This is the title of the web page
This is the title of the web page

Please assign a menu to the primary menu location under menu

Local News

ಸುಣಧೋಳಿ ಗ್ರಾಮದ ವ್ಯಕ್ತಿ ನಾಪತ್ತೆ


ವ್ಯಕ್ತಿ ನಾಪತ್ತೆ

ಬೆಳಗಾವಿ: ಮೂಡಲಗಿ ತಾಲೂಕಿನ ಸುಣಧೋಳ್ಳಿ ನಿವಾಸಿಯಾದ ಮಂಜುನಾಥ ಜಗದೀಶ ನರಗುಂದ ಇವರ ತಂದೆಯಾದ ಜಗದೀಶ ಬಸವಣೆಪ್ಪ ನರಗುಂದ ಏಪ್ರಿಲ್ 7 ರಂದು ಮುಂಜಾನೆ 9 ಗಂಟೆಗೆ ಗೋಕಾಕ ಹೋಗಿ ಬರುತ್ತೇನೆ ಎಂದು ಹೇಳಿ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾನೆ. ಫಿರ್ಯಾದೆದಾರರು ಸಂಬಂಧಿಗಳನ್ನು ವಿಚಾರಿಸಿದರು ಯಾವುದೇ ಸುಳಿವು ಇಲ್ಲದ ಕಾರಣ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾರೆ ಎಂದು ಕುಲಗೋಡ ಪೆÇಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಗದೀಶ ಬಸವಣೆಪ್ಪ ನರಗುಂದ 49 ವಯಸ್ಸಿವನರಾದಿದ್ದು, 5 ಪೂಟ 8 ಇಂಚ ಎತ್ತರ, ಸದೃಡ ಮೈಕಟ್ಟು, ದುಂಡು ಮುಖ, ಉದ್ದ ಮೂಗು, ಸಾದಾಗಪ್ಪು ಮೈ ಬಣ್ಣ, ತಿಳಿ ಹಸಿರಯ ಬಣ್ಣದ ಪುಲ್ ತೋಳಿನ ಶರ್ಟು, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ದರಿಸಿದ್ದು, ಕನ್ನಡ ಹಿಂದಿ ಭಾಷೆ ಮಾತನಾಡುತ್ತಾನೆ.
ಈ ಪ್ರಕಾರದ ವರ್ಣನೆ ಇರುವ ವ್ಯಕ್ತಿಯ ಬಗ್ಗೆ ಕಂಡುಬಂದಲ್ಲಿ ಕುಲಗೋಡ ಪೆÇಲೀಸ್ ಠಾಣೆ ದೂರವಾಣ ಸಂಖ್ಯೆ 08334-222233 ಹಾಗೂ ಮೊಬೈಲ್ ನಂಬರ್ 9480804069 ನ್ನು ಸಂಪರ್ಕಿಸಬಹುದು ಎಂದು ಕುಲಗೋಡ ಪೊಲೀಸ್ ಠಾಣೆಯ ಪಿ.ಎಸ್.ಎಚ್.ಓ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Leave a Reply