೆ ಅವರು.
ದೇವಲತ್ತಿ ಜಾತ್ರಾ ಉತ್ಸವ ಕಮೀಟಿಯ ಸದಸ್ಯರಾದ ಮಹಾದೇವ ಬರಗೂಕರ, ಸದಾನಂದ ನಾ. ಇಟಗಿ, ಅರ್ಜುನ ಬೊಮ್ಮನ್ನವರ, ಖಜಾಂಜಿಯಾದ ಮಹಾಬಲೇಶ್ವರ ನಿಡಗಲಕರ, ಖಾನಾಪೂರದ ವಕೀಲರಾದ ಆರ್.ಎನ್.ಪಾಟೀಲ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.


Gadi Kannadiga

Leave a Reply