This is the title of the web page
This is the title of the web page

Please assign a menu to the primary menu location under menu

Local NewsState

ಬಹುನಿರೀಕ್ಷಿತ ‘ಕೆಜಿಎಫ್​ ಚಾಪ್ಟರ್​-2’ ಬಿಡುಗಡೆ


ಬೆಳಗಾವಿ: ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್​ ಚಾಪ್ಟರ್​-2’ ಇಂದು ಬಿಡುಗಡೆಯಾಗಿದೆ. ಮಧ್ಯರಾತ್ರಿ 12 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಆರಂಭಗೊಂಡಿದ್ದು, ಎಲ್ಲೆಲ್ಲೂ ರಾಕಿ ಭಾಯ್ ಹವಾ ಜೋರಾಗಿದೆ.ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮ ಮನೆಮಾಡಿದ್ದು, ಥಿಯೇಟರ್‌ಗಳಲ್ಲಿ ಯಶ್‌ ಕಟೌಟ್‌, ಪೋಸ್ಟರ್‌ಗಳು ಗಮನಸೆಳೆಯುತ್ತಿವೆ.

ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಕೆಜಿಎಫ್​ ಚಾಪ್ಟರ್​-2 ಸಿನಿಮಾ ಬಿಡುಗಡೆಯಾಗಿದ್ದು, ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಬೆಂಗಳೂರಿನ ಊರ್ವಶಿ, ಮೈಸೂರಿನ ಡಿಸಿಆರ್‌ ಸೇರಿದಂತೆ ರಾಜ್ಯದ ಹಲವೆಡೆ ರಾತ್ರಿ 12 ಗಂಟೆಯಿಂದಲೇ ಮೊದಲ ಶೋ ಆರಂಭವಾಗಿದ್ದು, ಪ್ರೇಕ್ಷಕರು ಯಶ್‌ ನಟನೆಗೆ ಬಹುಪರಾಕ್‌ ಹಾಕಿದ್ದಾರೆ.

ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಮೊದಲ ಪ್ರದರ್ಶನ ಇಂದು ಬೆಳಗ್ಗೆ 4 ಹಾಗೂ 6 ಗಂಟೆಗೆ ಆರಂಭವಾಗಿದೆ. ಕೋವಿಡ್‌ ನಂತರ ದೊಡ್ಡ ಮಟ್ಟದ ಕ್ರೇಜ್‌ನಲ್ಲಿ ತೆರೆಗೆ ಬರುತ್ತಿರುವ ಪ್ಯಾನ್‌ ಇಂಡಿಯಾ ಚಿತ್ರಗಳ ಪೈಕಿ ಕೆಜಿಎಫ್​ ಚಾಪ್ಟರ್​-2 ಒಂದಾಗಿದೆ. ಅಲ್ಲದೆ, ಭಾರತದ ಅತಿ ದೊಡ್ಡ ಬಿಡುಗಡೆಯ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಕೆಜಿಎಫ್ ಚಾಪ್ಟರ್-2 ಪಾತ್ರವಾಗಿದೆ.


Gadi Kannadiga

Leave a Reply