ಬೆಳಗಾವಿ : ಜಿಲ್ಲೆಯ ರೈಲ್ವೆ ಮೆಲ್ಸೇತುವೆಗೆ ಸಂಸದೆ ಮಂಗಳ ಅಂಗಡಿ ಭೇಟಿ ನೀಡಿ ಅಳವಡಿಸಲಾಗಿರುವ ಬೌಸ್ಟ್ರಿಂಗ್ ಸ್ಟ್ರಕ್ಚರಲ್ ಗರ್ಡರ್ ಅನ್ನು L C ನಂ 381 ರಲ್ಲಿನ ಕಾಮಗಾರಿಗಳನ್ನು ವೀಕ್ಷಿಸಿದರು.
ಕಾಮಗಾರಿಗಳ ಬಗ್ಗೆ ತಾಂತ್ರಿಕ ಮಾಹಿತಿಗಳನ್ನು ಸಂಸದೆ ಮಂಗಳ ಅಂಗಡಿಯವರಿಗೆ ರೈಲ್ವೆ ಅಧಿಕಾರಿಗಳು ನೀಡಿದ್ದರು.ಬಹುತೇಕ ಪೂರ್ಣಗೊಳ್ಳುವ ಕಾಮಗಾರಿ ಹಂತದಲ್ಲಿದೆ ಮೂರು ವಾರಗಳ ಅವಧಿಯಲ್ಲಿ ಕೆಲಸ ಕೊನೆಗೊಳ್ಳಲಿದೆ ಎಂದು ಸಂಸದೆ ಮಂಗಳ ಅಂಗಡಿ ತಿಳಿಸಿದರು.ಈ ಸಂದರ್ಭದಲ್ಲಿ ರೈಲ್ವೆ ಅಧಿಕಾರಿಗಳಾದ ಶ್ರೀ ವಿಷ್ಣು ಭೂಷಣ್ ಮತ್ತು ಅವರ ಸಿಬ್ಬಂದಿ ಉಪಸ್ಥಿತರಿದ್ದರು.