This is the title of the web page
This is the title of the web page

Please assign a menu to the primary menu location under menu

Local News

ಬಡಜನರ ಸಮಸ್ಯೆಗೆ ಮುಖ್ಯ ಆಧ್ಯತೆ, “ಕಳಪೆ ಕಾಮಗಾರಿ ಆದರೆ ಮತ್ತೆ ಹೊಸ ಕೆಲಸ ಮಾಡಿಸುವೆ: ಅನೀಲ್ ಬೆನಕೆ


ಬೆಳಗಾವಿ: ಮಂಗಳವಾರ ದಿನಾಂಕ 26 ಏಪ್ರಿಲ್ 22 ರಂದು, ಶಾಸಕ ಅನಿಲ ಬೆನಕೆ ಅವರು ತಮ್ಮ ಉತ್ತರ ಮತಕ್ಷೇತ್ರದ ವಿವಿಧ ಕಡೆಗಳಲ್ಲಿ ಮೂಲಸೌಕರ್ಯಗಳ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ಈ ವೇಳೆ ಮಾದ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು ಸುಮಾರು 3ಕೋಟಿ ವೆಚ್ಚದಲ್ಲಿ ರುಕ್ಮಿಣಿ ನಗರ, ಕಾಳಿ ಅಂಬ್ರಾ, ಮತ್ತು ಅಲಾರ್ವಾಡ್ ಗ್ರಾಮದ ಏರಿಯಾಗಳಲ್ಲಿ ಮೂಲಸೌಕರ್ಯ ಕಾಮಗಾರಿಗೆ ಚಾಲನೆ ನೀಡಿದ್ದು, ಈ ಪ್ರದೇಶಗಳು ಪರಿಶಿಷ್ಟ ಸಮುದಾಯಕ್ಕೆ ಒಳಪಟ್ಟಿದ್ದು, ಸಮಾಜ ಕಲ್ಯಾಣ ಇಲಾಖೆಯ ಸಹಯೋಗವು ಈ ಕಾಮಗಾರಿಯಲ್ಲಿದೆ ಎಂದರು.

ಇದೆ ವೇಳೆ ಬುಡಾ ಮಂಡಳಿಯಿಂದ 10 ಕೋಟಿಯ ಕೆಲಸ ಬೇರೆ ಬೇರೆ ಕಡೆ ನಡೆಯುತ್ತಿದೆ ಎಂದರು, ಕೆಲಸ ಮಾಡುವ ಮುಂಚೆ ಸರ್ವೇ ಮಾಡಿ, ಎಲ್ಲಿ ಅವಶ್ಯಕತೆ ಇದೆ, ಸಮಸ್ಯ ಇದೆ, ಬಡವರು ಇದ್ದಾರೆ ಅಂತಲ್ಲಿ ಹೊಸ ಕಾಮಗಾರಿ ಮಾಡಿಸಿ ಬಡವರಿಗೆ ಅನುಕೂಲ ಮಾಡ್ತಾ ಇದೇವಿ,

ಸ್ಮಾರ್ಟ್ ಸಿಟಿ ಕೆಲಸದಲ್ಲಿ ಕಳಪೆ ಕಾಮಗಾರಿ ಆಗಿದ್ದಲ್ಲಿ, ಅಧಿಕಾರಿಗಳಿಗೆ ಹಾಗೂ ಕಾಂಟ್ರಾಕ್ಟ್ ದಾರರಿಗೆ ಆದೇಶ ನೀಡಿ ಅಲ್ಲಿ ಮತ್ತೆ ಹೊಸ ಕೆಲಸ ಮಾಡುವೆ.. ಜನರಿಗೆ ಯಾವುದೇ ಮೋಸ ಆಗಬಾರದು ಎಂದರು.

ಕರೋಣಾ ನಾಲ್ಕನೇ ಅಲೆ ಬಗ್ಗೆ ಹೇಳಿದ ಅವರು, ಈಗಾಗಲೇ ಪ್ರಧಾನಿ ಅವರ ಆದೇಶದಂತೆ ಭಾರತದಾದ್ಯಂತ ಲಸಿಕಾ ಅಭಿಯಾನ ಆಗಿ ಎಲ್ಲರೂ ಲಸಿಕೆ ಪಡೆದಿದ್ದಾರೆ, ಆದರೂ ಸರ್ಕಾರದ ಆದೇಶ ಎಲ್ಲರೂ ಪಾಲಿಸಿ ಮಾಸ್ಕ್ ಸ್ಯಾನಿಟೈಜರ್ ಬಳಸಿ ಮುಂಜಾಗ್ರತೆ ವಹಿಸಬೇಕು ಎಂದರು.

ಇನ್ನು ಕ್ಷೇತ್ರದಲ್ಲಿ ಶಾಸಕನಾಗಿ ನಾನು ಮಾಡಿದ ಕೆಲಸ ತುಂಬಾ ತೃಪ್ತಿ ನೀಡಿದೆ, ಕೋವಿಡ, ಪ್ಲಡ್, ಇಂತಾ ಸನ್ನಿವೇಶದಲ್ಲೂ ನನ್ನ ಕ್ಷೇತ್ರದಲ್ಲಿ ಜನರ ಪರವಾಗಿ ಅಪೇಕ್ಷೆಗಿಂತಲೂ ಹೆಚ್ಚು ಕೆಲಸ ಮಾಡಿದ ತೃಪ್ತಿ ಇದೆ ಎಂದರು.. ಇನ್ನೂ ಉಳಿದ ಅವಧಿಯು ಕೂಡ ಇದೆ ರೀತಿ ಕ್ಷೇತ್ರದ ಅಭಿವೃದ್ದಿಗಾಗಿ ಕೆಲಸ ಮಾಡುವೆ ಎಂದರು..

ಈ ಸಂಧರ್ಭದಲ್ಲಿ ಕಾಳಿ ಅಂಬ್ರಾಯಿಯ ನಗರಸೇವಕರು, ಮುಖಂಡರು, ಸ್ಥಳೀಯರು ಉಪಸ್ಥಿತರಿದ್ದರು.


Gadi Kannadiga

Leave a Reply