ಬೆಳಗಾವಿ: ಬೆಳಗಾವಿ ಸುಭಾಷ್ ಗಲ್ಲಿ ಮನೆ ನಂ.227 ಅನಗೋಳ ನಿವಾಸಿಯಾದ ಶೈಲೇಶ ಸುಭಾಷ್ ರಾವಣ್ಣವರ ಇವರ ಹೆಂಡತಿಯಾದ ಸಾವಿತ್ರಿ ಶೈಲೇಶ ರಾವಣ್ಣವರ ಮತ್ತು 6 ವರ್ಷದ ಮಗನಾದ ಶ್ಲೋಕ ಶೈಲೇಶ ರಾವಣ್ಣವರ ಕರೆದುಕೊಂದು ಜನವರಿ 21 ರಂದು ಸಂಜೆ 5 ಗಂಟೆಗೆ ಸಂಬAಧಿಕರ ಬರ್ತಡೇ ಇದೆ ಎಂದು ಹೇಳಿ ಕಾಣೆಯಾಗಿದ್ದಾರೆ. ಫಿರ್ಯಾದೆದಾರರು ಸಂಬAಧಿಗಳನ್ನು ವಿಚಾರಿಸಿದರು ಯಾವುದೇ ಸುಳಿವು ಇಲ್ಲದ ಕಾರಣ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾರೆ ಎಂದು ಬೆಳಗಾವಿ ತಿಲಕವಾಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಯಿಯ ವಯಸ್ಸು 26, 5.3 ಪೂಟ್ ಎತ್ತರ, ಸದೃಡ ಮೈ ಕಟ್ಟು, ಗೋಧಿ ಮೈ ಬಣ್ಣ, ಕಪ್ಪು ಕೂದಲು, ಎತ್ತರವಾದÀ ಹಣೆ, ಉದ್ದ ಮೂಗು, ತಿಳಿ ನೀಲಿ ಬಣ್ಣದ ಸೀರೆ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ಮಗುವಿನ ವಯಸ್ಸು 06, 3.4 ಪೂಟ್ ಎತ್ತರ, ಸದೃಡ ಮೈ ಕಟ್ಟು, ಗೋಧಿ ಮೈ ಬಣ್ಣ, ಕಪ್ಪು ಕೂದಲು, ಎತ್ತರವಾದÀ ಹಣೆ, ಉದ್ದ ಮೂಗು, ಕೆಂಪು ಬಣ್ಣದ ಶರ್ಟ ಮತ್ತು ಪ್ಯಾಂಟ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ.
ಸದರಿಯವರ ಬಗ್ಗೆ ಸುಳಿವು ಸಿಕ್ಕಲ್ಲಿ ಬೆಳಗಾವಿ ತಿಲಕವಾಡಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 0831-2405236, ಪೊಲೀಸ್ ಇನ್ಸಪೆಕ್ಟರ ತಿಲಕವಾಡಿ 9480804052, ಪಿ.ಎಸ್.ಐ(ಕಾ ಮತ್ತು ಸು) ತಿಲಕವಾಡಿ 9480804112 ಇವರನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ತಿಲಕವಾಡಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.