ಕವಿ ಡಾ, ಜಿನದತ್ತ ದೇಸಾಯಿಯವರ ಸಾಹಿತ್ಯ ಚಿಂತನೆ
ಬೆಳಗಾವಿ ೧-ನಗರದ ಭರತೇಶ ಶಿಕ್ಷಣ ಸಂಸ್ಥೆಯವರು ಖ್ಯಾತ ಕವಿ, ಸಾಹಿತಿಗಳಾದ ಡಾ. ಜಿನದತ್ತ ದೇಸಾಯಿಯವರ ೯೦ ನೆಯ ಜನ್ಮದಿನಾಚರಣೆ ಪ್ರಯುಕ್ತ ಡಾ. ಜಿನದತ್ತ ದೇಸಾಯಿಯವರ ಸಾಹಿತ್ಯ ಚಿಂತನೆ ಕಾರ್ಯಕ್ರಮವನ್ನು ಇದೇ ದಿ. ೫ ಮಂಗಳವಾರದಂದು ಸಾ. ೪ ಗಂಟೆಗೆ ಭರತೇಶ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯರಾದ ಡಾ. ಬಸವರಾಜ ಜಗಜಂಪಿಯವರು ವಹಿಸಲಿದ್ದಾರೆ. ‘ಜಿನದತ್ತ ದೇಸಾಯಿಯವರ ಸಾಹಿತ್ಯದಲ್ಲಿ ಸಮಾಜಮುಖಿ ಚಿಂತನೆ’ವಿಷಯ ಕುರಿತಂತೆ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಬಾಳಣ್ಣಾ ಸೀಗೀಹಳ್ಳಿ ಮಾತನಾಡಲಿದ್ದಾರೆ. ‘ಜಿನದತ್ತ ದೇಸಾಯಿಯವರ ಸಾಹಿತ್ಯದಲ್ಲಿ ಅಂತರ್ಮುಖಿ ಚಿಂತನೆ’ ವಿಷಯ ಕುರಿತಂತೆ ಡಾ. ಗುರುದೇವಿ ಹುಲೆಪ್ಪನವರಮಠ ಹಾಗೂ ‘ಜಿನದತ್ತ ದೇಸಾಯಿಯವರ ಸಾಹಿತ್ಯದಲ್ಲಿ ನಿಸರ್ಗ ಚಿಂತನೆ’ ವಿಷಯವಾಗಿ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ರಾಮಕೃಷ್ಣ ಮರಾಠೆ ಮಾತನಾಡಲಿದ್ದಾರೆ.
ಭರತೇಶ ಶಿಕ್ಷಣ ಸಂಸ್ಥೆಯ ರಾಜೀವ ದೊಡ್ಡಣ್ಣವರ, ಶ್ರೀಪಾಲ ಖೇಮಲಾಪುರೆ, ಪ್ರಕಾಶ ಉಪಾಧ್ಯೆ, ಭೂಷಣ ಮಿರ್ಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಕವಿ ಡಾ, ಜಿನದತ್ತ ದೇಸಾಯಿಯವರ ಸಾಹಿತ್ಯ ಚಿಂತನೆ